ನಾಟಿ ಹತ್ತಿಯನ್ನು ಕೊಳ್ಳುವವರೇ ಇಲ್ಲ. ಬಿಟಿ ಗೇ ಬೇಡಿಕೆ

by | Oct 15, 2022 | Commercial Crops (ವಾಣಿಜ್ಯ ಬೆಳೆ), Cotton (ಹತ್ತಿ) | 1 comment

ಹತ್ತಿ  ಬೆಳೆಯುವ ರೈತರು ಯಾರ ಮಾತನ್ನೂ  ನಂಬಲಿಲ್ಲ. ನಾಟಿ ಹತ್ತಿಗೆ ವಿದಾಯ ಹೇಳಿಯೇ ಬಿಟ್ಟರು. ನಮಗೆ ಹುಳ ಬಾರದ ಹತ್ತಿ ತಳಿ ಬೇಕು ಎಂದು ಬೋಲ್ ಗಾರ್ಡ್  (ಬಿಟಿ) ಹತ್ತಿ ಬೀಜವನ್ನು ಕದ್ದು ಮುಚ್ಚಿಯಾದರೂ ಬೆಳೆಸಿದರು. ಈಗ ದೇಶದಲ್ಲಿ ಬೆಳೆಸಲ್ಪಡುವ  99 %   ಹತ್ತಿ ಬಿಟಿಯೇ. ಇದರ ಬೀಜ ಮಾತ್ರ ಸಿಗದಿದ್ದರೆ ರೈತರು ಏನು ಮಾಡಲಿಕ್ಕೂ ಹಿಂಜರಿಯಲಿಕ್ಕಿಲ್ಲ. ಅಷ್ಟೂ ಜನ ಬಿಟಿ ಹತ್ತಿಯನ್ನು ಹಚ್ಚಿಕೊಂಡಿದ್ದಾರೆ. ಮಾರುಕಟ್ಟೆಯೂ ಸಹ ಬಿಟಿ ಪರವಾಗಿದ್ದು, ಅದಕ್ಕೆ ಬೇಡಿಕೆ- ಬೆಲೆ.

  • ನಮ್ಮ ರಾಜ್ಯದಲ್ಲಿ ಹತ್ತಿಯನ್ನು ಬಹಳಷ್ಟು ರೈತರು ಬೆಳೆಸುತ್ತಾರೆ, ಕರಾವಳಿಯಲ್ಲಿ ಬೆಳೆ ಇಲ್ಲ. ಮಲೆನಾಡಿನಲ್ಲಿ ಅಲ್ಪ ಸ್ವಲ್ಪ ಇದೆ.  ಉಳಿದೆಡೆ ಹತ್ತಿ ಪ್ರಮುಖ ವಾಣಿಜ್ಯ ಬೆಳೆ.

ನಾಟಿಯಿಂದ ಬಿಟಿಯತ್ತ..:

  • ಹಿಂದೆ ಸುಧಾರಿತ, ಹೈಬ್ರೀಡ್ , ನಾಟೀ ತಳಿಗಳನ್ನು  ಬೆಳೆಸುತ್ತಿದ್ದರು.
  • ಅದನ್ನು  ಬಿತ್ತನೆ ಮಾಡಿ ಫಲ ಕೊಯಿಲು ಮಾಡುವ ತನಕ ಕನಿಷ್ಟ  ವಾರಕ್ಕೊಮ್ಮೆ ಕೀಟ ನಾಶಕ ಸಿಂಪಡಿಸಿ ಬೆಳೆ ಪಡೆಯಲು ಶ್ರಮಿಸುತ್ತಿದ್ದರು.
  • ಹತ್ತಿ ಬೆಳೆಗೆ ಗಿಡ ಹಂತದಲ್ಲಿ ಚಿಗುರು ಕೊರಕ ಹುಳು ತೊಂದರೆ ಮಾಡುತ್ತದೆ. (pink boll worm)
  • ಹೂವಾಗುವಾಗ ಅದೇ ಹುಳು ಹೂವು ಕೊರೆಯಲು ಪ್ರಾರಂಭಿಸುತ್ತದೆ.
  • ಅಲ್ಲಿಂದ ಮುಂದೆ ಯಾವುದೇ  ಹಂತದಲ್ಲೂ ಹೂ ಆಗಿ ಕಾಯಿ ಕಚ್ಚಿದ  ಕೋಡನ್ನು ಅದು ತಿಂದು ಹಾಳು ಮಾಡಬಹುದು.
  • ಇದೆಲ್ಲಾ ಧಾಳಿಯನ್ನು ಎದುರಿಸಿ ಬೆಳೆ ಉಳಿಸಿಕೊಳ್ಲಲು ರೈತರು ಪ್ರಭಲ – ಅತೀ ಪ್ರಭಲ ಕೀಟನಾಶಕಗಳನ್ನು ಬಳಸಿ ರೋಸಿ ಹೋಗಿದ್ದಾರೆ.

