ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯಬಹುದಾದ ವರ್ಟಿಕಲ್ ಕೃಷಿ.

vertical farming

ಕೃಷಿ ದಿನದಿಂದ ದಿನಕ್ಕೆ ಬದಲಾವಣೆಯ ಮೆಟ್ಟಲೇರುತ್ತಾ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಅತೀ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಬೆಳೆ ಬೆಳೆಸಿ, ಅಧಿಕ ಇಳುವರಿ ಪಡೆಯುವುದೇ ಆಗಿರುತ್ತದೆ. ಸುಮಾರು 30-40 ವರ್ಷದ ಹಿಂದೆ ನಮ್ಮ ಕೃಷಿ ಹೇಗಿತ್ತು ಎಂಬುದನ್ನು ಆ ವಯೋಮಾನದವರು ಒಮ್ಮೆ ನೆನಪಿಸಿಕೊಳ್ಳಿ. ಅದೇ ರೀತಿ ತುಂಬಾ ಹಿರಿಯರಿದ್ದರೆ ಅವರ ಕಾಲದಲ್ಲಿ ಸುಮಾರು 50-60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಒಮ್ಮೆ ಕೇಳಿ ನೋಡಿ ಈಗಿನದ್ದು   ನಮಗೆಲ್ಲಾ ಗೊತ್ತಿದೆ ತಾನೇ? ಎಲ್ಲವೂ ಭಾರೀ ಬದಲಾವಣೆ ಆಗಿದೆ. ಆಗುತ್ತಲೇ ಇದೆ.  ಈಗ ನಾವು ಕಾಣುತ್ತಿರುವ ತಳಿಗಳು, ಪಡೆಯುತ್ತಿರುವ ಇಳುವರಿ, ಬದಲಾಗುತ್ತಿರುವ ತಂತ್ರಜ್ಞಾನ (Hightech agriculture) ಎಲ್ಲವೂ ಆಧುನೀಕರಣದ ಮೆಟ್ಟಲೇರುತ್ತಲೇ ಇವೆ. ಮುಂದೆ ಇನ್ನೂ ಇದು ಬದಲಾವಣೆ ಕಾಣಲಿದೆ.

  • ನಾವು ಚಿಕ್ಕವರಿದ್ದಾಗ ಗ್ರೀನ್ ಹೌಸ್ (Green house) ಎಂಬ ವ್ಯವಸ್ಥೆಯ ಬಗ್ಗೆ ಕಲ್ಪನೆಯನ್ನೂ ಮಾಡಿರಲಿಕ್ಕಿಲ್ಲ.
  • ಹಾಗೆಲ್ಲಾ ಅಗುತ್ತದೆಯೇ? ಅಂತಹ ರಚನೆಯೊಳಗೆ ಬೆಳೆ ಬೆಳೆದರೆ ಬೆಂದು ಹೋದೀತು ಎಂದೆಲ್ಲಾ ಮಾತಾಡಿಕೊಂಡಿದ್ದವರು ನಾವು.
  • ಆದರೆ ಕಾಲ ಬದಲಾದಂತೆ ಇದು ಒಂದು ಉತ್ತಮ ವ್ಯವಸ್ಥೆ ಎಂಬುದು ನಮಗೇ ಮನವರಿಕೆಯಾಗಲಿಲ್ಲವೇ?
  • ಅದೇ ರೀತಿಯಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ.
  • ನಾವು ಬದಲಾವಣೆಗೆ ಸಿದ್ಧರಾಗಿರಬೇಕು.

ವರ್ಟಿಕಲ್ ಬೆಳೆ ಪದ್ದತಿ-vertical farming method

ವರ್ಟಿಕಲ್ ಕೃಷಿ ಎಂದರೇನು?

