
ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.
ಹೊಸತಾಗಿ ಅಡಿಕೆ ಸಸಿಗಳನ್ನು ನೆಡುವಾಗ ಸಾಂಪ್ರದಾಯಿಕ ಅಂತರದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ ಬೇರೆ ಬೇರೆ ಅಂತರದಲ್ಲಿ ನಾಟಿ ಮಾಡಿದರೆ ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ. ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು. ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ. ಇದಷ್ಟೇ ಅಲ್ಲ. ಒಂದು…