
ಈಗ ಹೊಸ ಅಡಿಕೆ ತೋಟ ಮಾಡಬೇಡಿ- ಹಳೆ ತೋಟ ಚೆನ್ನಾಗಿ ಸಾಕಿ.
ಅಡಿಕೆಗೆ ದರ ಏರಿಕೆಯಾದಾಗ ರೈತರು ಮಾಡಬೇಕಾಗ ಕೆಲಸ ಇರುವ ತೋಟಕ್ಕೆ ಹೆಚ್ಚು ಆರೈಕೆ ಮಾಡಿ, ಅದರಲ್ಲಿ ಹೆಚ್ಚು ಫಲಪಡೆಯುವುದು ಹೊರತು ಹೊಸ ತೋಟ ಮಾಡುವುದಲ್ಲ. ಅಡಿಕೆ ಬೆಳೆಯುವ ಆಸಕ್ತರಿಗಾಗಿ ಕೊಟ್ಯಾಂತರ ಸಂಖ್ಯೆಯ ಅಡಿಕೆ ಸಸಿಗಳು ಕಾಯುತ್ತಿವೆ. ಅಡಿಕೆ ಬೆಳೆಗಾರರನ್ನು ಗುರಿಯಾಗಿಟ್ಟುಕೊಂಡು ನಾನಾನಮೂನೆಯ ಗೊಬ್ಬರ ತಯಾರಕರು ರಂಗಕ್ಕೆ ಇಳಿದಿದ್ದಾರೆ. ಬರೇ ಕರ್ನಾಟಕ ಮಾತ್ರವಲ್ಲ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಆಂದ್ರ ಪ್ರದೇಶಗಳ ರೈತರೂ ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಈ ವರ್ಷದಷ್ಟು ಬಿತ್ತನೆ ಅಡಿಕೆ ಈ ತನಕ ಮಾರಾಟ ಆಗಲಿಲ್ಲ,…