ಅಡಿಕೆಮರಗಳಿಗೆ ಈಗ ಯಾಕೆ, ಮತ್ತು ಯಾವ ಗೊಬ್ಬರ ಹಾಕಬೇಕು?
ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಲು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳೆವಣಿಗೆಯಲ್ಲಿ ಒಂದು ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ…