ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯಬಹುದಾದ ವರ್ಟಿಕಲ್ ಕೃಷಿ.
ಕೃಷಿ ದಿನದಿಂದ ದಿನಕ್ಕೆ ಬದಲಾವಣೆಯ ಮೆಟ್ಟಲೇರುತ್ತಾ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಅತೀ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಬೆಳೆ ಬೆಳೆಸಿ, ಅಧಿಕ ಇಳುವರಿ ಪಡೆಯುವುದೇ ಆಗಿರುತ್ತದೆ. ಸುಮಾರು 30-40 ವರ್ಷದ ಹಿಂದೆ ನಮ್ಮ ಕೃಷಿ ಹೇಗಿತ್ತು ಎಂಬುದನ್ನು ಆ ವಯೋಮಾನದವರು ಒಮ್ಮೆ ನೆನಪಿಸಿಕೊಳ್ಳಿ. ಅದೇ ರೀತಿ ತುಂಬಾ ಹಿರಿಯರಿದ್ದರೆ ಅವರ ಕಾಲದಲ್ಲಿ ಸುಮಾರು 50-60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಒಮ್ಮೆ ಕೇಳಿ ನೋಡಿ ಈಗಿನದ್ದು ನಮಗೆಲ್ಲಾ ಗೊತ್ತಿದೆ ತಾನೇ? ಎಲ್ಲವೂ ಭಾರೀ ಬದಲಾವಣೆ ಆಗಿದೆ. ಆಗುತ್ತಲೇ…