
ಮ್ಯಾಂಗೋಸ್ಟಿನ್- ಇದು ಭಾರೀ ಬೆಲೆ-ಬೇಡಿಕೆಯ ಹಣ್ಣು- ನಾವೆಲ್ಲಾ ಬೆಳೆಯಬಹುದು
ಮ್ಯಾಂಗೋಸ್ಟಿನ್ ಹಣ್ಣಿಗೆ ಇರುವ ಬೇಡಿಕೆಯನ್ನು ಗಮನಿಸಿ ಕೆಲವರು ದೊಡ್ಡ ಪ್ರಮಾಣದಲ್ಲಿ ಇದನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಇದು ಹೊಸ ಹಣ್ಣು ಅಲ್ಲ. ಬಹಳ ಹಿಂದಿನಿಂದಲೂ ಇತ್ತು. ಈ ಹಣ್ಣಿಗೆ ಕಿಲೋ ರೂ.200 ಕ್ಕಿಂತ ಮೇಲೆ ಇರುತ್ತದೆ. ವಿದೇಶದಿಂದ : Moluccas Island, ಇಂಡೀನೇಶಿಯಾದಿಂದ ಕೇರಳದವರೊಬ್ಬರು ಉನ್ನತ ವ್ಯಾಸಂಗಕ್ಕೆ ಹೋಗಿದ್ದಾಗ ಬೀಜ ತಂದು ಬೆಳೆಸಿದ ತರುವಾಯ (90 ವರ್ಷಕ್ಕೆ ಹಿಂದೆ) ಇಲ್ಲಿ ಪ್ರಾರಂಭವಾಯಿತು. ಇತ್ತೀಚೆಗೆ ಇದಕ್ಕೆ ಬೇಡಿಕೆ ಮತ್ತು ಬೆಲೆ ಹೆಚ್ಚಾದ ಕಾರಣ ಕೇರಳದಲ್ಲಿ ಇದನ್ನು ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ….