ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

by | Jan 21, 2021 | Crop Protection (ಬೆಳೆ ಸಂರಕ್ಷಣೆ), Cashew (ಗೇರು) | 0 comments

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ.

ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ. ಹಾಗೆಂದು ನಾವು ತೋಟ ಮಾಡಿ ಬೆಳೆಸಿದರೆ ಟಿ- ಸೊಳ್ಳೆ ಕಾಟ ಜಾಸ್ತಿ. ಚಿಗುರು ಮೂಡುವಾಗ ಪ್ರ್ರಾರಂಭವಾಗಿ ಕಾಯಿ ಬಲಿಯುವ ತನಕವೂ ಇದು ತೊಂದರೆ ಮಾಡುತ್ತಾ ಇರುತ್ತದೆ. ನಿಯಂತ್ರಣ ಮಾಡದೆ ಬಿಟ್ಟರೆ ಟಿ ಸೊಳ್ಳೆಯ ಕಾರಣದಿಂದ 75% ಕ್ಕೂ ಹೆಚ್ಚು ಫಸಲು ನಷ್ಟವಾಗುತ್ತದೆ. ಫಸಲು ಬೇಕಾದರೆ ಟಿ- ಸೊಳ್ಳೆ ನಿಯಂತ್ರಣ ಮಾಡಲೇ ಬೇಕಾಗುತ್ತದೆ.

T mosquito damage

 • ಕೆಲವು ಹವಾಮಾನ ಸ್ಥಿತಿಯಲ್ಲಿ ಟಿ ಸೊಳ್ಳೆಯ ತೊಂದರೆ ಉಂಟಾಗದೇ ಇರಬಹುದು.
 • ಇನ್ನು ಕೆಲವು ತಳಿಗಳಿಗೆ ಟಿ ಸೊಳ್ಳೆಯ ಬಾಧೆ ಹೆಚ್ಚು.
 • ಕೆಲವು ತಳಿಗಳಿಗೆ ಟಿ ಸೊಳ್ಳೆ ನಿರೋಧಕ ಶಕ್ತಿ ಇರುತ್ತದೆ.
 • ಕೆಲವು ಜನ ನಾವು ಏನೂ ಕ್ರಮ ಕೈಗೊಳ್ಳುವುದಿಲ್ಲ.
 • ಟಿ -ಸೊಳ್ಳೆ ಇಲ್ಲ ಎನ್ನುವವರಿದ್ದರೆ ಅವರಿಗೆ ಈ ಮೇಲಿನ ಅನುಕೂಲಗಳು ಲಭಿಸಿರಬೇಕು.
 • ರಸ ಹೀರುವ ಕೀಟಗಳಲ್ಲಿ ಟಿ- ಸೊಳ್ಳೆ ಬೇರೆ ಬೇರೆ ಬೆಳೆಗಳಿಗೆ ತೊಂದರೆಯನ್ನು ಮಾಡುತ್ತದೆ.
 • ಗೇರು ಬೆಳೆಯಲಾಗುವ ಎಲ್ಲಾ ಕಡೆ ಇದರ ತೊಂದರೆ ಇದೆ.

ಟಿ ಸೊಳ್ಳೆ ಏನು ಮಾಡುತ್ತದೆ:

T mosquito damage to flowers

 • ಗೇರು ಮರ ಚಿಗುರುವ ಮುಂಚೆ ಎಲೆಗಳನ್ನು ಉದುರಿಸುತ್ತದೆ.
 • ಎಲೆ ಉದುರಿದ ತರುವಾಯ ಚಿಗುರು ಮೊಗ್ಗು ಬರುತ್ತದೆ.
 • ಈ ಸಮಯದಲ್ಲಿ ಟಿ ಸೊಳ್ಳೆ ಇದ್ದರೆ ಅದು ಚಿಗುರು ಮೊಗ್ಗಿನಲ್ಲಿ ಕುಳಿತು ರಸ ಹೀರಿ ಅದನ್ನು ಬೆಳವಣಿಗೆ ಆಗದಂತೆ ತಡೆಯುತ್ತದೆ.
 • ಒಂದು ವೇಳೆ ಚಿಗುರು ಬರುವ ಸಮಯದಲ್ಲಿ ಟಿ -ಸೊಳ್ಳೆ ಸಂತತಿ ಕಡಿಮೆ ಇದ್ದರೆ ಆ ಚಿಗುರು ಬೆಳೆಯುತ್ತದೆ.
 • ಚಿಗುರು ಬೆಳೆಯುವ ಸಮಯದಲ್ಲೂ ಎಳೆ ಚಿಗುರಿನ ಭಾಗದಲ್ಲಿ ಕುಳಿತು ರಸ ಹೀರಿ ಅದನ್ನು ಬೆಳವಣಿಗೆ ಆಗದಂತೆ ತಡೆಯುತ್ತದೆ.
 • ಚಿಗುರು ಬೆಳೆಯುವಾಗ ಹೂ ಮೊಗ್ಗು ಬರುತ್ತದೆ.

