ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?
ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…