ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು.

  • ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ.
  • ಮೈದಾನ ಪ್ರದೇಶಕ್ಕೆ ಹೊಂದುವ ತಳಿಗಳನ್ನೇ ಬೆಳೆದರೆ ಉತ್ತಮ ಎಂಬುದು ಈ ತನಕ ಸಂಶೋಧನೆಗಳಿಂದ ತಿಳಿದು ಬಂದ ವಿಚಾರ.

ವೆಂಗುರ್ಲ – 7 :

  •  ಇದು ಕರ್ನಾಟಕದ ಮಲೆನಾಡಿಗೆ ಶಿಫಾರಸು ಮಾಡಿದ ತಳಿ.
  • ಈ ಸಂಕರಣ ತಳಿಯನ್ನು ವಲಯ ಹಣ್ಣು ಸಂಶೋಧನಾ ಕೇಂದ್ರ ವೆಂಗುರ್ಲ, ಮಹಾರಾಷ್ಟ್ರದಿಂದ 1997ರಲ್ಲಿ ಬಿಡುಗಡೆ ಮಾಡಲಾಗಿದೆ.
  • ಇದರಲ್ಲಿ ಹೆಣ್ಣು ಹೂಗಳ ಸಂಖ್ಯೆ ಹೆಚ್ಚಿರುತ್ತದೆ.
  • ಸರಾಸರಿ ಇಳುವರಿ 18.5 ಕೆ.ಜಿ. ದೊಡ್ಡ ಬೀಜ. ಬೀಜದ ತೂಕ ಸುಮಾರು 10 ಗ್ರಾಂ. ನೂರು ಗ್ರಾಂ. ಬೀಜಕ್ಕೆ 30.5 ಗ್ರಾಂ. ತಿರುಳು ದೊರೆಯುತ್ತದೆ.
  • ತಿರುಳಿನ ತೂಕ ಸುಮಾರು 2.9 ಗ್ರಾಂ. ಇರು ಮಹಾರಾಷ್ಟ್ರ ಹಾಗೂ ಗೋವಾದ ಕೊಂಕಣ್ ವಲಯಕ್ಕೂ ಶಿಫಾರಸ್ಸಾದ ತಳಿ
ವೆಂಗುರ್ಲಾ ತಳಿ
ವೆಂಗುರ್ಲಾ ತಳಿ

ಚಿಂತಾಮಣಿ – 1:

  • ಇದು ಕೃಷಿ ಸಂಶೋಧನಾ ಕೇಂದ್ರ ಚಿಂತಾಮಣಿಯಿಂದ 1993ರಲ್ಲಿ ಬಿಡುಗಡೆಯಾದ ತಳಿ.
  • ಕರ್ನಾಟಕದ ಮೈದಾನ  ಪ್ರದೇಶಕ್ಕೆ ಸೂಕ್ತವಾದ ತಳಿ. ಹೂ ಬಿಡುವ ಅವಧಿ ಜನವರಿಯಿಂದ ಎಪ್ರಿಲ್ ವರೆಗೆ.
  • ಒಂದು ಗೊಂಚಲಿನಲ್ಲಿ 2-4 ಹಣ್ಣುಗಳು. ಒಂದು ಮರಕ್ಕೆ ಸರಾಸರಿ ಇಳುವರಿ 7.2 ಕೆ.ಜಿ. ಬೀಜದ ತೂಕ 6.9 ಗ್ರಾಂ.
  • ಸಂಸ್ಕರಣೆ ಮಾಡಿದಾಗ ನೂರು ಗ್ರಾಂಗೆ 31 ಗ್ರಾಂ. ತಿರುಳು ದೊರೆಯುತ್ತದೆ. ಈ ತಳಿಗೂ ಉಳ್ಳಾಲ-1 ತಳಿಗೂ ಸಾಮ್ಯತೆ ಇದೆ.

ಉಳ್ಳಾಲ-1 :

  • ಮೈದಾನ ಪರದೇಶಕ್ಕೆ  ಇದು ಹೊಂದಿಕೊಳ್ಳುತ್ತದೆ. ಸರಾಸರಿ 16 ಕೆ.ಜಿ. ಇಳುವರಿ ಕೊಡುತ್ತದೆ.
  • ಹಳದಿ ಮಿಶ್ರಿತ ಕೆಂಪು ಹಣ್ಣು. ಸುಮಾರು 110 ದಿನಗಳ ವರೆಗೆ ಕೊಯ್ಲು ಮುಂದುವರಿಯುತ್ತದೆ.
  • ಇದರ ಬೀಜದ ಸರಾಸರಿ ತಲಾ 6.7 ಗ್ರಾಂ. ಇದರಲ್ಲಿ 100 ಗ್ರಾಂ. ಸಂಸ್ಕರಣೆ ಮಾಡಿದಾಗ 30.7 ಗ್ರಾಂ. ತಿರುಳು ದೊರೆಯುತ್ತದೆ.
  • ಸಾಧಾರಣವಾಗಿ ಒಳನಾಡು ಪ್ರದೇಶಗಳಲ್ಲಿ ಮಾರ್ಚ್‍ನಿಂದ ಹಿಡಿದು ಜೂನ್ ತಿಂಗಳವರೆಗೆ ಕೊಯ್ಲು ಮುಂದುವರಿಯುತ್ತದೆ.