flower initiating shoot damage

 • ಹೂ ಮೊಗ್ಗು ಬರುವಾಗ ಅದರ ದಂಟನ್ನು ಚುಚ್ಚಿ ಅದರ ರಸ ಹೀರಿ ಹೂ ಮೊಗ್ಗು ಒಣಗುವಂತೆ ಮಾಡುತ್ತದೆ.
 • ಹೂ ಮೊಗ್ಗು ಬಿಟ್ಟು ಮಿಡಿ ಅಗುವ ಸಮಯದಲ್ಲಿ ಮಿಡಿಯಲ್ಲಿ ಕುಳಿತು ರಸ ಹೀರಿ ಅದು ಅಲ್ಲಿಗೆ ಬೆಳವಣಿಗೆ ಆಗದಂತೆ ತಡೆಯುತ್ತದೆ.
 • ಕೆಲವು ಗೇರು ಮರದಲ್ಲಿ ಚಿಗುರು ಭಾಗ ಒಣಗಿದಂತೆ ಕಾಣಿಸುತ್ತದೆ.
 • ಅಂತಹ ಮರಗಳು ಹೆಚ್ಚಾಗಿ ಕೀಟಕ್ಕೆ  ಆಕರ್ಷಣೆಗೊಳಗಾಗುತ್ತವೆ.
 • ಸ್ವಲ್ಪ ನಿರೋಧಕ ಶಕ್ತಿ ಪಡೆದವುಗಳು ಅಥವಾ ಆ ಸಮಯದಲ್ಲಿ ಕೀಟದ ಸಂಖ್ಯೆ ಕಡಿಮೆ ಇದ್ದರೆ ಅಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಯಿ ಕಚ್ಚಿ ಗೇರು ಬೀಜ ಆಗುತ್ತದೆ.

T mosquito damaged fruit

ಧೂಳು ಮತ್ತು ಕೀಟ:

 • ಧೂಳು ಎಲೆ ಮೇಲೆ ಚಿಗುರಿನ ಮೇಲೆ ಲೇಪನವಾದಾಗ ಕೀಟಗಳಿಗೆ ಅದರ ಮೇಲ್ಮೈ ಅಸಹಜವಾಗಿ ಕಂಡು ಅಲ್ಲಿ ಹೆಚ್ಚಿನ ಹಾನಿ ಮಾಡುವುದಿಲ್ಲ.
 • ಹಾಗಾಗಿ ರಸ್ತೆ ಬದಿಯ ಮಾವು ಗೇರಿನ ಮರದಲ್ಲಿ ಹೂವು ಹಾಳಾಗದೆ ಉಳಿಯುತ್ತದೆ.
 • ಇದು ನಮ್ಮ ಹಿರಿಯರಿಗೆ ಗೊತ್ತಿತ್ತು.
 • ಬಹುತೇಕ ಕೀಟಗಳ ನಿಯಂತ್ರಣಕ್ಕೆ ಬೂದಿಯನ್ನು ಎರಚುತ್ತಿದ್ದುದು ಇದೇ ಕಾರಣಕ್ಕೆ.
 • ಹಾಗೆಂದು ಬೆಳೆ ಬೆಳೆಯುವಾಗ ಇದನ್ನು ಮಾಡುವುದು ಕಷ್ಟ ಸಾಧ್ಯ.
 • ಅನುಕೂಲ ಇದ್ದವರು ಗೇರು ತೋಟದಲ್ಲಿ ಜೀಪು ಟ್ರಾಕ್ಟರ್ ಚಲಾಯಿಸಿ ಧೂಳು ಕುಳಿತುಕೊಳ್ಳುವಂತೆ ಮಾಡಬಹುದು.

effected flower bunch

ಕೀಟನಾಶಕಗಳು:

 • ಗೇರು ಬೆಳೆಯಲ್ಲಿ ಟಿ -ಸೊಳ್ಳೆ ನಿಯಂತ್ರಣಕ್ಕೆ ಬಳಕೆ ಮಾಡುತ್ತಿದ್ದ ಕೀಟನಾಶಕಗಳು ಎಂಡೊ ಸಲ್ಫಾನ್ , ಕಾರ್ಬರಿಲ್. ಕ್ವಿನಲ್ ಫೋಸ್ ಗಳು.
 • ಇವುಗಳಲ್ಲಿ ಮೊದಲ ಎರಡು ಮಾರುಕಟ್ಟೆಯಲ್ಲಿ ಇಲ್ಲ.
 • ಇತ್ತೀಚೆಗೆ ಇದಕ್ಕೆ ಸೇರ್ಪಡೆಯಾದದ್ದು ಲಾಂಬ್ಡ್ರಾಸೈಹೋಥ್ರಿನ್.
 • ಕ್ವಿನಾಲ್ ಫೋಸ್ ಸಹ ಟಿ ಸೊಳ್ಳೆ ನಿಯಂತ್ರಣಕ್ಕೆ ಆಗುತ್ತದೆ.

