ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.
ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ ಕೇಂದ್ರಗಳು ಗೋಡಂಬಿ ಬೆಳೆಯನ್ನು ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…