ಸಾರಜನಕ ಒದಗಿಸಬಲ್ಲ ಗೊಬ್ಬರಗಳ ಮಾಹಿತಿ.
ಸಾರಜನಕ ಎಂಬ ಪೋಷಕವು ನೈಸರ್ಗಿಕವಾಗಿ ಸಾವಯವ ವಸ್ತುಗಳು ಕಳಿತಾಗ ಮಣ್ಣಿಗೆ ಆಮ್ಲ ರೂಪದಲ್ಲಿ ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಇರುವ ಸಾರಜನಕವನ್ನು ಸಸ್ಯಗಳು ಹೀರಿಕೊಂಡು ತಮ್ಮ ಬೇರುಗಳಲ್ಲಿ ಸಂಗ್ರಹಿಸಿ ಮಣ್ಣಿಗೆ ಲಭ್ಯವಾಗುವಂತೆ ಮಾಡುತ್ತವೆ. ಇನ್ನು ಹಲವಾರು ಬೆಳೆ ಉಳಿಕೆಗಳಲ್ಲಿ ಸಾರಜನಕ ಅಂಶ ಇರುತ್ತದೆ. ಇದರಿಂದ ಕೊರತೆಯಾಗುವ ಸಾರಜನಕವನ್ನು ಒದಗಿಸಲು ರಾಸಾಯನಿಕ ಮೂಲದಲ್ಲಿ ಬೇರೆ ಬೇರೆ ಗೊಬ್ಬರಗಳು ಇವೆ. ಸಾರಜನಕ ಎಂಬ ಪೋಷಕವು ಮಳೆ- ಸಿಡಿಲು, ಮಿಂಚುಗಳಿಂದ ಮಣ್ಣಿಗೆ ಲಭ್ಯವಾಗುತ್ತದೆ. ಇದನ್ನು ಬಳಸಿಕೊಂಡು ಕೆಳದರ್ಜೆಯ ಸಸ್ಯಗಳು( ಹಾವಸೆ, ಹುಲ್ಲು ಇತ್ಯಾದಿ) ಮಳೆಗಾಲ…