ದಾಳಿಂಬೆಯ ಹೊಸ ಹೈಬ್ರೀಡ್ ತಳಿ.

pomegranate

ದಾಳಿಂಬೆ ಬೆಳೆಗಾರರಿಗೆ ಅಧಿಕ ಇಳುವರಿ ನೀಡಬಲ್ಲ, ಆಕರ್ಷಕ ಬಣ್ಣದ ತಳಿಯಾಗಿ ಪರಿಚಯಿಸಲ್ಪಟ್ಟದ್ದು ಸೋಲಾಪುರ ಲಾಲ್.
ಭಾರತ ಸರಕಾರದ ಕೃಷಿ ಅನುಸಂಧಾನ ಪರಿಷತ್ತು ದಾಳಿಂಬೆ ಬೆಳೆ  ಕುರಿತಂತೆ  ಸಂಶೋಧನೆ ನಡೆಸುವುದಕ್ಕಾಗಿ ಮಹಾರಾಷ್ಟ್ರದ ಸೋಲಾಪುರದಲ್ಲಿ  ರಾಷ್ಟ್ರೀಯ  ದಾಳಿಂಬೆ ಸಂಶೋಧನಾ ಸಂಸ್ಥೆಯನ್ನು  ಸ್ಥಾಪಿಸಿದೆ. ಇಲ್ಲಿಂದ ಬಿಡುಗಡೆಯಾದ ಅಧಿಕ ಪೋಷಕಾಂಶ ಒಳಗೊಂಡ ಹೈಬ್ರೀಡ್ ದಾಳಿಂಬೆ ಸೋಲಾಪುರ ಲಾಲ್.

pomegranate

  • ಈ ಸಂಸ್ಥೆಯು ದಾಳಿಂಬೆ  ಬೆಳೆಗಾರರಿಗೆ, ಬೇಸಾಯಕ್ಕೆ  ಸೂಕ್ತವಾಗುವ ಬೇರೆ  ಬೇರೆ ದಾಳಿಂಬೆ  ತಳಿಗಳನ್ನು  ಪರಿಚಯಿಸಿದೆ.
  • ಮೊದಲಾಗಿ ಗಣೇಶ ತಳಿಯನ್ನು   ಪರಿಚಯಿಸಿ ನಂತರ 2003 -04 ರಲ್ಲಿ ಭಗ್ವಾ ಹೈಬ್ರೀಡ್  ತಳಿಯನ್ನು  ಬಿಡುಗಡೆ ಮಾಡಲಾಗಿತ್ತು.
  • ಅನಂತರ ಸೂಪರ್ ಭಗ್ವಾ.  ರುಬಿ  ಮುಂತಾದ ಈ ತಳಿ  ಬಂದ ನಂತರ  ದಾಳಿಂಬೆ ಯಲ್ಲಿ   ಮಹಾನ್ ಕೃಷಿ  ಕ್ರಾಂತಿಯೇ ಆಯಿತು.
  • 2016 -17  ನೇ ಇಸವಿಯಲ್ಲಿ,  ಇದರ ಬೇಸಾಯ ಉತ್ತುಂಗಕ್ಕೆ ಜಿಗಿದು ದಾಖಲೆಯ  122%   ಬೆಳೆ ಪ್ರದೇಶ ಮತ್ತು  297 % ಉತ್ಪಾದನೆಯಾಯಿತು.

ಆದರೆ ಈ ಬೆಳೆಗೆ ಅತಿಯಾಗಿ ಬ್ಯಾಕ್ಟೀರಿಯಾ ಸೊರಗು ರೋಗದ ತೊಂದರೆ ಉಂಟಾಯಿತು. ಮೂರು ನಾಲ್ಕು ವರ್ಷಗಳಲ್ಲಿ ಗಿಡಗಳೇ ಸಾಯುವ ಸ್ಥಿತಿಗೆ ತಲುಪಿದವು. ದಾಳಿಂಬೆ  ಬೆಳೆಸುವುದೆಂದರೆ  ರೋಗದ ಜೊತೆ  ಸೆಣಸಾಡುವುದು ಮತ್ತು ಕೊನೆಗೆ ಸೋಲುವುದೇ ಆಗಿತ್ತು. ಆದಾಗ್ಯೂ ರೈತರು ದಾಳಿಂಬೆ ಬೆಳೆಸಿ ಅದೃಷ್ಟ ಪರೀಕ್ಷಿಸುತ್ತಿದ್ದರು .

