ಸಾವಯವ ಬಾಳೆ ಬೇಸಾಯ ಅಸಾಧ್ಯವಲ್ಲ.
ಸಾವಯವ ವಿಧಾನದಲ್ಲಿ ಬಾಳೆ ಬೆಳೆಸುವುದಾದರೆ ಆಗಾಗ ಪೋಷಕಗಳನ್ನು ಕೊಡುತ್ತಾ ತೀವ್ರ ನಿಗಾದಲ್ಲಿ ಬೆಳೆ ಬೆಳೆಸಬೇಕಾಗಿಲ್ಲ. ಬಾಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತದೆಯೋ ಅಷ್ಟನ್ನು ಒಂದು ಇಲ್ಲವೇ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕು. ಭಾರೀ ಗೊನೆ ಬಾರದಿದ್ದರೂ ಸರಾಸರಿ 25 ಕಿಲೋ ತೂಕದ ಗೊನೆ ಪಡೆಯಬಹುದು. ತಿನ್ನುವ ಹಣ್ಣು ಆದ ಕಾರಣ ಸಾಧ್ಯವಾದಷ್ಟು ರಾಸಾಯನಿಕ ಬಳಕೆ ಕಡಿಮೆ ಮಾಡಿ ಬೆಳೆ ಬೆಳೆದರೆ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಯಾವ ಯಾವ ಸಾವಯವ ಪೋಷಕಗಳನ್ನು ಬಳಸಿ ಉತ್ತಮ ಬಾಳೆ ಗೊನೆ ಪಡೆಯಬಹುದು…