ದರಗು ಹಾಸಿದರೆ ನೀರು ಕಡಿಮೆ ಸಾಕು. ಮಣ್ಣು ಫಲವತ್ತಾಗುತ್ತದೆ.
ಚಳಿಗಾಲ ಬಂದಿದೆ. ಎಲ್ಲಾ ಮರಮಟ್ಟುಗಳೂ ತಮ್ಮ ಎಲೆಗಳನ್ನು ಉದುರಿಸಿವೆ. ನೆಲದಲ್ಲಿ ಬಿದ್ದಿರುವ ಈ ದರಗನ್ನು ಯಾವುದೇ ಕಾಣಕ್ಕೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಗಲು ಬಿಡಬೇಡಿ.ಹೊಲಕ್ಕೆ ಹಾಕಿ. ಮುಂದಿನ ವರ್ಷವೇ ಗಮನಾರ್ಹ ಬದಲಾವಣೆ ಗಮನಿಸಿ. ಫಲವತ್ತತೆ ನವೀಕರಣ: ಜಪಾನ್ ದೇಶದ ಸಹಜ ಕೃಷಿಯ ಜನಕ ಎಂದೇ ಹೆಸರುವಾಸಿಯಾದ, ಫುಕುಫೋಕಾರವರು ತಾವು ಬೆಳೆಸಿ ಅಲ್ಲಿಂದ ತನಗೆ ಬೇಕಾದ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದುದನ್ನು ಅಲ್ಲೇ ಬಿಡುತ್ತಿದ್ದರಂತೆ. ಇದರಿಂದ ಕೃಷಿ ಮಾಡಿದ ಹೊಲದ ಫಲವತ್ತತೆ ವರ್ಷದಿಂದ ವರ್ಷ ಉತ್ತಮವಾಗುತ್ತಾ…