  •  ಈ ಸಮಸ್ಯೆಯನ್ನು ನಿವಾರಿಸಲು ರಾಷ್ಟ್ರೀಯ  ದಾಳಿಂಬೆ ಸಂಶೋಧನಾ ಸಂಸ್ಥೆಯು  2017 ರಲ್ಲಿ ಒಂದು  ಹೊಸ  ಹೈಬ್ರೀಡ್ ತಳಿಯನ್ನು ಅಭಿವೃದ್ಧಿಪಡಿಸಿದೆ.
  • ಅದುವೇ ಸೋಲಾಪುರ್ ಲಾಲ್ . ಅಥವಾ ಸೋಲಾಪುರ್ ರೆಡ್.
  • ಇದನ್ನು ಜೈವಿಕವಾಗಿ ಬಲವರ್ಧಿತ  ದಾಳಿಂಬೆ  ಎಂದೇ ಕರೆಯಲಾಗಿದೆ.
  • ಈ ತಳಿಯ ಆವಿಷ್ಕಾರವು ಜಗತ್ತಿನ ದಾಳಿಂಬೆ  ಬೇಸಾಯಕ್ಕೇ ಭಾರತದ ಮಹಾನ್ ಕೊಡುಗೆ ಎಂದೇ ಬಿಂಬಿಸಲಾಗಿದೆ.

ಬಲವರ್ಧಿತ ತಳಿ:

Inside the fruit

  • ಜೈವಿಕವಾಗಿ ಬಲವರ್ಧಿತ ಎಂದರೆ  ತಳಿ ಅಭಿವೃದ್ಧಿ ಮಾಡುವಾಗ  ಹೆಚ್ಚುವರಿ ಸತ್ವಾಂಶಗಳು ಅಡಕವಾಗುವಂತೆ ಮಾಡುವುದು.
  • ಅದು ಜೈವಿಕ ತಂತ್ರಜ್ಞಾನದ ಮೂಲಕ. ಗೋಲ್ಡನ್ ರೈಸ್ , ಟೊಮಾಟೋ, ಕ್ಯಾರೆಟ್  ಸೇರಿದಂತೆ  ನಮ್ಮ ದೇಶದಲ್ಲಿ ಹಲವಾರು ತಳಿಗಳನ್ನು  ಈ ರೀತಿಯಲ್ಲಿ ಅಭಿವೃದ್ದಿಪಡಿಸಲಾಗಿದೆ.
  • ಇದು ಸಾಮಾನ್ಯ ಒಣ ಭೂಮಿಗೆ ಸೂಕ್ತವಾದ ತಳಿಯಾಗಿದೆ.
  • ಇದು ಮಾನವ ದೇಹದ ಪೋಷಕಾಂಶ ಕೊರತೆಯನ್ನು ನೀಗಿಸುವುದೇ ಅಲ್ಲದೆ ಅಧಿಕ ಇಳುವರಿಯ ಮೂಲಕ ಆದಾಯ ಹೆಚ್ಚಳಕ್ಕೆ  ನೆರವಾಗಲಿದೆ.

ವಿಶೇಷತೆ :

Fruit pulp

  • ಸೋಲಾಪುರ್ ಲಾಲ್ ತಳಿಯು ಮಧ್ಯಮ ಗಾತ್ರದ ಗಿಡ. ಹಣ್ಣು ಕಡು ಕೆಂಪು,
  • ಹಣ್ಣಿನ ತೂಕ 280 ರಿಂದ 290 ಗ್ರಾಂ, 
  • ಹೆಕ್ಟೇರಿಗೆ   23 -27 ಟನ್ ಇಳುವರಿ.
  • ಸಿಪ್ಪೆಯ ದಪ್ಪ 3.3 -3.5ಮಿಲಿ ಮೀ. ಸಣ್ಣ  ಬೀಜ ,
  • 45 -50 %  ರಸ ,  17.5 – 17. 7 ಟಿ ಎಸ್ ಎಸ್,
  • 19.4 ರಿಂದ 19.8 ವಿಟಮಿನ್ ಸಿ,  ಕಬ್ಬಿಣಾಂಶ 5.6 – 6.1 mg/100g.ಮತ್ತು ಸತುವಿನ ಅಂಶ 0.64-0.69 mg/100g ಇದೆ.

 ಈ ತಳಿಯು ಇನ್ನೂ ರೈತರ ಹೊಲಕ್ಕೆ ದೊಡ್ಡ ಪ್ರಮಾಣದಲ್ಲಿ  ಪ್ರವೇಶವಾಗಬೇಕಷ್ಟೇ. ಈಗಾಗಲೇ ಇದು ಸೋಲಾಪುರದ ಸುತ್ತಮುತ್ತ ಕೆಲವು ರೈತರ ಹೊಲದಲ್ಲಿ ಬೆಳೆಯಲಾಗುತ್ತಿದ್ದು, ಇವರು ಇದರಲ್ಲಿ ಬದುಕು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇನ್ನೇನು ಕೆಲವೇ ಸಮಯದಲ್ಲಿ ಸಸಿಗಳು ಲಭ್ಯವಾಗಿ ಈ ತಳಿಯ ಮೂಲಕ ದಾಳಿಂಬೆ ಬೇಸಾಯದಲ್ಲಿ  ಮಹತ್ತರ ಬದಲಾವಣೆ ಆಗಬಹುದು.

 
 

error: Content is protected !!