15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!
ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ 15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು. ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯಿಂದ ಪಾರಾಗಬಹುದು. ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ. ಮಲ್ಚಿಂಗ್…