ಈಗ ಹೊಸ ಅಡಿಕೆ ತೋಟ ಮಾಡಬೇಡಿ- ಹಳೆ ತೋಟ ಚೆನ್ನಾಗಿ ಸಾಕಿ.

ಹೊಸ ಅಡಿಕೆ ತೋಟ

ಅಡಿಕೆಗೆ ದರ ಏರಿಕೆಯಾದಾಗ  ರೈತರು ಮಾಡಬೇಕಾಗ ಕೆಲಸ ಇರುವ ತೋಟಕ್ಕೆ ಹೆಚ್ಚು ಆರೈಕೆ ಮಾಡಿ, ಅದರಲ್ಲಿ ಹೆಚ್ಚು ಫಲಪಡೆಯುವುದು ಹೊರತು ಹೊಸ ತೋಟ ಮಾಡುವುದಲ್ಲ.
ಅಡಿಕೆ ಬೆಳೆಯುವ ಆಸಕ್ತರಿಗಾಗಿ ಕೊಟ್ಯಾಂತರ ಸಂಖ್ಯೆಯ ಅಡಿಕೆ ಸಸಿಗಳು ಕಾಯುತ್ತಿವೆ. ಅಡಿಕೆ ಬೆಳೆಗಾರರನ್ನು ಗುರಿಯಾಗಿಟ್ಟುಕೊಂಡು  ನಾನಾನಮೂನೆಯ ಗೊಬ್ಬರ ತಯಾರಕರು ರಂಗಕ್ಕೆ ಇಳಿದಿದ್ದಾರೆ. ಬರೇ ಕರ್ನಾಟಕ ಮಾತ್ರವಲ್ಲ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಆಂದ್ರ ಪ್ರದೇಶಗಳ ರೈತರೂ  ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಈ ವರ್ಷದಷ್ಟು ಬಿತ್ತನೆ ಅಡಿಕೆ ಈ ತನಕ ಮಾರಾಟ ಆಗಲಿಲ್ಲ, ನರ್ಸರಿಗಳಲ್ಲೂ ಈ ವರ್ಷದಷ್ಟು ಸಸ್ಯೋತ್ಪಾದನೆ ಹಿಂದೆಂದೂ ಆದದ್ದಿಲ್ಲ, ಇವೆಲ್ಲಾ ನೆಡಲು ಜಾಗ ಎಲ್ಲಿಂದ ತರುವುದು ತಿಳಿಯದಾಗಿದೆ.!

Take good care for existing garden
ಇರುವ ತೋಟಕ್ಕೆ ಹೆಚ್ಚು ಆರೈಕೆ ಮಾಡಿದರೆ ಅಧಿಕ ಫಸಲು ದೊರೆಯುತ್ತದೆ
  • ಅಡಿಕೆಗೆ ಇರುವ ಉಪಯೋಗ ಸಧ್ಯಕ್ಕೆ ತಿಂದು ಉಗುಳುವುದು ಮಾತ್ರ.
  • ಇದಕ್ಕೆ ಬೇಡಿಕೆ ಇಲ್ಲ ಎಂದಾಗುವುದಿಲ್ಲ.
  • ಕಾನೂನಿನಲ್ಲಿ ಇದನ್ನು ನಿಷೇಧ ಮಾಡುವುದಕ್ಕೂ ಆಗುವುದಿಲ್ಲ.
  • ಅದರೆ ಬೆಳೆ ಹೆಚ್ಚಾದದಂತೆ ತಿನ್ನುವವರು, ತಿನ್ನುವ ಪ್ರಮಾಣ ಹೆಚ್ಚಾಗುತ್ತಲೇ ಇರಬೇಕು.
  • ಹಾಗೆ ಆಗುತ್ತಾ ಇದ್ದರೆ ಬೆಲೆ ಬೀಳದು. ಇದು ಬೆಳೆಗಾರರ ಕೈಯಲ್ಲಿ ಇಲ್ಲ.
  • ಆದ ಕಾರಣ ಭಾರೀ ಬೆಳೆ ಪ್ರದೇಶದ ವಿಸ್ತರಣೆ ಬೇಡ.

