ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಅಡಿಕೆ

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ ದರ ಏರಬಹುದು ಎಂಬುದಾಗಿ ಸಾಗರ, ಸಿದ್ದಾಪುರದ ಕೆಲವು ವ್ಯಾಪಾರಿಗಳ ಅಭಿಪ್ರಾಯ.

ಕರಾವಳಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಕಾರ್ಕಳ ಮುಂತಾದ ಕಡೆ ಮಾರುಕಟ್ಟೆಗೆ ಅಡಿಕೆ ಬರುವುದೇ ಕಡಿಮೆಯಾಗಿದೆ. ಬೆಳೆಗಾರರಿಂದ ಚಿಲ್ಲರೆ ಚಿಲ್ಲರೆ  ಅಡಿಕೆ ಬರುತ್ತದೆ. ಖಾಸಗಿ ವರ್ತಕರು ಸಹ ಅಡಿಕೆಗೆ ಪರದಾಡುತ್ತಿದ್ದಾರೆ. ಎಲ್ಲರೂ ಸಲ್ಪ ಕಾಯುವ ದರ ಏರಿಕೆ ಆಗುತ್ತದೆ ಎಂದು ಅಡಿಕೆ ಕೊಡುತ್ತಿಲ್ಲ. ಖಾಸಗಿಯವರೂ ಸಹಕಾರಿಗಳಿಗೆ ಅಡಿಕೆ ಕೊಡುತ್ತಾರೆ. ಗಾರ್ಬ್ಲ್ ಮಾಡುವವರು ದಾಸ್ತಾನು ಇಟ್ಟುಕೊಂಡಿದ್ದಾರೆ. ಹಾಗಾಗಿ ಚಾಲಿಯ ದರ ಎಪ್ರೀಲ್ ನಿಂದ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಾ ಮೇ ಕೊನೆಗೆ 50,000 ತನಕವೂ ಏರಿಕೆ ಆಗಬಹುದು ಎಂಬ ಅಂದಾಜು ಇದೆ. ಆಮದು ಅಡಿಕೆ ಬರುತ್ತಿಲ್ಲ. ಹಾಗಾಗಿ ಸ್ಥಳೀಯ ಅಡಿಕೆಗೆ ಬೇಡಿಕೆ ಇದೆ. ಖಾಸಗಿಯವರು ಮಾರ್ಚ್ ಕೊನೆಗೆ ಸ್ವಲ್ಪ ದರ ಏರಿಸಿದ್ದಾರೆ.

ಉತ್ತಮ ಗುಣಮಟ್ಟದ ಕೊಯಿಲಿನ ಅಡಿಕೆ ಬರುವ ವರೆಗೂ ದರ ಏರಿಕೆ ಆಗಲಾರದು. ಅದು ಇನ್ನೇನು ಒಂದು ತಿಂಗಳ ಒಳಗೆ ಮಾರುಕಟ್ಟೆಗೆ  ಬಂದು ಮುಗಿದರೆ ನಂತರ ಗುಣ ಮಟ್ಟದ ಅಡಿಕೆಯೇ  ಬರಲಿದೆ.

ಕೆಂಪಡಿಕೆಯ ಸ್ಥಿತಿ;

 • ಕೆಂಪಡಿಕೆ ಧಾರಣೆ ಈ ವರ್ಷ ಸ್ಥಿರವಾಗಿ ಮುಂದುವರಿದಿರುವುದು ಬೆಳೆಗಾರರ ಚಾನ್ಸ್.
 • ಯಾವಾಗಲೂ ಈ ಸಮಯದಲ್ಲಿ  ಬೆಲೆ ಇಳಿಕೆಯಾಗುತ್ತದೆ. ಬೆಳೆಗಾರರು ಮಾರಾಟ ಮಾಡಿದ ಮೇಲೆ ಮತ್ತೆ ಏರಿಕೆಯಾಗುತ್ತದೆ.
 • ಈ ವರ್ಷ ಎರಡು ತಿಂಗಳಿನಿಂದ ದರ ಸ್ಥಿರವಾಗಿ ಮುಂದುವರಿಯುತ್ತಾ ಬಂದಿದೆ.
 • ಕೆಂಪಡಿಕೆಗೆ ಬೇಡಿಕೆ ಇದೆ. ಮಾರುಕಟ್ಟೆಗೆ ಕಳೆದ ವರ್ಷಕ್ಕಿಂತ ಕಡಿಮೆ ಅಡಿಕೆ ಬರುತ್ತಿದೆ. 
 • ಯಲ್ಲಾಪುರದಲ್ಲಿ ಇಂದು ರಾಶಿಗೆ  53,800 ತನಕ ಗರಿಷ್ಟ ಬೆಲೆ ಬಂದಿದೆ. ಸರಾಸರಿ 50,700, ಶಿರಸಿಯಲ್ಲಿ 47,700 ತನಕ  ಖರೀದಿಯಾಗಿದೆ.
 • ಅಡಿಕೆಯ ಅತೀ ದೊಡ್ದ ಮಾರುಕಟ್ಟೆಯಾದ  ಶಿವಮೊಗ್ಗದಲ್ಲಿ ಗರಿಷ್ಟ 46000 ಸರಾಸರಿ 45000 ಇತ್ತು.
 • ಚೆನ್ನಗಿರಿಯ 47,000 ತನಕ ದರ ನಿಗದಿಯಾಗಿದೆ. ಕೆಂಪಡಿಕೆಗೂ ಈ ವರ್ಷ ಬೇಡಿಕೆ ಚೆನ್ನಾಗಿದೆ.
 • ಒಂದು ತಿಂಗಳ ನಂತರ ಸ್ವಲ್ಪ ಬೆಲೆ ಏರಿಕೆಯಾಗುವ ಸಾಧ್ಯತೆಗಳು ಇವೆ.
 • ಬೆಳೆಗಾರರಲ್ಲಿ ಅಡಿಕೆ ಇದೆ. ಮಾರುಕಟ್ಟೆಗೆ ಬರುತ್ತಿಲ್ಲ.
 • ನಾಳೆಯಿಂದ (31-03-2022) ಕ್ಯಾಂಪ್ಕೋ ಅಡಿಕೆ ಎಪ್ರೀಲ್ 2 ರ ತನಕ ಅಡಿಕೆ ಖರೀದಿ ಇಲ್ಲದ ಕಾರಣ ಖಾಸಗಿಯವರು ಮಾತ್ರ ಖರೀದಿ.

ಇಂದು ಅಡಿಕೆ ಧಾರಣೆ:

ಬಿಳಿ ಅಡಿಕೆ 1

ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆ: ಕ್ವಿಂಟಾಲು.

 • ಮಂಗಳೂರು: ಹೊಸ ಚಾಲಿ: (ಕನಿಷ್ಟ) 27500,(ಗರಿಷ್ಟ) 44000, (ಸರಾಸರಿ) 42050
 • ಹಳೆ ಚಾಲಿ: 46000, 53000, 50000
 • ಪುತ್ತೂರು ಹೊಸ ಚಾಲಿ: 27500, 45000, 40000
 • ಹಳೆ ಚಾಲಿ: 46000, 53500, 49000
 • ಸುಳ್ಯ ಹೊಸ ಚಾಲಿ: 27500, 45000, 40000
 • ಹಳೆ ಚಾಲಿ: 46000, 53000, 50000
 • ಬಂಟ್ವಾಳ ಹೊಸ ಚಾಲಿ: 27500, 45000, 42000
 • ಹಳೆ ಚಾಲಿ: 46000, 53000, 49000
 • ಬೆಳ್ತಂಗಡಿ:ಹೊಸ ಚಾಲಿ: 29300, 43000, 40000
 • ಹಳೆ ಚಾಲಿ: 41300, 52500, 45000
 • ಕಾರ್ಕಳ: ಹೊಸ ಚಾಲಿ: 40000, 45000, 43000
 • ಹಳೆ ಚಾಲಿ: 46000, 53000, 50000
 • ಕುಂದಾಪುರ ಹೊಸ ಚಾಲಿ: 43500, 44500, 44000
 • ಹಳೆ ಚಾಲಿ: 51500, 52500, 52000
 • ಪಟೋರಾ: ಹಳೆಯದು:35000-44000
 • ಹೊಸತು:32000-34000
 • ಉಳ್ಳಿ: ಹಳೆಯದು:21000-25000
 •  ಹೊಸತು:20000-22000
 • ಕರಿಗೋಟು: ಹಳೆಯದು:20000-24500
 • ಹೊಸತು:20000-23000

ಕೆಂಪಡಿಕೆ ಧಾರಣೆ: ಕ್ವಿಂಟಾಲು.

 • ಚೆನ್ನಗಿರಿ: ರಾಶಿ:45599, 47319, 46004
 • ಭದ್ರಾವತಿ: ರಾಶಿ: 45200, 47499, 46014
 • ಹೊನ್ನಾಳಿ ರಾಶಿ: 46039, 46800, 46800
 • ಹೊಳಲ್ಕೆರೆ:ರಾಶಿ: 44129, 46300, 45900
 • ಚಿತ್ರದುರ್ಗ ರಾಶಿ: 45539, 46569, 46379
 • ಅಪಿ: 46000, 47029, 46859
 • ಬೆಟ್ಟೆ: 36629, 37099, 36885
 • ಶಿವಮೊಗ್ಗ ರಾಶಿ: 43169, 46000, 45590
 • ಸರಕು: 50069, 72500, 72500
 • ಬೆಟ್ಟೆ: 46699, 49240, 49240
 • ಗೊರಬಲು: 16210, 33339, 33159
 • ಶಿರಸಿ ರಾಶಿ: 25699, 48108, 46674
 • ಚಾಲಿ: 35099, 40608, 39060
 • ಬೆಟ್ಟೆ: 34619, 50099, 48890
 • ಯಲ್ಲಾಪುರ ರಾಶಿ: 46699, 53799, 50699
 • ಚಾಲಿ: 35969, 40699, 39520
 • ತಟ್ಟೆ ಬೆಟ್ಟೆ: 37499, 45890, 43690
 • ಸಿದ್ದಾಪುರ ರಾಶಿ: 44099, 47299, 46885
 • ಚಾಲಿ ಹಳೆಯದು: 43344, 45099, 44500
 • ಹೊಸ ಚಾಲಿ: 36529, 40509, 39600
 • ತಟ್ಟೆ ಬೆಟ್ಟೆ: 33609, 46899, 38899
 • ಸಾಗರ ರಾಶಿ: 44099, 47399, 46595
 • ಸಿಪ್ಪಗೋಟು: 16899, 22100, 21819
 • ಕೆಂಪು ಗೋಟು: 34199, 36699, 35699
 • ಚಾಲಿ: 36599, 38579, 37850
 • ಹೊಸನಗರ ರಾಶಿ: 44129, 47729, 47319
 • ಚಾಲಿ: 32699, 37739, 36899
 • ಕೆಂಪುಗೋಟು: 28469, 38999, 32395
 • ತೀರ್ಥಹಳ್ಳಿ ರಾಶಿ: 33169, 47999, 46799
 • ಸರಕು: 52169 -77630 – 69299
 • ದಾವಣಗೆರೆ ರಾಶಿ: 46083, 47109, 46680
 • ಗುಬ್ಬಿ ರಾಶಿ: 44500, 45000, 45000
 • ಕುಮಟಾ: ಹೊಸ ಚಾಲಿ: 36900, 40500, 40100
 • ಹಳೆ ಚಾಲಿ: 47472, 49000, 48690
 • ತುಮಕೂರು: ರಾಶಿ:45100- 46950-46500

ಬರ್ಮಾ ಮೂಲದ ಅಡಿಕೆ ಸ್ವಲ್ಪ ಪ್ರಮಾಣದಲ್ಲಿ ಆಮದು ಆಗಿದೆ ಎಂಬುಗಾಗಿ ವರದಿಗಳಿವೆ. ಆದರೆ ಸ್ಥಳೀಯ ಅಡಿಕೆಗೆ ಬೇಡಿಕೆ ಇದೆ. ಅಂಡರ್ ಬಿಲ್ ಹಾಕಿ ಆಮದು ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಆಮದು ಅಡಿಕೆಗೂ ಏನೂ ಕಡಿಮೆ ದರ ಇಲ್ಲ.

