ಭೂಲೋಕದ ಸಂಜೀವಿನಿ- ನೆಲ್ಲಿ ಕಾಯಿ

ನೆಲ್ಲಿ ಕಾಯಿ

ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಪ್ರಕೃತಿ ಕೊಟ್ಟ  ಔಷಧೀಯ ಸಸ್ಯವೇ ನೆಲ್ಲಿ. ಸಾಮಾನ್ಯವಾಗಿ ಇದನ್ನು ಆಮಲಕ, ಬೆಟ್ದದನೆಲ್ಲಿ, ಅಥವಾ ಇಂಡಿಯನ್ ಗೂಸ್ ಬೆರಿ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಮ್ಮ ಹಿರಿಯರಿಂದಲೂ ಉಪಯೋಗಿಸಿಕೊಂಡು ಬಂದಂತ ಔಷಧೀಯ ಮಹತ್ವದ  ಹಣ್ಣಿನ ಬೆಳೆ.

ಹೇಗೆ ಬೆಳೆಸಬಹುದು:

 • ನೆಲ್ಲಿಯ ವಿಶೇಷತೆಯೆಂದರೆ ವಿವಿಧ ರೀತಿಯ ಮಣ್ಣುಗಳಲ್ಲೂ  ಇದನ್ನು ಬೆಳೆಸಬಹುದು.
 • ಹಾಗೆಯೆ ಒಣ ಪ್ರದೇಶಗಳಲ್ಲೂ, ಅತಿ ಹೆಚ್ಚು ಹಾಗು ಕಡಿಮೆ ಉಷ್ಟಾಂಶದಲ್ಲೂ, ಕ್ಷಾರೀಯ ಮಣ್ಣಿನಲ್ಲೂ ಬೆಳೆಸಬಹುದಾದ ಬೆಳೆ.
 • ಕಸಿಗಿಡ ನೆಟ್ಟು ನಾಲ್ಕು ವರ್ಷಗಳ ಬಳಿಕ ಇಳುವರಿ ಕೊಡಲು ಪ್ರಾರಂಭಿಸಿದರೆ,
 • 50 ವರ್ಷಳವರೆಗೂ ಕೊಡುತ್ತಿರುತ್ತದೆ.
 • ಒಂದು ನೆಲ್ಲಿಕಾಯಿ 60 -70 ಗ್ರಾಂ  ತೂಕವಿದ್ದು, ಪ್ರತಿ ಗಿಡ ಪ್ರಾರಂಭದ 3 -4 ವರ್ಷ ಸುಮಾರು 10 -15 ಕಿ.ಗ್ರಾಂ ಇಳುವರಿ ನೀಡುತ್ತದೆ.
 • 10 ರಿಂದ 12 ವರ್ಷಗಳ   ನಂತರ ಪ್ರತಿ ವರ್ಷ 50- 60 ಕಿ.ಗ್ರಾಮ್ ಇಳುವರಿಯನ್ನು ನಿರೀಕ್ಷಿಸಬಹುದು.

ಕರಾವಳಿಯಲ್ಲಿಯೂ ಉತ್ತಮವಾಗಿ ನೆಲ್ಲಿ ಬೆಳೆಯುತ್ತದೆ. ಸೂಕ್ತ ತಳಿ ಆಗತ್ಯ. ಕೃಷ್ಣಾ  ತಳಿ ಅಧಿಕ ಮಳೆಯಾಗುವ ಕಡೆ ಉತ್ತಮವಾಗಿ ಬರುತ್ತದೆ ಎಂಬುದು ಬ್ರಹ್ಮಾವರದ ಕೃಷಿ ಸಂಶೋಧಾನಾ ಕೇಂದ್ರ ಮತ್ತು ವೆಂಗುರ್ಲಾ ದ ಹಣ್ಣಿನ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಕಂಡು ಬಂದಿದೆ.