ಏನು ಮಾಡಿದರೆ ಉತ್ತಮ:

  • ಅಡಿಕೆಗೆ ದರ ಏರುವ ಸಮಯದಲ್ಲಿ ಹೊಸ ಅಡಿಕೆ ತೋಟಮಾಡಲು ಮುಂದಾಗಬಾರದು.
  • ಹಳೆ ತೋಟದಲ್ಲಿ  ಹಿಂದಿಗಿಂತ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಮುತುವರ್ಜಿ ವಹಿಸಬೇಕು.
  • ಅದನ್ನು ನಿರ್ಲಕ್ಷ್ಯ ಮಾಡಬಾರದು. ಅಲ್ಲಿ ಸತ್ತ ಗಿಡಕ್ಕೆ ಬೇರೆ ಗಿಡ ನೆಡಿ.
  • ಸಾಕಷ್ಟು ಸಾವಯವ, ರಾಸಾಯನಿಕ ಗೊಬ್ಬರ ಕೊಟ್ಟು ನೀರಾವರಿ ಮಾಡಿ ಸಾಕಿ.
  • ಹೀಗೆ ಮಾಡಿದರೆ ಮುಂದಿನ ವರ್ಷಕ್ಕೇ ಫಸಲು.
  • ನಿಜವಾಗಿ ಅಡಿಕೆಗೆ ಬೆಲೆ ಏರುತ್ತದೆ ಎಂಬ ಸೂಚನೆ ಇದ್ದರೆ ಮಾಡಬೇಕಾದ ತಕ್ಷಣದ ಕೆಲಸ ಇರುವ ತೋಟಕ್ಕೆ 25-30 % ಹೆಚ್ಚಳವಾಗುತ್ತದೆ.
  • ಪ್ರತೀ ಮರದಲ್ಲಿ ಒಂದು ಗೊನೆ ಹೆಚ್ಚು ಅಡಿಕೆ ಆದರೂ 25% ಫಸಲು ಹೆಚ್ಚಳವಾದಂತೆ.
  • ಹೊಸ ತೋಟ ಮಾಡಿ ಅದು ಇಳುವರಿ ಪ್ರಾರಂಭವಾಗಲು ವರ್ಷ  4 ಬೇಕು.
  • ಆಗ ಬೆಲೆ ಹಾಗೆಯೇ ಇರುತ್ತದೆ ಎಂಬ ಖಾತ್ರಿ ಇಲ್ಲ. ಅದರ ಬದಲು ಇರುವುದನ್ನು ಗಟ್ಟಿ ಮಾಡಿಕೊಳ್ಳುವುದು ಉತ್ತಮ.
  • ಈ ಪರಿಸ್ಥಿತಿ ಹಿಂದೆಯೂ ಆಗಿದೆ. ಮುಂದೆಯೂ ಆಗುತ್ತದೆ.
  • ಹೊಸ ಅಡಿಕೆ ತೋಟ ಮಾಡಿ. ಯಾವಾಗ ಎಂದರೆ  ಅಡಿಕೆಗೆ ದರ ಬಿದ್ದಾಗ.
  • ಅಡಿಕೆ ಬೆಲೆ ಬಿದ್ದು, ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವಾಗ ಹೊಸತಾಗಿ ಅಡಿಕೆ ತೋಟ ಮಾಡಿದರೆ ಅದು ಫಲ ಬರುವಾಗ ಮತ್ತೆ ಲಾಟರಿ ಹೊಡೆಯುತ್ತದೆ.
  • ಹೊಸ ತೋಟಕ್ಕೆ ಸೂಕ್ತವಾದ ಜಾಗ ಇಲ್ಲದಿದ್ದರೆ ಅದರ ಫಲವೂ ಆಷ್ಟಕ್ಕಷ್ಟೇ

ಪೂರ್ತಿ ನೈರುತ್ಯ ಬಿಸಿಲು ಬೀಳುವ ಸ್ಥಳ

ಅಡಿಕೆ ಗಿಡ ನಂಬಿಕಾರ್ಹವಲ್ಲ:

ಬೀಜದ ದೋಷವನ್ನು ಯಾವುದೇ ರೀತಿಯಲ್ಲಿ ಸಸಿ ಬೆಳೆದ ನಂತರ ಸರಿಪಡಿಸಲಿಕ್ಕೆ ಆಗುವುದಿಲ್ಲ. ಅದನ್ನು ತೆಗೆದು ಬೇರೆ ನೆಡುವುದೇ ಪರಿಹಾರ. ಇಂತದ್ದಕ್ಕೆ ಅವಕಾಶ ಇರುವಾಗ ನಾವು ಯಾಕೆ ತಿಳಿದೂ ಅದಕ್ಕೆ ಬಲಿಯಾಗಬೇಕು?