T mosquito damage

 • ಲಾಂಬ್ಡ್ರಾ ಸೈಹೋತ್ರಿನ್ ಬಳಕೆಯನ್ನು ಯಾವ ಕಾರಣಕ್ಕೆ ಶಿಫಾರಸು ಮಾಡಿದ್ದಾರೆಯೋ ತಿಳಿಯದು.
 • ಇದು ಮನುಷ್ಯರಿಗೆ ಯಾತನಾಮಯ ಮೈ ಉರಿ ಉಂಟು ಮಾಡುತ್ತದೆ.
 • ಉಸಿರಾಟದ ಸಮಸ್ಯೆ ಉಂಟು ಮಾಡುತ್ತದೆ.
 • ಕಣ್ಣಿಗೆ ತೊಂದರೆ ಇದೆ.
 • ಆದರೂ ಗೇರು ಸಂಶೋಧನಾ ನಿರ್ದೇಶನಾಲಯದವರು ಇದನ್ನು ಶಿಫಾರಸು ಮಾಡುತ್ತಾರೆ.
 • ಚಿಗುರು ಬರುವ ಸಮಯದಲ್ಲಿ  ಟಿ- ಸೊಳ್ಳೆ ನಿಯಂತ್ರಣಕ್ಕೆ ಮೋನೋಕ್ರೋಟೋಫೋಸ್ ಕೀಟನಾಶಕವನ್ನು ಬಳಸಬಹುದು.
 • ನಂತರ ಕ್ವಿನಾಲ್ ಫೋಸ್ ಕೀಟನಾಶಕವನ್ನು ಹೂ ಮೊಗ್ಗು ಬಿಡುವ ಸಮಯದಲ್ಲಿ ಮತ್ತು ಹೂ ಬಿಡುವ ಸಮಯದಲ್ಲಿ ಸಿಂಪರಣೆ  ಮಾಡಬೇಕು.
 • ಹೂ ಇಲ್ಲದ ಸಮಯದಲ್ಲಿ ಜೇನು ನೊಣಕ್ಕೆ ತೊಂದರೆ ಆಗುವ ಕೀಟನಾಶಕ ಬಳಸಬಹುದು. ಹೂ ಬಂದ ನಂತರ ಬಳಸಬಾರದು.

Aphids damage
ಕೆಲವು ಬೆಳೆಗಾರರು ಅಂಟಿನ ಹಾಳೆಯನ್ನು ನೇತಾಡಿಸುವ ವಿಧಾನದಲ್ಲಿ ಟಿ- ಸೊಳ್ಳೆಯನ್ನು ನಿಯಂತ್ರಣಕ್ಕೆ ಮಾಡಿಕೊಂಡ ಬಗ್ಗೆ ಹೇಳುತ್ತಾರೆ. ಹಾರುವ ಕೀಟ ಆದ ಕಾರಣ ಇದನ್ನು ಅನುಸರಿಸಬಹುದು.
ಒಟ್ಟಿನಲ್ಲಿ ಗೇರು ಬೆಳೆಯಲ್ಲಿ ಟಿ -ಸೊಳ್ಳೆಯನ್ನು ನಿಯಂತ್ರಣಕ್ಕೆ ತಂದರೆ ಗರಿಷ್ಟ ಪ್ರಮಾಣದಲ್ಲಿ  ಬೆಳೆ ಉಳಿಯುತ್ತದೆ. ಗೇರು ಬೆಳೆ ಲಾಭದಾಯಕವಾಗುತ್ತದೆ. ಸಾಧ್ಯವಾದಷ್ಟು ಸುರಕ್ಷಿತ ವಿಧಾನಗಳಲ್ಲಿ  ಸಿಂಪರಣೆ ಮಾಡಬೇಕು.ಮೈ ಕೈಗೆ ತೆಂಗಿನೆಣ್ಣೆಯನ್ನು ಸವರಿಕೊಳ್ಳುವುದು ಉತ್ತಮ ಮುಂಜಾಗ್ರತೆ. ಸಿಂಪರಣೆ ಮಾಡಿದ ತಕ್ಷಣ ಮೈಗೆ ಮತ್ತೆ ತೆಂಗಿನೆಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಮೈ ಉರಿ ಬಾರದು.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!