ನೆಲ್ಲಿ ಮರದಲ್ಲಿ ಇಳುವರಿ

ಪ್ರಯೋಜನಗಳು:

 • ಉರಿಯೂತವನ್ನು ಕಡಿಮೆ ಮಾಡುತ್ತದೆ.
 • ಮೆದುಳಿನ  ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರೊಂದಿಗೆ ವಯಸ್ಸಾಗುವುದನ್ನು ತಡೆಯುತ್ತದೆ .
 • ಕೂದಲಿನ ಬೆಳವಣಿಗೆಗೆ ಸಹಕಾರಿ ಜೊತೆಗೆ ಬಾಲನೆರೆಯನ್ನು ತಡೆಗಟ್ಟುತ್ತದೆ, ತಲೆಹೊಟ್ಟನ್ನು ನಿವಾರಿಸುತ್ತದೆ.

ಇದು ಒಳ್ಳೆಯ ಲಿವರ್ ಟಾನಿಕ್:

 • ಯಾರು ಸತತವಾಗಿ ಔಷಧಿಗಳನ್ನು ಹಾಗು ಮದ್ಯವನ್ನು  ತೆಗೆದುಕೊಳ್ಳುತ್ತಾರೊ,  ಅವರ ಲಿವರ್ ಕಾಲಕ್ರಮೇಣ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ.
 • ಇಂತವರ ಲಿವರನ್ನು ಶಕ್ತಿಯುತವಾಗಿ ಮಾಡುವುದಲ್ಲದೆ ವಿಷದಿಂದ ವಿಮುಕ್ತಗೊಳಿಸುತ್ತದೆ. ರಕ್ತ ಶುದ್ದಿಗೆ ಸಹಕಾರಿ.
 • ಮೊಡವೆ ಹದಿಹರೆಯದವರಲ್ಲಿ ತೀವ್ರ ರೀತಿಯ ಸಮಸ್ಯೆಯನ್ನು ತಂದೊಡ್ಡುತ್ತದೆ. ನೆಲ್ಲಿಯನ್ನು ಬೇವಿನ ಜೊತೆ ಮಿಶ್ರ ಮಾಡಿ ಸೇವಿಸಿದರೆ ಮೊಡವೆಗಳನ್ನು ನಿವಾರಿಸಬಹುದು.
 • ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
 • ಹಲ್ಲುಗಳನ್ನು ಸಧ್ರಢಗೊಳಿಸುವುದಲ್ಲದೆ ಬಾಯಿಯನ್ನು ಶುಚಿಗೊಳಿಸುತ್ತದೆ.
 • ಇದು ಉದರದ ಆಮ್ಲವನ್ನು ಸಮತೋಲನದಲ್ಲಿಡುವುದಲ್ಲದೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿ ಜೀವಸತ್ವವನ್ನು ಹೊಂದಿದೆ ನೆಲ್ಲಿ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ  ಹಾನಿಕಾರಕವಾದ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣವನ್ನು  ಹೊಂದಿದೆ.

 •  ನೆಲ್ಲಿಯ ಟಾನಿಕ್ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳಾದ ಕೆಮ್ಮು, ನೆಗಡಿ, ಗಂಟಲುನೋವು ಮತ್ತು ಸೈನುಸೈಟಿಸ್ ಗೆ ಉಪಕಾರಿ.
 • ಹ್ರದಯದ ಸ್ನಾಯುಗಳನ್ನು ಬಲಪಡಿಸುತ್ತದೆ.
 • ಸಿ ವಿಟಮಿನ್ ನ ಕೊರತೆಯಿಂದ ಕಾಣಿಸಿಕೊಳ್ಳುವ ಸ್ಕರ್ವಿ ರೋಗಕ್ಕೆ ನೆಲ್ಲಿ ರಾಮಬಾಣ.
 • ಒಸಡಿನಲ್ಲಿ ರಕ್ತ  ಮತ್ತು ಶರೀರದಲ್ಲಿ ಚುಕ್ಕೆಗಳನ್ನು ವಾಸಿ ಮಾಡುವಲ್ಲಿ ಸಹಕಾರಿ.