  • ಕಡಿಮೆ ಸ್ಥಳದಲ್ಲಿ ಬಹು ಅಂತಸ್ತಿನಲ್ಲಿ  ಬೆಳೆ ಬೆಳೆಯುವುದಕ್ಕೆ ವರ್ಟಿಕಲ್ ( Vertical farming)ಕೃಷಿ ಎನ್ನುತ್ತಾರೆ.
  • ಇದನ್ನು ಪ್ರಥಮತಹ ಬಹು ಮಹಡಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲಿಕ್ಕಾಗಿ, ಅಲಂಕಾರಿಕ ಗಿಡಗಳನ್ನು ಬೆಳೆಸುವುದಕ್ಕಾಗಿ ಪರಿಚಯಿಸಲಾಯಿತು.
  • ಪಟ್ಟಣಗಳಲ್ಲಿ  ಕೆಲವು ಕಟ್ಟಡಗಳಲ್ಲಿ ಇದನ್ನು ಕಾಣಬಹುದು.
  • ಈಗ ಇದು ನಮ್ಮ ಕೃಷಿಗೂ ಅಳವಡಿಕೆ ಆಗುತ್ತಿದೆ.  ಈ ರೀತಿಯಲ್ಲಿ ಮನೆಬಳಕೆ ತರಕಾರಿ ಬೆಳೆಯುವವರು ತುಂಬಾ ಜನ ಇದ್ದಾರೆ. ಮೊನ್ನೆ ಫೇಸ್ ಬುಕ್ ವಾಟ್ಸ್ ಆಪ್ ಗಳಲ್ಲಿ ಒಂದು ವೀಡಿಯೋ ಹರಿದಾಡಿದ್ದನ್ನು ತಾವೆಲ್ಲಾ ನೋಡಿದ್ದಿರಬಹುದು.
  • ಇದು ಭವಿಷ್ಯದಲ್ಲಿ ಕೃಷಿಯ ಒಂದು ಸಣ್ಣ ಚಿತ್ರಣವನ್ನು ಕೊಟ್ಟಿರುವುದು.
  • ವಿದೇಶಗಳಲ್ಲಿ, ಹಾಗೆಯೇ ಮಹಾರಾಷ್ಟ್ರದ ಕೆಲವು ಕಡೆಯ ಕೃಷಿಕರು ಈ ವರ್ಟಿಕಲ್ ಕೃಷಿ ಮಾಡುತ್ತಿದ್ದಾರೆ.

ಹೀಗೆಯೂ ವರ್ಟಿಕಲ್ ಬೆಳೆ ಬೆಳೆಸಬಹುದು.-cabbage  strawberry vertical farming

ವಿಧಾನ:

