ಉತ್ತಮ ಭವಿಷ್ಯ ಇರುವ ಹಣ್ಣಿನ ಬೆಳೆ.
ಬಹಳಷ್ಟು ಸಾರಿ ನಾವು ವರ್ತಮಾನ ಕಾಲವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೃಷಿ ಮಾಡುತ್ತೇವೆ. ಆದರ ಬದಲಿಗೆ ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಬರಬಹುದು ಎಂದು ಯೋಚಿಸಿ ಅದಕ್ಕೆ ಅನುಗುಣವಾಗಿ ಕೃಷಿ ಮಾಡಿದರೆ ಆದು ಕ್ಲಿಕ್ ಆಗುತ್ತದೆ. ಪುನರ್ಪುಳಿ , ಕೋಕಂ ಎಂಬ ಈ ಹಣ್ಣಿನ ಸಸ್ಯವನ್ನು ಖಾಲಿ ಸ್ಥಳದಲ್ಲಿ ಬೆಳೆಸಿ….. ನಮ್ಮೆಲ್ಲರ ಚಿರ ಪರಿಚಿತ ಹಣ್ಣು ಪುನರ್ಪುಳಿ , ಮುರುಗನ ಹುಳಿ( Garcinia indica Choisy). ಇದು ದೇಶದ ಕರಾವಳಿಯ ಎಲ್ಲಾ ಕಡೆ ನೈಸರ್ಗಿಕವಾಗಿ ಬೆಳೆಯುತ್ತಿರುವ ಸಸ್ಯ. ಬಹುತೇಕ ಎಲ್ಲಾ…