  • ಕೆಲವು ಮೂಲಗಳ ಪ್ರಕಾರ ಈ ವರ್ಷ ಈ ತನಕ ಸಸಿ ಮಾಡದವರೂ ಸಹ ಸಸಿ ಮಾಡಿ, ಮಳೆಗಾಲಕ್ಕೆ ಕಾಯುತ್ತಿದ್ದಾರೆ.
  • ಬೀಜದ ಆಯ್ಕೆಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸಿದವರು ಬಹಳ ಕಡಿಮೆ.
  • ಅಡಿಕೆ ಹೇಗಿದ್ದರೂ ಆಗಬಹುದು, ಸಸಿ ಅದರೆ ಸಾಕು. ಲಕ್ ಚೇಂಜ್ ಆಗುವುದಾದರೆ ಈ ವರ್ಷ ಎಂದು ಎಲ್ಲರೂ ಸಿಕ್ಕ ಸಿಕ್ಕಲ್ಲಿಂದ ಬೀಜ ಆಯ್ಕೆ ಮಾಡಿ ನರ್ಸರಿ ಮಾಡಿದ್ದಾರೆ.
  • ಆದ ಕಾರಣ ಅಡಿಕೆ ತೋಟ ಮಾಡುವ ಉತ್ಸಾಹದಲ್ಲಿ ಕಳಪೆ ಗಿಡಗಳನ್ನು ತಂದು ಹೂಡಿದ ಬಂಡವಾಳ ಮತ್ತು ಸಮಯದ ವ್ಯಯ ಮಾಡಿಕೊಳ್ಳಬೇಡಿ.
  • ಈ ವರ್ಷ ಅಡಿಕೆ ಸಸಿಗೆ ಸುಮಾರಾಗಿ 25-30 ರೂ. ತನಕ ಆದರೂ ಅಚರಿ ಇಲ್ಲ.
  • ಹೆಚ್ಚಿನವರು ಬೀಜದ ಅಡಿಕೆಯನ್ನು ಒಂದು ಬೀಜಕ್ಕೆ 6-7 ರೂ. ಗಳಿಗೆ ಖರೀದಿ ಮಾಡಿ ಒಯ್ದಿದ್ದಾರೆ.
  • ಬೀಜದ ಅಡಿಕೆಯಲ್ಲಿ ಶೇ.10 ಕ್ಕಿಂತ ಹೆಚ್ಚು ಮೊಳಕೆ ಬಾರದೆ ನಷ್ಟವಾಗುತ್ತದೆ.
  • ಬಂದ ಮೊಳಕೆಗಳಲ್ಲೂ ಸುಮಾರು 5% ನಿರುಪಯುಕ್ತವಾಗಿರುತ್ತದೆ.
  • ಆದ ಕಾರಣ ಈ ವರ್ಷ ಬೆಲೆ ಬಹಳ ಹೆಚ್ಚಾಗಿರುತ್ತದೆ.
  • ಜೊತೆಗೆ ಅಡಿಕೆ ಬೆಲೆ ಹೆಚ್ಚಳವಾದ ಕಾರಣ ಕೆಲಸದವರ ಸಂಬಳ,ಗೊಬ್ಬರ, ಯಂತ್ರ ಸಾಧನಗಳ ಬಾಡಿಗೆ ಸಹ ಹೆಚ್ಚಾಗಿರುತ್ತದೆ.

new areca planting

ಸ್ವಲ್ಪ ತಾಳಿಕೊಂಡರೆ ಉತ್ತಮ:

  • ಮುಂದಿನ ಎರಡು ವರ್ಷಗಳಲ್ಲಿ ಅಡಿಕೆ ಬೆಲೆ ಒಮ್ಮೆ ಇಳಿಕೆಯಾಗಿಯೇ ತೀರುತ್ತದೆ.
  • ಈ ವರ್ಷ ಕರಾವಳಿಯ ಬಹಳ ಜನ ರಬ್ಬರ್ ಕಡಿದು ಅಡಿಕೆ ನೆಟ್ಟಿದ್ದಾರೆ.
  • ಇದೆಲ್ಲಾ ಫಸಲು ಬರಲಾರಂಭಿಸಿದಾಗ ಅಡಿಕೆಯ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ.
  • ರಬ್ಬರ್ ಕಡಿದು ಅಡಿಕೆ ಸಸಿ ನೆಟ್ಟಾಗಿದೆ. ಈಗ ಮತ್ತೆ ರಬ್ಬರ್ ಬೆಲೆ ಏರಿಕೆಯಾಗಲಾರಂಭಿಸಿದೆ.
  • ಸದ್ಯವೇ ರಬ್ಬರ್ ಬೆಲೆ ಏರಲಿದ್ದು, ಜನ ಮತ್ತೆ ರಬ್ಬರ್ ಹಾಕಲು ಮುಂದಾದರೂ ಅಚ್ಚರಿ ಇಲ್ಲ.

ಇವೆಲ್ಲಾ ಆಗು ಹೋಗುಗಳ ಮಧ್ಯೆ ಯಾವಾಗ ಅಡಿಕೆಗೆ ಬೆಲೆ ಕಡಿಮೆಯಾಗಿ ಎಲ್ಲವೂ ನಿಮ್ಮ ನಿರೀಕ್ಷೆಯಂತೆ ಕೈಗೆಟಕುತ್ತದೆಯೋ ಆಗ ಅಡಿಕೆಯ ಹೊಸ ತೋಟ ಮಾಡಿ. ಹಳೆ ತೋಟ ಕಡಿದು ಹೊಸ ಸಸಿ ನೆಟ್ಟರೂ ತೊಂದರೆ ಇಲ್ಲ. ಅಡಿಕೆಗೆ ಬೇಡಿಕೆ ಇದ್ಡೇ ಇರುತ್ತದೆ. ಒಮ್ಮೆ ದರ ಎರಿಕೆ ಮತ್ತೆ ಇಳಿಕೆ ಆಗುವುದು ಸಹಜ. ಇಳಿಯುವಾಗ ಹೊಸ ತೋಟ ಮಾಡುವುದು ಒಳ್ಳೆಯದು.

  • ಏರಿಕೆಯಾಗುವಾಗ ಇರುವುದನ್ನು ಚೆನ್ನಾಗಿ ಸಾಕಿ ತಕ್ಷಣ ಹೆಚ್ಚು ಆದಾಯ ಬರುವಂತೆ ಮಾಡಿಕೊಳ್ಳಿ.
  • ಇದು ಕೃಷಿಕರಾದವರು ಮಾಡಬೇಕಾದ ಬುದ್ದಿವಂತಿಕೆ.

ಕೃಷಿಕರಲ್ಲಿ ಬೆರಳೆಣಿಕೆಯ ಕೆಲವು ಜನ ಈ ಮನೊಸ್ಥಿತಿಯವರು ಇದ್ದಾರೆ. ಇವರು ತಮ್ಮ ಕೃಷಿ ವಿಸ್ತರಣೆಯನ್ನು ಇದೇ ರೀತಿ ಮಾಡುತ್ತಾರೆ. ಓರ್ವ ಕೃಷಿಕ ವನಿಲ್ಲಾ ಬೆಳೆ ನೆಲಕಚ್ಚಿದಾಗ ತಾನು ಉಚಿತವಾಗಿ ಬಳ್ಳಿ ತಂದು ನೆಟ್ಟಿದ್ದರು. ಮತ್ತೆ ವನಿಲ್ಲಾ ಗೆ ಬೇಡಿಕೆ ಬಂದಾಗ ಅವರಲ್ಲಿ ಬಳ್ಳಿ ಇತ್ತು. ಚಾನ್ಸ್ ಅವರ ಪಾಲಿನದಾಗಿತ್ತು. ಹಾಗೆಯೇ ಎಲ್ಲವೂ.

error: Content is protected !!