 ರಾಸಾಯನಿಕ ವಿಷದ ಬಳಕೆಯ ಸಹವಾಸವೇ ಬೇಡಪ್ಪಾ. ಆರೋಗ್ಯವಾದರೂ ಉಳಿಯಲಿ ಎಂದು ರೈತರು ಆರಿಸಿದ್ದು ಬಿಟಿ  ಹತ್ತಿಯನ್ನು . ಇದು ಚಿಗುರು ಕೊರಕ, ಹೂವು ಕೊರಕ, ಕಾಯಿ ಕೊರಕ ಹುಳುಗಳ ತೊಂದರೆ ಬಹಳ ಕಡಿಮೆ. ಇದರ ಬೀಜಕ್ಕೆ  ಹುಳ ಬಂದರೆ ಅದಕ್ಕೆ  ನಂಜುಕಾರಕವಾಗಿ ಪರಿಣಮಿಸುವ ಬ್ಯಾಸಿಲಸ್ ತುರೆಂಜೆನ್ಸಿಸ್ ಎಂಬ ಜೀವಾಣುವನ್ನು ತಳಿ ಮೂಲಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಸೇರಿಸಲಾಗಿದೆ.  ಇದು ಕಾಯಿಕೊರಕ ಹುಳುವನ್ನು ಆಕರ್ಷಿಸುವುದಿಲ್ಲ. 

  • ಇದು ಬಂದ ನಂತರ  ರೈತರು ತಾವು ಒಂದು ಎಕ್ರೆ ಬೆಳೆಗೆ 5-8 ಸಾವಿರ ತನಕ ಕೀಟ ನಾಶಕ ಬಳಕೆಗೆ ಖರ್ಚು ಮಾಡುತ್ತಿದ್ದುದು ಉಳಿಕೆಯಾಗಿ ಅದು ಬರೇ 1-2  ಸಾವಿರಕ್ಕೆ ಇಳಿದಿದೆ.

ಹೇಳಿದ್ದೆಲ್ಲಾ ಸುಳ್ಳು:

  • ಪರಿಸರವಾದಿಗಳು- ಬುದ್ಧಿ ಜೀವಿಗಳು ಬಿಟಿ ಹತ್ತಿಯನ್ನು ಬೆಳೆದರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಸಮಾಜವನ್ನೂ, ರೈತರನ್ನೂ ಅಂಜಿಸಿದರು.
  • ಆದರೆ ಬಿಟಿ ಹತ್ತಿ ಬೆಳೆದಲ್ಲಿ ಎಲ್ಲಿಯೂ ಮಕ್ಕಳು ಆಗದೇ ಇರಲಿಲ್ಲ.
  • ಜೇನು ನೊಣಗಳು ಪಲಾಯನ ಮಾಡಲಿಲ್ಲ.ಯಾರಿಗೂ ಯಾವ ಖಾಯಿಲೆ- ಕಸಾಲೆಯೂ ಆಗಲಿಲ್ಲ.
  • ಇದನ್ನು ಈಗ ರೈತರು ಜ್ಞಾಪಿಸಿಕೊಳ್ಳುತ್ತಾರೆ, ತಿಳಿದವರು ಹೇಳಿದ್ದು ಸತ್ಯವೋ ಸುಳ್ಳೋ ಎಂದು!

