ಉತ್ತಮ ಭವಿಷ್ಯ ಇರುವ ಹಣ್ಣಿನ ಬೆಳೆ.

by | Mar 20, 2020 | Fruit Crop (ಹಣ್ಣಿನ ಬೆಳೆ) | 0 comments

ಬಹಳಷ್ಟು ಸಾರಿ  ನಾವು ವರ್ತಮಾನ ಕಾಲವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೃಷಿ ಮಾಡುತ್ತೇವೆ. ಆದರ ಬದಲಿಗೆ  ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಬರಬಹುದು ಎಂದು ಯೋಚಿಸಿ ಅದಕ್ಕೆ ಅನುಗುಣವಾಗಿ ಕೃಷಿ ಮಾಡಿದರೆ ಆದು ಕ್ಲಿಕ್ ಆಗುತ್ತದೆ. ಪುನರ್ಪುಳಿ , ಕೋಕಂ ಎಂಬ ಈ ಹಣ್ಣಿನ ಸಸ್ಯವನ್ನು ಖಾಲಿ ಸ್ಥಳದಲ್ಲಿ ಬೆಳೆಸಿ…..

  • ನಮ್ಮೆಲ್ಲರ ಚಿರ ಪರಿಚಿತ ಹಣ್ಣು ಪುನರ್ಪುಳಿ , ಮುರುಗನ ಹುಳಿ( Garcinia indica Choisy).
  • ಇದು ದೇಶದ ಕರಾವಳಿಯ ಎಲ್ಲಾ ಕಡೆ  ನೈಸರ್ಗಿಕವಾಗಿ ಬೆಳೆಯುತ್ತಿರುವ ಸಸ್ಯ.
  • ಬಹುತೇಕ ಎಲ್ಲಾ ಕಡೆಯಲ್ಲೂ ಬೆಳೆಯುತ್ತದೆ.
  • ಇದರ ತಾಜಾ  ಹಣ್ಣಿಗೆ ಸುಮಾರಾಗಿ 25-30 ರೂ ಬೆಲೆ ಹಳ್ಳಿಗಳಲ್ಲಿ ಇದೆ.
  • ಒಂದು ಬೆಳೆದ  ಮರ ಸುಮಾರಾಗಿ ಒಂದು ಕ್ವಿಂಟಾಲಿಗೂ ಹೆಚ್ಚಿನ  ಹಣ್ಣನ್ನೂ ಕೊಡುತ್ತದೆ.
  • ಈ ಹಣ್ಣಿನ ನೈಸರ್ಗಿಕ ಮತ್ತು ಅದರ ಬೇಡಿಕೆಯ ಮುಂದೆ ಇತರ ಯಾವ ಹಣ್ಣೂ ಅಲ್ಲ..

ಭವಿಷ್ಯ ಉತ್ತಮವಾಗಿದೆ:

  • ಇದು ಒಂದು ಮರ ಮಸಾಲೆ ಎಂದು ಕರೆಯಬಹುದು.
  • ಇದರ ಹಣ್ಣಿನ ಸಿಪ್ಪೆಯಲ್ಲಿ ಬಣ್ಣದ ರಸ ಇದೆ. ಬೀಜದ ಹೊರ ಆವರಣದಲ್ಲಿ ಸಿಹಿ ಮತ್ತು ಹುಳಿ ರಸ ಇದೆ.
  • ಬೀಜದಲ್ಲಿ ಎಣ್ಣೆ ಇದೆ. ಮರದ ಎಲೆಯಲ್ಲಿ ಹುಳಿ ಅಂಶ ಇದೆ.
  • ಬೆಳೆದ ಮರ ಗಟ್ಟಿಮುಟ್ಟಾದ ನಾಟಾ ಕೂಡಾ ಆಗಿದೆ.

ಈ ಹಣ್ಣಿನ ರಸದಲ್ಲಿ ಇರುವ ನೈಸರ್ಗಿಕ ಬಣ್ಣ  ಇದನ್ನು ಬೇರೆ ಬೇರೆ  ಪಾನೀಯಗಳಲ್ಲಿ ಬಳಸುವಂತೆ ಮಾಡಿದೆ.