  • ಕೃಷಿ ವಿಧಾನದ ಬಗ್ಗೆ ಈಗ ಹೆಚ್ಚು ಹೇಳಾಬೇಕಾಗಿಲ್ಲ. ಬಹಳಷ್ಟು ಚಿತ್ರಗಳು, ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
  • ಇದು ಬೇಕೆಂದೇ ಸೃಷ್ಟಿಸಿರುವುದು ಅಲ್ಲ. ನಿಜವಾದುದು.
  • ಒಂದು ಚೀಲದಲ್ಲಿ ಸಸ್ಯ ಬೆಳೆಸುವ ಫಲವತ್ತಾದ ಮಾದ್ಯಮವನ್ನು ಹಾಕಿ ಅದರಲ್ಲಿ ಶುಂಠಿ/ಅರಶಿನ ಅಥವಾ ಇನ್ಯಾವುದಾದರೂ  ಬೀಜ ಬಿತ್ತಿ ಬೆಳೆಸಿ.
  • ಮತ್ತೊಂದು ಚೀಲದಲ್ಲಿ ಹಾಗೆಯೇ ಮಾಧ್ಯಮ ಹಾಕಿ ಶುಂಠಿ ಹಾಕಿ ಅದರ ಮೇಲ್ಭಾಗದಲ್ಲಿ ನೇತು ಹಾಕಿ.
  • ನೇತು ಹಾಕಲು ಆಧಾರ ಇದ್ದರೆ ಎಷ್ಟೂ ಸಂಖ್ಯೆಯಲ್ಲಿ ಚೀಲದಲ್ಲಿ ಮಣ್ಣು ಅಥವ ಎರೆಗೊಬ್ಬರ, ತೆಂಗಿನ ನಾರಿನ ಹುಡಿ ತುಂಬಿ, ಶುಂಠಿ, ಅರಶಿನ,ಸ್ಟ್ರಾಬೆರ್ರಿ, ಆಲೂಗಡ್ಡೆ, ಕ್ಯಾರೆಟ್, ಈರುಳ್ಳಿ , ಕ್ಯಾಬೇಜ್, ಬುಶ್ ಪೆಪ್ಪರ್ ಸೊಪ್ಪು ತರಕಾರಿ ಹೀಗೆ ಬೇಕಾದ ತರಕಾರಿಯನ್ನು ಬೆಳೆಯಬಹುದು.
  • ಹನಿ ನೀರಾವರಿಯ ಮೂಲಕ ನೀರುಣಿಸಬೇಕಾಗುತ್ತದೆ.
  • ಇದಕ್ಕೆ ತುತ್ತ ತುದಿಯ ಸಸ್ಯಕ್ಕೆ ಕೊಡುವ ನೀರು, ಕೆಳ ಸ್ಥರದ  ಸಸಿಗೂ ದೊರೆಯುವಂತೆ ವ್ಯವಸ್ಥೆ ಇರುತ್ತದೆ.
  • ಗಾಳಿ ಬೆಳೆಕು ಎಲ್ಲಾ ಗಿಡಕ್ಕೂ ಏಕ ಪ್ರಕಾರವಾಗಿ ಸಿಗುತ್ತದೆ.
  • 1 ಎಕರೆಯಲ್ಲಿ ಬೆಳೆಯುವಂತದ್ದನ್ನು 5-10 ಸೆಟ್ಸ್ ಸ್ಥಳದಲ್ಲಿ ಬೆಳೆಯಬಹುದು.
  • ಇಲ್ಲಿ ನೀರಿನ ಉಳಿತಾಯವಾಗುತ್ತದೆ. ಗೊಬ್ಬರದ ಉಳಿತಾಯವಾಗುತ್ತದೆ. ಸಸ್ಯಕ್ಕೆ ಬೇಕಾದ ಗಾಳಿ ಬೆಳಕಿಗೆ ಯಾವ ಕೊರತೆಯೂ ಆಗಲಾರದು.

ಹೇಗೆ ಮಾಡುವುದು:

Vertical farming

ಇಂತಹ ಕೃಷಿಗೆ ನಾವು ಈಗಲೇ ತಯಾರಾಗಬೇಕಿದೆ. ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ವರ್ಟಿಕಲ್ ಗಾರ್ಡನ್ ಗೆ ವಿಧಾನ ನಮ್ಮೆಲ್ಲರ ಆಯ್ಕೆಯಾಗಲಿದೆ. ಅದರ ಅನಿವಾರ್ಯತೆಯೂ ಬರಲಿದೆ.

  • ಈ ವ್ಯವಸ್ಥೆಗೆ ಬೇಕಾಗುವ ಎಲ್ಲಾ ಸಾಮಾನು ಸರಂಜಾಮುಗಳೂ ಮಾರುಕಟ್ಟೆಯಲ್ಲಿ ಲಭ್ಯ.
  • ಸಿದ್ಧ ರೂಪದ ಸ್ಟಾಂಡ್, ಪಾತ್ರೆಗಳನ್ನು ಮಾರಾಟ ಮಾಡುವವರು ಹಲವರಿದ್ದಾರೆ.
  • ಆದರೆ ಅದನ್ನು ನಾವೇ ತಯಾರಿ ಮಾಡಿಕೊಳ್ಳಬಹುದು.
  • ಇಲ್ಲಿ ಸ್ಟ್ರಾಬೆರ್ರಿ, ಕ್ಯಾಬೇಜ್ , ಕ್ಯಾರೇಟ್ ಹಾಗೂ ಕೊತ್ತಂಬರಿ ಸೊಪ್ಪು,   ಹೀಗೆ ಯಾವ ರೀತಿ ಬಹುಸ್ಥರದ ಕೃಷಿಯಲ್ಲಿ ಬೆಳೆಯಬಹುದು ಎಂಬ ಚಿತ್ರವನ್ನು ನೀಡಲಾಗಿದೆ.
  • ಇದೇ ವಿನ್ಯಾಸದಲ್ಲಿ  ಕಬ್ಬಿಣದ ರಾಡ್ ಗಳ ಮೂಲಕ ರಚನೆಯನ್ನು ಮಾಡಿ ಅದಕ್ಕೆ ಬೇಕಾಗುವ ಬೆಳೆಸುವ ಪಾತ್ರೆಗಳು ಅಥವಾ ಚೀಲಗಳ ಮೂಲಕ ಈ ವಿಧಾನದಲ್ಲಿ ಕೃಷಿ ಮಾಡುವ ಪ್ರಯತ್ನ ಮಾಡಬಹುದು.

