ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಸತ್ವ ಉಳ್ಳ ಲಂಟಾನ ಸಸ್ಯ

ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ  ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ.

  • ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ.
  • ರೈತರೇ ಇವುಗಳನ್ನು ಅನವಶ್ಯಕ  ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ.

ಏನಿದೆ ಸತ್ವ:

  • ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ.
  • ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ.
  • ಇದರಿಂದ ಪೋಷಕಾಂಶಗಳ ಅಸಮತೋಲನ ಉಂಟಾಗುವುದು ಕಂಡು ಬರುತ್ತದೆ.
  • ಈ ಅಸಮತೋಲನವನ್ನು  ನಿವಾರಿಸಲು ಬಳಕೆ ಮಾಡುವ ಒಳಸುರಿಗಳಲ್ಲಿ ಯಾವ ಸತ್ವ ಅಡಗಿದೆ ಎಂಬುದನ್ನು ಅರಿತು ಅದನ್ನು ಬಳಕೆ ಮಾಡಬೇಕು.
  • ನಮ್ಮ ಸುತ್ತಮುತ್ತ ಇರುವ ವೈವಿಧ್ಯಮಯ ಸೊಪ್ಪು ಸದೆಗಳಲ್ಲಿ ಒಂದೊಂದರಲ್ಲಿ ಒಂದೊಂದು  ಪೋಷಕಾಂಶ, ಕೀಟ ವಿಕರ್ಷಕ ಗುಣ, ರೋಗ ನಿರೋಧಕ ಗುಣ ಇರುತ್ತದೆ.
  •  ಅದರಲ್ಲಿ ಒಂದು ಲಂಟಾನ ಸಸ್ಯ.
  •   ಇಂಥ ಸಸ್ಯಗಳ ಬಗ್ಗೆ ಕೆಲವನ್ನು ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿರುವ ರಾಷ್ಟ್ರೀಯ ಸಾವಯವ ಕೃಷಿ ಸಂಶೋಧಾನಾ ಸಂಸ್ಥೆ ಪರೀಕ್ಷೆ ಮಾಡಿದ ವರದಿ ಇದೆ.
  • ಅದನ್ನು ತಜ್ಞರಿಂದ ತಿಳಿದು ಕಾಂಪೋಸ್ಟು  ಅಥವಾ ಹಸುರೆಲೆ ಸೊಪ್ಪಾಗಿ ಬೆಳೆಗಳಿಗೆ ಬಳಕೆ ಮಾಡುವುದು ಸೂಕ್ತ.

ವಿಶೇಷ ಗುಣದ ಸಸ್ಯಗಳು:

  • ಲಂಟಾನಾ ಗಿಡ ಬಯಲು ಸೀಮೆಯ ಪ್ರದೇಶಗಳಲ್ಲಿ ಕಳೆ ಗಿಡವಾಗಿ ತುಂಬಾ ತೊಂದರೆಯಾಗುತ್ತದೆ  ಎಂದು ಹೆಚ್ಚಿನವರು ಬೆಂಕಿ ಹಾಕಿ ಸುಡುತ್ತಾರೆ.
  • ಇದರ ಬದಲಿಗೆ  ಇದನ್ನು ಕಡಿದು ಕಾಂಪೋಸ್ಟು ಮಾಡಬಹುದು.

ಲಂಟಾನ (Lantana)ಸೊಪ್ಪಿನಲ್ಲಿ ಪೆÇಟ್ಯಾಶಿಯಂ ಸತ್ವ ಉತ್ತಮವಾಗಿದೆ. ಚಿಕ್ಕಮಗಳೂರು, ಹಾಸನ, ಧಾರವಾಡ, ಕೋಲಾರ, ಮೈಸೂರು, ತುಮಕೂರು, ಬೀದರ್ ಮುಂತಾದೆಡೆ ಇದು ಹುಲುಸಾಗಿ ಬೆಳೆಯುತ್ತದೆ.