ಕಾಳುಮೆಣಸು ಧಾರಣೆ:

ಕರಿಮೆಣಸು ಉತ್ತಮ

ಒಂದೆಡೆ ಕೊಯಿಲಿನ ಸಮಯ. ಇನ್ನೊಂದೆಡೆ ಮಾರ್ಚ್ ಅಂತ್ಯ. ಕೊಚ್ಚಿ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ಕೊಳ್ಳುವ ಆರ್ಡರ್ ಸ್ವಲ್ಪ ಕಡಿಮೆಯಾದ ಕಾರಣ ಕರಿಮೆಣಸು ತುಸು ಇಳಿಕೆಯಾಗಿದೆ. ಕೊಯಿಲು ಮುಗಿಯುವ ಸಮಯಕ್ಕೆ ದರ 55,000-56,000 ತನಕ ತಲುಪಬಹುದು.ಈ ಹಿಂದೆ 70000-72,000 ಕ್ಕೆ ಏರಿದಂತೆ ಏರಬಹುದು ಎಂಬ ನಿರೀಕ್ಷೆ ಇಲ್ಲ. ಫಸಲು ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಹೊಸ ಬೆಳೆ ಮತ್ತು ಒಟ್ಟಾರೆ ಇಳುವರಿಯಿಂದ ಅಂಥಹ ಕೊರತೆ ಇಲ್ಲ.

ಇಂದು ಬೇರೆ ಬೇರೆ ಕಡೆ ಮೆಣಸು ಧಾರಣೆ: ಕಿಲೋ.

 • ಸಕಲೇಶಪುರ: Royal Traders, ಅಯದ್ದು  500.00 
 • ಸಕಲೇಶಪುರ :Gain Coffee ಅಯದ್ದು ,  490.00 
 • ಸಕಲೇಶಪುರ :Sathya Murthy, ಅಯ್ದದ್ದು,  515.00
 • ಸಕಲೇಶಪುರ :Sathya Murthy, ಆಯದ್ದು  495.00 
 • ಸಕಲೇಶಪುರ :S.K Traders, ಆಯದ್ದು,  500.00
 • ಸಕಲೇಶಪುರ :H.K.G & Bros-ಆಯದ್ದು,  500.00
 • ಸಕಲೇಶಪುರ :Nasir Traders ಆಯದ್ದು,  490.00 
 • ಸಕಲೇಶಪುರ -Sainath Cardamom, ಹೊಸತು.  500.00 
 • ಬಾಳುಪೇಟೆ :Geetha Coffee Trading, ಆಯದ್ದು  490.00
 • ಬಾಳುಪೇಟೆ:Coffee Age-ಆಯದ್ದು,  495.00 
 • ಮೂಡಿಗೆರೆ :Sha.M.Khimraj, ಆಯದ್ದು,  500.00 
 • ಮೂಡಿಗೆರೆ :Bhavarlal Jain, ಆಯದ್ದು,  505.00 
 • ಮೂಡಿಗೆರೆ :A1 Traders, ಆಯದ್ದು  505.00 
 • ಮೂಡಿಗೆರೆ :Harshika Traders-ಆಯದ್ದು,  500.00
 • ಮೂಡಿಗೆರೆ :A.M Traders-ಆಯದ್ದು,  500.00 
 • ಮೂಡಿಗೆರೆ :Hadhi Coffee, ಆಯದ್ದು,  500.00 
 • ಚಿಕ್ಕಮಗಳೂರು:Arihant Coffee, ಆಯದ್ದು,  495.00 
 • ಚಿಕ್ಕಮಗಳೂರು:Nirmal Commodities, ಆಯದ್ದು,  500.00 
 • ಚಿಕ್ಕಮಗಳೂರು:M.R Stancy G.C, ಆಯದ್ದು,  502.00 
 • ಚಿಕ್ಕಮಗಳೂರು:Kiran, ಆಯದ್ದು 500.00 
 • ಮಡಿಕೇರಿ:Kiran Commodities, ಆಯ್ದದ್ದು,   500.00 
 • ಕೊಡಗು ಸಿದ್ದಾಪುರ:Trust Spices ಆಯದ್ದು,  500.00 
 • ಗೋಣಿಕೊಪ್ಪ:Sri Maruthi, ಆಯದ್ದು,  495.00 
 • ಕಳಸ :PIB Traders, ಆಯದ್ದು  505.00 
 • ಕಾರ್ಕಳ:Kamadhenu, 9845256188,  500.00 
 • ಪುತ್ತೂರು :ಕ್ಯಾಂಪ್ಕೋ, ಆಯದ್ದು,  500.00 
 • ಮಂಗಳೂರು:PB Abdul-7204032229, ಆಯದ್ದು,  500.00
 • ಮಂಗಳೂರು;  ಕ್ಯಾಂಪ್ಕೋ, ಆಯದ್ದು,  500.00 
 • ಶಿರ್ಸಿ :Kadamba Marketing, ಆಯದ್ದು,  490.00
 • ಬೋಳು ಕಾಳು:710.00-740.00 

ಶುಂಠಿ ಧಾರಣೆ: ಕ್ವಿಂಟಾಲು.

ಹಸಿ ಶುಂಠಿಗೆ ಬೆಲೆ ಇದೆ ಎನ್ನುತ್ತಾರೆಯಾದರೂ ಕೊಳ್ಳುವವರು ಕಡಿಮೆ ದರಕ್ಕೇ ಕೇಳುತ್ತಿದ್ದಾರೆ. ಕೆಲವರು ಅಷ್ಟು ಇದೆ ಇಷ್ಟು ಇದೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಕೊಳ್ಳುವ ದರ ಹೆಚ್ಚು ಇದೆ. ಆದರೆ ಖರೀದು ಪ್ರಮಾಣ ಕಡಿಮೆ ಇದೆ. ಇಂದು ಶಿವಮೊಗ್ಗದಲ್ಲಿ 1800-2000-1800 ಬೆಲೆಗೆ ಒಟ್ಟು 1 ಚೀಲ ಮಾರಾಟವಾಗಿದೆ. ಹಾಸನದಲ್ಲಿ 141 ಚೀಲ ಸರಾಸರಿ 1000 ರೂ ಗಳಿಗೆ ಮಾರಾಟವಾಗಿದೆ.ಸರಾಸರಿ ಕೊಳ್ಳುವ ಬೆಲೆ ಬೆಳೆ ಪ್ರದೇಶಗಳಲ್ಲಿ ಕ್ವಿಂಟಾಲಿಗೆ 1200-1500- 1400 ರ ಆಸುಪಾಸಿನಲ್ಲಿ ಇದೆ ಎಂದು ಹೇಳಬಹುದು.

ಕೊಬ್ಬರಿ ಧಾರಣೆ: ಕ್ವಿಂಟಾಲು.

ಕೊಬ್ಬರಿ
 • ಕೊಬ್ಬರಿ ದರ ಸ್ಥಿರವಾಗಿದ್ದು, 16,000 ದಿಂದ ಕೆಳಕ್ಕೆ ಇಳಿಯದೆ, 16500 ರಿಂದ ಮೇಲಕ್ಕೇರದೆ ಮುಂದುವರಿಯುತ್ತಿದೆ.
 • ಅರಸೀಕೆರೆ: (ಬಾಲ್) 15000, 16250, 15219
 • ತುಮಕೂರು: 16000-16400
 • ಚನ್ನರಾಯಪಟ್ನ: (ಎಣ್ಣೆ) 9100, 9100, 9100
 • ತಿಪಟೂರು:(ಬಾಲ್) 16450, 16450, 16450
 • ಮಂಗಳೂರು: ಎಣ್ಣೆ: 7500, 13333, 9000
 • ಪುತ್ತೂರು: ಎಣ್ಣೆ: 10000, 7250
 • ಗುಬ್ಬಿ, ಬಾಲ್ : 16900, 16900, 16900
 • ಒಣಗಿದ ಹಸಿ ಕಾಯಿ ಕಿಲೊ.32-.00-33.00

ಕಾಫೀ ಧಾರಣೆ: 50 ಕಿಲೋ.

ಕಾಫೀ ಬೆಲೆ ಸ್ವಲ್ಪ ಹಿಂದೆ ಬಂದದ್ದು ಮತ್ತೆ ಯಥಾಸ್ಥಿತಿಯತ್ತ ಬರಲಾರಂಭಿಸಿದೆ. ಇದೆಲ್ಲವೂ ಆಮದು ರಪ್ತು ಮಾಡುವವರ ಆಟ ಎನ್ನಲಾಗುತ್ತಿದೆ

 • ಅರೇಬಿಕಾ ಪಾರ್ಚ್ ಮೆಂಟ್:15300-15500
 • ಅರೇಬಿಕಾ ಚೆರಿ:7600-8250
 • ರೋಬಸ್ಟಾ ಪಾರ್ಚ್ ಮೆಂಟ್:8400-8850
 • ರೋಬಸ್ಟಾ ಚೆರಿ:3800-4400

ರಬ್ಬರ್ ಧಾರಣೆ: ಕಿಲೋ.