Water and manure saving vertical farming

  • ಹಳೆಯ ಪ್ಯಾಂಟುಗಳನ್ನು , ಪರಿಸರದಲ್ಲಿ ಕರಗದ ನೈಲಾನ್ ಬಟ್ಟೆಗಳನ್ನು ಇದಕ್ಕೆ ಬಳಸಿ ಅದರಲ್ಲಿ ಮಾಧ್ಯಮ ತುಂಬಿ  (coir pith) ಸಸಿ ಬೆಳೆಯಬಹುದು.
  • ಅದು ಶಿಥಿಲವಾಗಿ ಪರಿಸರಕ್ಕೆ ಹಾನಿಯಾಗುವುದೂ ತಪ್ಪುತ್ತದೆ.
  • ಈ ವಿಧಾನದಲ್ಲಿ ಬೆಳೆ ಬೆಳೆಸಿದಾಗ  ಇಳುವರಿಯೂ  ಹೆಚ್ಚು ಬರುತ್ತದೆ.
  • ಬೆಳೆ ಸಂರಕ್ಷಣೆ ಎಂಬ ಅಧಿಕ ಖರ್ಚಿನ ಬಾಬ್ತು ತುಂಬಾ ಅಗ್ಗವಾಗುತ್ತದೆ.

ಥರ್ಮೋಕೊಲ್ ಕಂಟೈನರ್ ನಲ್ಲಿ ಸ್ಟ್ರಾಬೆರಿಯ ವರ್ಟಿಕಲ್ ಕೃಷಿ-Strawberry in vertical farming

ಇಂದೇ ನಿಮ್ಮಲ್ಲಿ ಹಳೆಯ ಬೋರ್ ನಿಂದ ತೆಗೆದ ಪೈಪುಗಳು ಇದ್ದರೆ ಲೇತ್ ಗೆ ಹೋಗಿ ಸ್ಟಾಂಡ್ ಮಾಡಿಸಿ. ಅದರಲ್ಲಿ ನೇತು ಹಾಕುವ ಹುಕ್ ಮಾಡಿಸಿ. ಹಳೆಯ ಪ್ಯಾಂಟ್, ಸೀರೆಗಳ ಚೀಲ ಹೊಲಿಯಿರಿ. ಅದಕ್ಕೆ ಮಾಧ್ಯಮ ತುಂಬಿ ಮನೆಯಂಗಳದಲ್ಲಿ ಒಂದು ಸ್ಟಾಂಡ್ ಮಾಡಿ ಅದರಲ್ಲಿ ಕೃಷಿ ಮಾಡಿ. ನೋಡಿ ಎಷ್ಟು ಅನುಕೂಲ ಇದೆ ಎಂದು.
end of the article:——————————————————————–
search words: agriculture# vertical garden # growing vegetables# pot vegetables# new method of vegetable cultivation# strawberry# Carrot # coriander leaves# cabbage #

Leave a Reply

Your email address will not be published. Required fields are marked *

error: Content is protected !!