  • ಈ ಹಣ್ಣು ಯಾವುದೇ  ಕಲಬೆರಕೆ ಇಲ್ಲದೆ ರಕ್ಷಕ ಬಳಸದೆ ಸಂಗ್ರಹಿಸಿಡಬಹುದಾಗಿದೆ.
  • ಅನಾದಿ ಕಾಲದಿಂದಲೂ ಇದು ನಮ್ಮ ಪರಿಚಿತ ಸಸ್ಯವಾಗಿದ್ದು, ಹಿರಿಯರು ಇದರ ಹಣ್ಣಿನ ತೊಗಟೆ, ಎಲೆ ಗಳನ್ನು ಉಪಯೋಗಿಸುತ್ತಾ ಬಂದಿದ್ದಾರೆ.
  • ಇದು ನೈಸರ್ಗಿಕವಾಗಿ ಕಾಡು, ರಸ್ತೆ ಬದಿ ಬೀಜ ಬಿದ್ದು ಹುಟ್ಟಿ ಬೆಳೆದಿತ್ತು. ಇತ್ತೀಚಿನ ದಿನಗಳಲ್ಲಿ ಕೃಷಿ ವಿಸ್ತ್ರರಣೆಯ ನೆವದಲ್ಲಿ ಇದರ  ಅವನತಿ ಆಗುತ್ತಿದೆ.
  • ಇದನ್ನು ಅಳಿಯಲು ಬಿಡಬೇಡಿ. ಇದಕ್ಕೆ ಭಾರೀ ಮೌಲ್ಯ ಈಗಾಗಲೇ ಬಂದಿದೆ. ಇನ್ನೂ  ಹೆಚ್ಚು ಮೌಲ್ಯ ಬರಲಿದೆ
ಪುನರ್ಪುಳಿ ಅಥವಾ ಮುರುಗನ ಹಣ್ಣು .

ಪುನರ್ಪುಳಿ ಅಥವಾ ಮುರುಗನ ಹಣ್ಣು .

.

ಎಲ್ಲಿ ಬೆಳೆಸಬಹುದು:

  • ಕೋಕಂ ಅಥವಾ ಪುನರ್ಪುಳಿ ಹಣ್ಣಿನ ಸಸ್ಯ ನೇರವಾಗಿ ಬೆಳೆಯುವ ತಾಯಿ ಬೇರು ಉಳ್ಳ ಸಸ್ಯ.
  • ಇದನ್ನು ಅಲಂಕಾರಿಕ ಸಸ್ಯವಾಗಿ ಹೊಲದ ಬದುಗಳಲ್ಲಿ ಬೆಳೆಸಬಹುದು.
  • ತೋಟ  ಮುಂತಾದ ಪ್ರಮುಖ ಬೆಳೆಗಳಿರುವ  ಕಡೆ ನೆರಳಿನ ಸಸ್ಯವಾಗಿ ಬೆಳೆಯಬಹುದು.
  • ನಾಟಿ ಮಾಡಿ ಮೂರು ವರ್ಷದ  ತರುವಾಯ  ಹಣ್ಣು ಕೊಡಲು ಪ್ರಾರಂಭಿಸುತ್ತದೆ.
  • ಮರದ  ಆಯುಷ್ಯದ 50  ವರ್ಷಗಳಿಗೂ ಹೆಚ್ಚು.
  • ವರ್ಷಕ್ಕೊಮ್ಮೆ  ಬೇಸಿಗೆಯ ಮಾರ್ಚ್ ನಿಂದ ಮೇ ತನಕ ಹಣ್ಣುಗಳನ್ನು ಕೊಡುತ್ತದೆ.
  • ಬೇಡಿಕೆ ಇದ್ದಾಗ ಮಾರಾಟ ಮಾಡಬಹುದು.
  • ತಾವೇ ಸ್ವತಹ ಇದರ ಮೌಲ್ಯವರ್ದಿತ ಉತ್ಪನ್ನ ತಯಾರಿಸಬಹುದು.
  • ಇಷ್ಟಕ್ಕೂ ಇದು ಮುಖ್ಯ ಬೆಳೆಯಾಗಿ ಬೇಡ. ಮಿಶ್ರ ಬೆಳೆಯಾಗಿ ಇರಲಿ.

