ಗಂಧಕ- ಬೆಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶ.
ಬಹಳ ರೈತರು ತಮ್ಮ ಅಡಿಕೆ ಮರದ ಗರಿಗಳು ಹಳದಿಯಾಗಿವೆ, ಮರದ ಸುಳಿಗಳು ಸಣ್ಣದಾಗುತ್ತಿವೆ. ತೆಂಗಿನ ಮರದಲ್ಲಿ ಕಾಯಿ ಆಗುತ್ತಿಲ್ಲ. ರಸ ಹೀರುವ ಕೀಟಗಳ ಸಮಸ್ಯೆ ಎಂದೆಲ್ಲಾ ಹೇಳುತ್ತಾರೆ. ಇದಕ್ಕೆ ಒಂದದು ಕಾರಣ ಗಂಧಕ ಎಂಬ ಅಗತ್ಯ ಪೋಷಕದ ಕೊರತೆ. ಬೆಳೆಗಳಲ್ಲಿ ಎಲೆಗಳು (Chlorosis)ಹಳದಿಯಾಗುವುದು, ಬೇರಿನ ಬೆಳವಣಿಗೆ ಕುಂಠಿತವಾಗುವುದು, ರೋಗ, ಕೀಟಗಳಿಗೆ ಬೇಗ ತುತ್ತಾಗುವುದು ಮುಂತಾದ ಕೆಲವು ಸಮಸ್ಯೆಗಳಿಗೆ ಗಂಧಕದ ಕೊರತೆಯು ಒಂದು ಕಾರಣ. ಪ್ರತೀಯೊಂದು ಬೆಳೆಯೂ ಗಂಧಕವನ್ನು ಅಪೇಕ್ಷಿಸುತ್ತದೆ. ರೈತರು ಸಲ್ಫೇಟ್ ರೂಪದ ಗೊಬ್ಬರವನ್ನು ಬೆಳೆಗಳಿಗೆ ಕೊಡುತ್ತಿದ್ದರೆ…