ಮಳೆಗಾಲದಲ್ಲಿ ಬಾಳೆ ಬೆಳೆಗೆ ಬಾಧಿಸುವ ರೋಗದ ನಿವಾರಣೆ ಹೀಗೆ.
ಬಾಳೆಯ ಎಲೆ ಹಳದಿಯಾಗುವುದು, ಒಣಗುವುದು ಶಿಲೀಂದ್ರ ರೋಗ. ಇದಕ್ಕೆ ಮುನ್ನೆಚ್ಚರಿಕೆ ಅಗತ್ಯ. ಶಿಲೀಂದ್ರ ರೋಗಗಳು ಹೆಚ್ಚಾಗಿ ಮಳೆಗಾಲದಲ್ಲಿ ಬರುವುದು ಜಾಸ್ತಿ. ಅದು ಮಳೆಗಾಲ ಮುಗಿಯುವ ಸಮಯದಲ್ಲಿ ಬಂದರೆ ಮುಂದಿನ ಚಳಿಗಾಲ ಪ್ರಾರಂಭವಾಗುವಾಗ ನಮ್ಮ ಗಮನಕ್ಕೆ ಬರುತ್ತದೆ. ಕೆಲವೊಮ್ಮೆ ಇಬ್ಬನಿ ಬೀಳುವ ಸಮಯದಲ್ಲೂ ಬರುತ್ತದೆ. ಬಾಳೆಗೆ ಬರುವ ರೋಗಗಳಲ್ಲಿ ಬಂಚೀ ಟಾಪ್ ಒಂದನ್ನು ಹೊರತು ಪಡಿಸಿ ಉಳಿದ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ನಿಯಂತ್ರಣ ಮಾಡುವುದು ಸುಲಭ. . ಬಾಳೆಯಲ್ಲಿ ಚಳಿಗಾಲ ಪ್ರಾರಂಭವಾಗುವಾಗ ಮತ್ತು ಮಳೆಗಾಲ ಅಂತ್ಯದ ಸಮಯದಲ್ಲಿ…