ರಬ್ಬರ್ ದರ ತುಸು ಏರಿಕೆಯಾಗಿದೆ. ಸ್ವಲ್ಪ ಸಮಯ ಹೀಗೆ ಮುಂದುವರಿಯಬಹುದು ಎನ್ನಲಾಗುತ್ತದೆ. ಅಂತರ ರಾಷ್ಟ್ರೀಯ ಬೇಡಿಕೆ ಸ್ವಲ್ಪ ಮಟ್ಟಿಗೆ ಇದ್ದು, ಎಪ್ರೀಲ್ ವರೆಗೂ ಈ ಏರಿಕೆ ಮುಂದುವರಿಯಬಹುದು  ಎನ್ನಲಾಗುತ್ತಿದೆ.

 • GREDE 1X:182.50
 • RSS 3:171.50
 • RSS 4:170.50
 • RSS 5:165.00
 • LOT :1619.00
 • SCRAP: 111.50-119.50

ಏಲಕ್ಕಿ ಧಾರಣೆ:ಕಿಲೋ

 •  ಕಚ್ಚಾ: 531.00 
 • ಕೂಳೆ,  430-450.00  
 • ನಡುಗೊಲು,  500-550.00  
 • ರಾಶಿ ಸಾಮಾನ್ಯ,  600-650.00  
 • ರಾಶಿ ಉತ್ತಮ,  650-700.00 
 • ಜರಡಿ,  750-800.00  
 • ಆಯ್ದದ್ದು,  1100-1150.00 
 • ಹಸಿರು ಮಧ್ಯಮ,  600-700.00
 • ಹಸಿರು ಉತ್ತಮ,  900-950.00 
 • ಹಸಿರು ಅತೀ ಉತ್ತಮ,  1200-1250.0

ಜಾಯೀ ಸಾಂಬಾರ: ಕಿಲೋ.

 • ಜಾಯೀ ಕಾಯಿ :190-200
 • ಜಾಯೀ ಪತ್ರೆ: 800-950

ಬೆಳೆಗಾರರು ಹಳೆ ಅಡಿಕೆ ಮಾರಾಟ  ಮಾಡಿ. ಹೊಸತನ್ನು ಚೆನ್ನಾಗಿ ಒಣಗಿಸಿ ದಾಸ್ತಾನು ಇಡಿ. ಈ ವರ್ಷ  ಅಕ್ಟೋಬರ್  ಸುಮಾರಿಗೆ ಚಾಲಿ ,ಕಿಲೋ, 500 ಆಗಬಹುದು, ಕೆಂಪು ರಾಶಿ 55,000 ತನಕವೂ ಹೋಗಬಹುದು ಎಂಬ ವದಂತಿಗಳಿವೆ. ಈ ವರ್ಷ ಕಳೆದ ವರ್ಷಕ್ಕಿಂತ ಇಳುವರಿ 10-15% ಹೆಚ್ಚು ಎನ್ನುತ್ತಾರೆ. ಕರಿಮೆಣಸು ದಾಸ್ತಾನು ಇಡಿ, ಇಲ್ಲವೇ ಆಗತ್ಯಕ್ಕೆ ಅನುಗುಣವಾಗಿ  ಜೂನ್ ನಂತರ ಸ್ವಲ್ಪ ಸ್ವಲ್ಪ ಮಾರಾಟ ಮಾಡಿ. ಮುಂದಿನ ವರ್ಷದ ನಂತರ ಬೆಳೆ ಹೆಚ್ಚಾಗಲಿದ್ದು,  ಬೆಲೆ ಏರಿಕೆ ಆಗುವುದು ಕಷ್ಟ. ರಪ್ಥು ಮಾಡುವ ದೇಶ ಶ್ರೀಲಂಕಾದ ಆರ್ಥಿಕ ಕುಸಿತ, ನಮ್ಮ ದೇಶದ ಸಾಂಬಾರ ವಸ್ತುಗಳಿಗೆ ಅನುಕೂಲವಾಗಿದೆ.

Leave a Reply

Your email address will not be published. Required fields are marked *

error: Content is protected !!