ಭೂಲೋಕದ ಸಂಜೀವಿನಿ- ನೆಲ್ಲಿ ಕಾಯಿ
ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿ ಕೊಟ್ಟ ಔಷಧೀಯ ಸಸ್ಯವೇ ನೆಲ್ಲಿ. ಸಾಮಾನ್ಯವಾಗಿ ಇದನ್ನು ಆಮಲಕ, ಬೆಟ್ದದನೆಲ್ಲಿ, ಅಥವಾ ಇಂಡಿಯನ್ ಗೂಸ್ ಬೆರಿ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಮ್ಮ ಹಿರಿಯರಿಂದಲೂ ಉಪಯೋಗಿಸಿಕೊಂಡು ಬಂದಂತ ಔಷಧೀಯ ಮಹತ್ವದ ಹಣ್ಣಿನ ಬೆಳೆ. ಹೇಗೆ ಬೆಳೆಸಬಹುದು: ನೆಲ್ಲಿಯ ವಿಶೇಷತೆಯೆಂದರೆ ವಿವಿಧ ರೀತಿಯ ಮಣ್ಣುಗಳಲ್ಲೂ ಇದನ್ನು ಬೆಳೆಸಬಹುದು. ಹಾಗೆಯೆ ಒಣ ಪ್ರದೇಶಗಳಲ್ಲೂ, ಅತಿ ಹೆಚ್ಚು ಹಾಗು ಕಡಿಮೆ ಉಷ್ಟಾಂಶದಲ್ಲೂ, ಕ್ಷಾರೀಯ ಮಣ್ಣಿನಲ್ಲೂ ಬೆಳೆಸಬಹುದಾದ ಬೆಳೆ. ಕಸಿಗಿಡ ನೆಟ್ಟು ನಾಲ್ಕು ವರ್ಷಗಳ ಬಳಿಕ…