ಧನ :

  •  ಇದೊಂದು ಸಂಕರಣ ತಳಿ. 1993ರಲ್ಲಿ ಕೇರಳನ ಮಡಕ್ಕತಾರ ಕೃಷಿ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾಗಿದೆ.
  • ಕರ್ನಾಟಕದ ಮೈದಾನ ಪ್ರದೇಶಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಗೊಂಚಲು ಗೊಂಚಲಾಗಿ ಹಣ್ಣುಗಳಿರುತ್ತವೆ.
  • ಸರಾಸರಿ ಇಳುವರಿ ಮರವೊಂದಕ್ಕೆ 17.5 ಕೆ.ಜಿ. ಹಣ್ಣಿನ ಬಣ್ಣ ಹಳದಿ.
  • ಬೀಜದ ಗಾತ್ರ ಸುಮಾರು 8ರಿಂದ 9 ಗ್ರಾಂ. ಸಾಧಾರಣವಾಗಿ ಎಪ್ರಿಲ್-ಮೇ ಯಲ್ಲಿ ಫಸಲು ಬರುತ್ತದೆ.

ವೆಂಗುರ್ಲ – 4 :

  • ಇದು ಸಂಕರಣ ತಳಿ. ವಲಯ ಹಣ್ಣು ಸಂಶೋಧನಾ ಕೇಂದ್ರ, ವೆಂಗುರ್ಲ ಮಹಾರಾಷ್ಟ್ರದಿಂದ ಬಿಡುಗಡೆಯಾದ ತಳಿ ಮೈದಾನ ಪ್ರದೇಶದ ಹಾವಾಮಾನಕ್ಕೆ ಹೊಂದುವ ತಳಿ.
  • ಸರಾಸರಿ ಇಳುವರಿ ಮರವೊಂದಕ್ಕೆ 17.2 ಕೆ.ಜಿ. ತೂಕ 7.7 ಗ್ರಾಂ. ಹಣ್ಣಿನ ಬಣ್ಣ ಕೆಂಪು.
  • ನೂರು ಗ್ರಾಂ. ಬೀಜಕ್ಕೆ 31 ಗ್ರಾಂ. ತಿರುಳು ದೊರೆಯುತ್ತದೆ.
  • ಬಹಳ ಬೇಗೆನ ಅಂದರೆ ಡಿಸೆಂಬರ್ -ಜನವರಿ ತಿಂಗಳಲ್ಲಿ ಹೂ ಬಿಡುವುದರಿಂದ ಚಹಾ ಸೊಳ್ಳೆಯಿಂದ ಸಂರಕ್ಷಣೆಗೆ ಹೆಚ್ಚಿನ ಮುತುವರ್ಜಿ ಅಗತ್ಯ.

ಚಿಂತಾಮಣಿ – 2 :

  • ಕರ್ನಾಟಕದ ಮೈದಾನ ಪ್ರದೇಶಕ್ಕೆ ಸೂಕ್ತವಾದಂತಹ ತಳೀ. ಇದರ ಮೇಲ್ಛಾವಣಿ ಒತ್ತೊತ್ತಾಗಿದ್ದು ಹೆಚ್ಚಿನ ರೆಂಬೆಗಳಿರುತ್ತವೆ.
  • ಡಿಸೆಂಬರ್  ನಿಂದ ಜನವರಿಯ ವರೆಗೆ ಇದರ ಹೂ ಬಿಡುವ ಅವಧಿ.
  • ಸರಾಸರಿ ಮರವೊಂದಕ್ಕೆ 12.4 ಕೆ.ಜಿ. ಇಳುವರಿ. ಬೀಜದ ತೂಕ 7.9 ಗ್ರಾಂ.
  • ಹಣ್ಣಿನ ಬ೦ಣ್ಣ ಕೆಂಪು, ಹಣ್ಣಿನ ಸರಾಸರಿ ತೂಕ 70 ಗ್ರಾಂ. ಹಾಗೂ ರಸದ ಪ್ರಮಾಣ 60%.

ವೃದ್ಧಾಚಲಂ: (  ವಿ ಆರ್ ಐ ಹೈಬ್ರೀಡ್)

ವೃದ್ಧಾಚಲಂ ತಳಿ
ವೃದ್ಧಾಚಲಂ ತಳಿ
  • ಇದು ನು ತಮಿಳುನಾಡಿನ ಕುಡ್ಡಲೂರುವಿನ ಕೃಷಿ ವಿಜ್ಞಾನ ಕೇಂದ್ರದಿಂದ ಬಿಡುಗಡೆಯಾದ ತಳಿ.
  • ಸಾಮಾನ್ಯವಾಗಿ ಹೆಚ್ಚಿನೆಲ್ಲಾ ಪ್ರದೇಶಗಳಿಗೆ ಹೊಂದುವತಳಿಯಾಗಿದ್ದು, ಅಧಿಕ ಸಾಂದ್ರ ಬೇಸಾಯಕ್ಕೆ  ಹೊಂದಿಕೆಯಾಗುವ ತಳಿ.
  •   ತೀವ್ರ ಪ್ರೂನಿಂಗ್‍ಗೆ ಹೊಂದಿಕೊಂಡು ಉತ್ತಮ ಇಳುವರಿ ಕೊಡಬಲ್ಲ ತಳಿ.

ಗೇರು ಬೆಳೆಯನ್ನು ಹೆಚ್ಚಿನ ಆರೈಕೆ ಮಾಡಿ ಬೆಳೆದರೆ ಉತ್ತಮ ಲಾಭ ಇದೆ. ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ. ನೀರು ಗೊಬ್ಬರ ಹೆಚ್ಚು ಬೇಡ. ನೆಲಕ್ಕೆ  ಉತ್ತಮ ಹಸುರು ಹೊದಿಕೆಯಾಗಿ ವಾತಾವರಣ ತಂಪಾಗಿರಲು ಸಹಕಾರಿಯಾದ ಬೆಳೆ.

Leave a Reply

Your email address will not be published. Required fields are marked *

error: Content is protected !!