ಚೆಂಡು ಹೂವು- ನೈಸರ್ಗಿಕ ಕೀಟ ನಾಶಕ ಸಸ್ಯ.
ಚೆಂಡು ಹೂವು ಈಗ ಒಂದು ಲಾಭದಾಯಕ ಪುಷ್ಪ ಬೆಳೆ. ಇದು ಮಣ್ಣಿಗೂ, ವಾತಾವರಣಕ್ಕೂ, ಒಳ್ಳೆಯ ಬೆಳೆ. ಇದನ್ನು ಪುಷ್ಪ ಬೆಳೆಯಾಗಿ ಬೆಳೆಸುವುದಲ್ಲದೆ ಹೊಲದಲ್ಲಿ ಅಲ್ಲಲ್ಲಿ ಬೆಳೆದರೆ ಮಣ್ಣಿನ ಕೆಲವು ಜಂತು ಹುಳಗಳೂ ನಿವಾರಣೆ ಆಗುತ್ತದೆ.ಮದುವೆ, ಸಮಾರಂಭಗಳಲ್ಲಿ ಚೆಂಡು ಹೂವಿನ ಅಲಂಕಾರ ಮಾಡಿದರೆ ಒಂದೆಡೆ ಸೊಗಸು.ಅದನ್ನು ಬಿಸಾಡಿದಲ್ಲಿ ಸೊಳ್ಳೆಗಳೂ ಉತ್ಪತ್ತಿಯಾಗಲಾರವು. ಅಷ್ಟು ಇದೆ ಅದರಲ್ಲಿ ವಿಷೇಶ ಗುಣಗಳು. ರಾಸಾಯನಿಕ ಕೀಟ ನಾಶಕಕ್ಕೆ ಬದಲಿ: ನಾವು ಎಲ್ಲದಕ್ಕೂ ರಾಸಾಯನಿಕ ಕೀಟನಾಶಕಗಳನ್ನೇ ಕೇಳುತ್ತೇವೆ. ನಮಗೆ ಸಲಹೆ ಕೊಡುವವರೂ ಅದನ್ನೇ ಸೂಚಿಸುತ್ತಾರೆ. ನಿಜವಾಗಿಯೂ…