ಬಿ ಟಿ ಹತ್ತಿ

ಪರಿಸರದ ಮುಂದೆ ಮಾನವ ಏನೂ ಅಲ್ಲ:

  • ಇದಕ್ಕೆ  ಸರಿಯಾಗಿ ಪರಿಸರ ತನ್ನ ತತ್ವವನ್ನು ಮರೆಯಲೇ ಇಲ್ಲ.
  • ಮೊದಲು ಬಿಡುಗಡೆಯಾದ  ಬೋಲ್ ಗಾರ್ಡ್  ತಳಿ 3-4  ವರ್ಷಗಳಲ್ಲಿ ತನ್ನ  ಕೀಟ ನಿರೋಧಕ ಶಕ್ತಿಯನ್ನು ಕಳೆದು ಕೊಡಿತು.
  • ಅದಕ್ಕೆ ಮತ್ತೆ ಬಂತು ಬೋಲ್ಗಾರ್ಡ್ 2  ಇದೂ ತನ್ನ ಗುಣವನ್ನುಹಿಂದಿನಂತೇ ಕಳೆದುಕೊಂಡಿತು. 
  • ಬೋಲ್ಗಾರ್ಡ್ ತಯಾರಕರು ಮತ್ತೆ ಬಿಟಿ 3 ರನ್ನು ಕೊಟ್ಟರು, ಅದು ಈಗ  ಚಲಾವಣೆಯಲ್ಲಿದೆ. 
  • ಅದು ಎಷ್ಟು ಸಮಯವೋ ನೋಡಬೇಕಿದೆ.

ತಂತ್ರಜ್ಞಾನ ರೈತರನ್ನೂ ಬೆಳೆಸಿದೆ:

ಬೋಲ್ ಗಾರ್ಡ್ ಹತ್ತಿ ಬೆಳೆ ರೈತರಿಗಷ್ಟೇ ಲಾಭದಾಯಕವಲ್ಲ. ಇದನ್ನು ಯಾವುದೇ ಪ್ರಯೋಗಾಲಯದಲ್ಲಿ  ಉತ್ಪಾದಿಸುವುದಲ್ಲ. ರೈತರಿಗೆ  ಪೇರೆಂಟಲ್ ಮೂಲವನ್ನು ಕೊಟ್ಟು  ಕ್ರಾಸಿಂಗ್ ಮಾಡಿಸಿ ಅವರಿಂದಲೇ ಬೀಜವನ್ನು  ಉತ್ಪಾದಿಸುವಂತದ್ದು. ಇದರಲ್ಲೂ ರೈತರಿಗೆ  ಆದಾಯದ ಅನುಕೂಲ ದೊರೆತಿದೆ.

  • ಹತ್ತಿ ಬೆಳೆಯಲ್ಲಿ ರೈತರು ಏನಾದರೂ ಸಂಪಾದನೆಯನ್ನು ಉಳಿಸಿಕೊಂಡಿದ್ದರೆ ಅದು ಬಿ ಟಿ ಹತ್ತಿ ಬಂದ ನಂತರವೇ.
  • ಈಗ ದೇಶದ ಹತ್ತಿ ವರ್ತಕರು ಸಹ ಇತರ ತಳಿಯ ಹತ್ತಿಯನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ.
  • ಕಾರಣ ಅದರಲ್ಲಿ ಹತ್ತಿ ಎಳೆ ಉದ್ದ ಇರುವುದಿಲ್ಲ.

ತಂತ್ರಜ್ಞಾನಗಳು ಬರುವಾಗ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅವರ ಒತ್ತಡ ನೀತಿ ನಿಯಮಾವಳಿ ರೂಪಕರನ್ನು ಗೊಂದಲಕ್ಕೀಡು ಮಾಡುತ್ತದೆ. ಇದೆಲ್ಲದರ ಪರಿಣಾಮ  ರೈತರ ಮೇಲೆ ಆಗುತ್ತದೆ

1 Comment

  1. Namrata shrikant bileli

    Dear, sir
    I’m from Bengaluru. My name is Namrata. I want “naati Hatti beeja” do you help me to having the seeds? Please reply sir..
    Thank you sir

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!