  • ಅದೇ ರೀತಿಯಲ್ಲಿ ನೆಕ್ಕಿ ಸೊಪ್ಪಿನಲ್ಲಿ (Nirgundi) ಕೀಟ ವಿಕರ್ಷಕ ಶಕ್ತಿ ಇದೆ.
  • ಕಾಸರಕನ ಸೊಪ್ಪಿನಲ್ಲಿ (Strynchnos nuxvomica) ಸತು ಮೆಗ್ನೀಶಿಯಂ ಸತ್ವ ಚೆನ್ನಾಗಿದೆ.
  • ಅಲ್ಲದೆ ಬೆಳೆಗಳಿಗೆ  ಉಂಟಾಗುವ ಜಂತು ಹುಳ (ನಮಟೋಡು) ತೊಂದರೆಯನ್ನೂ ಕಡಿಮೆ ಮಾಡುತ್ತದೆ.
  • ಗ್ಲೆರಿಸೀಡಿಯಾ, ಕ್ರೊಟೋಲೇರಿಯಾ ಸೊಪ್ಪಿನಲ್ಲಿ  ಸಾರಜನಕ ಅಂಶ ಹೇರಳವಾಗಿರುತ್ತದೆ.
  • ಹರಳು ಸಸ್ಯ( Castor) ಉತ್ತಮ ಮಣ್ಣು ಸಂಬಂಧಿತ ಜಂತು ಹುಳ ನಿಯಂತ್ರಕ ಸಸ್ಯ.
  •   ಎಕ್ಕದ ಗಿಡದಲ್ಲಿ( Calotropis gigantean) ರಂಜಕದ ಅಂಶ ಉತ್ತಮವಾಗಿರುತ್ತದೆ.
  •  ಇಟ್ಟೇವು ಸಸ್ಯವು (Clerodendrum infortunatum)  ಕುರುವಾಯಿ ಕೀಟದ ಹುಳ( ಲಾರ್ವೆ) ಯನ್ನು ನಾಶ ಮಾಡುವ ಗುಣ ಹೊಂದಿದೆ.
  • ಬೆಳೆಗಳಿಗೆ ಹಸುರೆಲೆ ಸೊಪ್ಪುಗಳನ್ನು ಬಳಕೆ ಮಾಡುವಾಗ ಬೇರೆ ಬೇರೆ ಸತ್ವಗಳನ್ನು ಹೊಂದಿರುವಂತದ್ದನ್ನು ಮಿಶ್ರಣ ಮಾಡಿ ಬಳಕೆ ಮಾಡಿದರೆ ಪೋಷಕಾಂಶದ ಸಮತೋಲನಕ್ಕೆ ಸಹಾಯಕವಾಗುತ್ತದೆ.

ಈ ಸಸ್ಯಗಳನ್ನು ಬೆಂಕಿ ಹಾಕಿ ಸುಡಬೇಡಿ. ಇದು ಕಳೆ ಗಿಡಗಳು ಆಗಿರಬಹುದು. ಇದನ್ನು ಬೆಳೆಗಳ ಬುಡಕ್ಕೆ ಹಸುರೆಲೆ  ಸೊಪ್ಪಾಗಿ ಬಳಕೆ  ಮಾಡಿದರೆ ಪೊಷಕಾಂಶಗಳ ಸಮತೋಲನ ಸುಲಭವಾಗುತ್ತದೆ.

ಔಷಧೀಯ ಗುಣ:

  • ಲಂಟಾನ ಒಂದು ಅಲಂಕಾರಿಕ ಹೂವಿನ ಸಸ್ಯವೂ ಹೌದು.
  • ಇದರಲ್ಲಿ ನೂರಾರು ವಿಧಗಳು ಇವೆ.
  • ಇದರ ವಾಸನೆ  ಕೀಟಗಳನ್ನು ದೂರ ಮಾಡುತ್ತವೆ.
  • ಕೆಲವು ಔಷಧಿಗಳಲ್ಲಿಯೂ ಇದನ್ನು ಬಳಕೆ ಮಾಡುತ್ತಾರೆ.
  • ಇದು ಶಿಲೀಂದ್ರ ನಿಯಂತ್ರಕವೂ ಹೌದು.  
  • ಪುರಾತನ ಕಾಲದಿಂದಲೂ ಇದನ್ನು ಔಷಧಿ ಸಸ್ಯವಾಗಿ ಬಳಸುತ್ತಿದ್ದರು.
  • ಇದರ ಬೇರು, ಎಲೆ, ಕಾಯಿಗಳು  ಕ್ಯಾನ್ಸರ್  ಚಿಕಿತ್ಸೆಯಲ್ಲಿ, ಚರ್ಮ ದ ತುರಿಕೆ,  ಕುಷ್ಟರೋಗ,  ರೇಬಿಸ್ ( ಹುಚ್ಚು ನಾಯಿ ಕಡಿತ) ಕೋಟ್ಲೆ( ಚಿಕನ್ ಪೋಕ್ಸ್)  ಕೋರ ( measles) ಅಸ್ತಮಾ , ಅಲ್ಸರ್ ಚಿಕಿತ್ಸೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ.

ಇಷ್ಟೆಲ್ಲಾ ಗುಣಗಳಿರುವ ಲಂಟಾನ ಗಿಡ ನಮ್ಮಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಇದನ್ನು ತಾತ್ಸಾರ ಮಾಡಬೇಡಿ.

Leave a Reply

Your email address will not be published. Required fields are marked *

error: Content is protected !!