ಹಸುಗಳ ಆರೋಗ್ಯ ಮತ್ತು ನಾವು ಕೊಡುವ ಆಹಾರ.
ಈಗಲೇ ಕೆಲವು ವೈದ್ಯರು ಹಾಲು ಬಿಡಿ. ಆರೋಗ್ಯವಾಗಿರುತ್ತೀರಿ ಎನ್ನುತ್ತಿದ್ದಾರೆ. ಮುಂದೆ ಎಲ್ಲರೂ ಹೀಗೇ ಹೇಳುತ್ತಾ ಬಂದರೆ ಜೀವನೋಪಾಯಕ್ಕಾಗಿ ಹಸು ಸಾಕುವವರಿಗೆ ಭಾರೀ ನಷ್ಟವಾದೀತು. ಹಸುಗಳನ್ನು ಸಾಕುವಾಗ ಅದನ್ನು ಸಾಕಿದ ಖರ್ಚು ನಮಗೆ ಬರಬೇಕು. ಲಾಭ ಆಗಬೇಕು. ಈ ಉದ್ದೇಶದಲ್ಲಿ ನಾವು ಹಸುವೊಂದರ ಜೀವದೊಂದಿಗೆ ಆಟ ಆಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹಸುಗಳಿಗೆ ಬೇಕೋ ಬೇಡವೋ ನಮಗೂ ಗೊತ್ತಿಲ್ಲ. ಶಿಫಾರಸು ಮಾಡುವವರಿಗೂ ಗೊತ್ತಿಲ್ಲ. ಹೆಚ್ಚು ಹೆಚ್ಚು ಪಶು ಆಹಾರ, ಖನಿಜ ಮಿಶ್ರಣ ಹಾಗೆಯೇ ವಿಟಮಿನ್ ಮುಂತಾದವುಗಳನ್ನು ಕೊಟ್ಟು ಹಸುವಿನ ಆರೋಗ್ಯವನ್ನು…