ಉಪಯೋಗಿಸುವ ರೀತಿ:

ನೆಲ್ಲಿ ಕಾಯಿ ಮಾರಾಟ ಮಾಡುವ ಬಗೆ

 • ತಾಜ ಹಣ್ಣು ಸೇವನೆ ಮೂತ್ರ ಮತ್ತು ಭೇದಿಯನ್ನು ತಡೆಯುತ್ತದೆ
 • ನೆಲ್ಲಿಯ ರಸ ಹಾಗು ಜೇನು ತುಪ್ಪದ ಸಮಪ್ರಮಾಣದ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಅಷ್ಟೆ ಅಲ್ಲದೆ ಬಾರದಂತೆ ತಡೆಯಬಹುದು.
 • ಓಣ ಚೂರ್ಣದ ಜೊತೆಗೂ ಜೇನುತುಪ್ಪದಲ್ಲಿಮಿಶ್ರಣ ಮಾಡಿ ಸೇವಿಸಬಹುದು.

ಆಯುರ್ವೇದದ ನೆಲ್ಲಿಯುಕ್ತ ಔಷಧಿಗಳು:

 • ಧಾತ್ರಿ ಲೇಹ, ಧಾತ್ರಿ ಅರಿಷ್ಟ, ಕುಮಾರ್ಯಸವ, ತ್ರಿಫಲ ಚೂರ್ಣ, ತ್ರಿಫಲ ಲೇಪಮ್, ತ್ರಿಫಲ ಗುಗ್ಗಲು, ತ್ರಿಫಲ ಘ್ರೀತಮ್, ಪಂಚತಿಕ ಗುಗ್ಗಲು ಘ್ರೀತಮ್,  ಇವುಗಳನ್ನು ಬೇರೆ ಬೇರೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ  ಉಪಯೊಗಿಸುತ್ತಾರೆ.

ನೆಲ್ಲಿಕಾಯಿ ಮೌಲ್ಯ ವರ್ಧನೆ

ನೆಲ್ಲಿಯ ವಿವಿಧ ಪಾಕಗಳು:

 • ಚ್ಯವನ ಪ್ರಾಶ್, ಬೆಟ್ಟ ನೆಲ್ಲಿಯ ಜ್ಯೂಸ್, ಜಾಮ್, ಸಿರಪ್, ಮುರಬ್ಬ, ಚೂರ್ಣ,ನೆಲ್ಲಿಕಾಯಿ ಮೊಸರಿನ ಚಟ್ನಿ, ಚಿತ್ರಾನ್ನ, ಭರ್ಫಿ, ಕ್ಯಾಂಡಿ, ಕೇಶತೈಲ, ಶಾಂಪೂ, ಫೇಸ್ ಪ್ಯಾಕ್, ಸಿಹಿ ಸುಪಾರಿ, ಉಪ್ಪಿನಕಾಯಿ ಮುಂತಾದ ಪಾಕ ಪೇಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಮನೆಯಲ್ಲಿಯೂ ಸಹ  ತಯಾರಿಸಬಹುದು.

ಇಷ್ಟೆಲ್ಲ ಪ್ರಯೋಜನಗಳಿರುವ ನೆಲ್ಲಿಯನ್ನು ಎಲ್ಲರೂ ತಮ್ಮ ತಮ್ಮ ಹಿತ್ತಲು ಅಥವಾ ಮನೆಯಂಗಳದಲ್ಲಿ ಯಾವುದೇ ಪ್ರಯಾಸವಿಲ್ಲದೆ ಬೆಳೆಸಿದರೆ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ ರಕ್ಷಣೆ ಸಾಧ್ಯ.  ಕೆಲವರು ಇದು ನಮ್ಮಲ್ಲಿ ಬೆಳೆಯುವುದಿಲ್ಲ ಎನ್ನುತ್ತಾರೆ.  ಹಾಗೆ ಇಲ್ಲ. ಕೆಲವು ತಳಿಗಳು ಕೆಲವು ಕಡೆಗೆ ಹೊಂದಿಕೊಳ್ಳುತ್ತವೆ.

Leave a Reply

Your email address will not be published. Required fields are marked *

error: Content is protected !!