ಔಷದೀಯ ಗುಣ ಸಂಪನ್ನ:

  • ಈ ಹಣ್ಣಿನ ರಸಕ್ಕೆ ಕೊಬ್ಬನ್ನು ಕರಗಿಸುವ ಗುಣ ಇದೆ.
  • ಹಣ್ಣಿನ ತೊಗಟೆ ಮತ್ತು ಎಲೆಗಳು ಹುಣಸೆ ಹಣ್ಣಿಗೆ ಬದಲಿ ಹುಳಿಯಾಗಿಯೂ ಬಳಕೆ ಮಾಡಬಹುದು.
  • ಇದರ ಹಣ್ಣಿನಿಂದ ವೈನ್ ತಯಾರಿಸುತ್ತಾರೆ.
  • ಈ ವೈನ್ ಅತ್ಯಂತ ಆರೋಗ್ಯಕರ ಪೇಯವಾಗಿದೆ.
  • ಕೈ ಕಾಲು ಒಡೆಯುವಿಕೆ, ತುಟಿ ಒಡೆಯುವಿಕೆ ಮುಂತಾದ  ಚರ್ಮಸಂಬಂಧಿತ ಸಮಸ್ಯೆಗಳಿಗೆ  ಇದರ ಔಷಧಿ ತಯಾರಿಸಲಾಗುತ್ತದೆ.
  • ಬೀಜದ ಎಣ್ಣೆಯಿಂದ ಸಾಬೂನು ತಯಾರಿಸಲಾಗುತ್ತದೆ.
  • ಇದು ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣ ಪಡೆದ ಹಣ್ಣು. ಪಿತ್ತಜನಕಾಂಗದ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕ್ಯಾನ್ಸರ್ ಜೀವ ಕೋಶಗಳ ವಿರುದ್ದ  ಚಟುವಟಿಕೆಯನ್ನು  ಮಾಡುತ್ತದೆ.
  • ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ, ಅಸೆಟಾಸಿಡ್ , ಮಾಲಿಕ್ ಆಮ್ಲ, ಆಸ್ಕೋರ್ಬಿಕ್ ಆಮ್ಲ, ಹೈಡ್ರಾಕ್ಸಿಸಿಟ್ರಿಕಾಸಿಡ್ ಮತ್ತು  ಗಾರ್ಸಿನಾಲ್ ಇರುತ್ತದೆ.
  • ಆದ ಕಾರಣ ಇದನ್ನು ಒಂದು ಆಂಟೀ ಆಕ್ಸಿಡೆಂಟ್  ಹಣ್ಣು ಎಂದು ಹೇಳಬಹುದು.
  • ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು  ಉತ್ತಮ ಹಣ್ಣು.

ಆಯಾಸ ನಿವಾರಿಸುತ್ತದೆ.  ಜ್ವರ ಬಾರದಂತೆ ರಕ್ಷಕ. ಸ್ಥೂಲ ಕಾಯ ಸರಿಪಡಿಸುತ್ತದೆ. ಖಿನ್ನತೆ ಕಡಿಮೆ ಮಾಡುತ್ತದೆ. ಅಲ್ಜೈಮರ್ ಖಾಯಿಲೆಗೆ ಔಷಧಿ. ಸಂಧಿವಾತ ವಿರೋಧಿ, ಅಲರ್ಜಿ ವಿರೋಧಿಯಾಗಿಯೂ ಕೆಲಸ ಮಾಡುತ್ತದೆ.

ಕೋಕಂ ಹಣ್ಣು ಬಡವರ ಹಣ್ಣು ಎಂಬ ಹಣೆಪಟ್ಟಿಯಿಂದ ಹೊರ ಬಂದಾಗಿದೆ. ಈಗಾಗಲೇ ಇದರ ಆಯ್ಕೆ ತಳಿಗಳನ್ನೂ ಗುರುತಿಸಲಾಗಿದೆ. ಇದರ ಬಗ್ಗೆ ಬೇರೆ ಬೇರೆ ಸಂಶೋಧನಾ ಸಂಸ್ಥೆಗಳೂ ಸಂಶೋಧನೆಯಲ್ಲಿ ತೊಡಗಿಸಿ ಕೊಂಡಿವೆ. ಆದ ಕಾರಣ ಹಲಸಿನಂತೆ ಸದ್ಯವೇ ಇದಕ್ಕೆ ಭಾರೀ ಮೌಲ್ಯ ಬರಲಿದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!