ಕಡಿಮೆ ಖರ್ಚಿನಲ್ಲಿ ದಿಡೀರ್ ತರಕಾರಿ ಚಪ್ಪರ.
ಬೇಸಿಗೆಯಲ್ಲಿ ತರಕಾರಿ ಬೆಳೆದರೆ ಲಾಭವಿದೆ. ಈ ಸಮಯದಲ್ಲಿ ಮದುವೆ, ಗ್ರಹಪ್ರವೇಶ, ಜಾತ್ರೆ, ಮುಂತಾದ ಕಾರ್ಯಕ್ರಮಗಳು ಅಧಿಕ. ಬಳ್ಳಿ ತರಕಾರಿಗಳನ್ನು ಚಪ್ಪರ ಹಾಕಿ ಬೆಳೆದರೆ ಗುಣಮಟ್ಟದ ತರಕಾರಿ ಸಿಗುತ್ತದೆ. ಸಾಂಪ್ರದಾಯಿಕ ಚಪ್ಪರ ಮಾಡುವ ವಿಧಾನ ಲಾಭದಾಯಕವಲ್ಲ. ಅದರ ಬದಲು ಚಪ್ಪರಕ್ಕಾಗಿಯೇ ಇರುವ ಬಲೆಗಳು ಅಥವಾ ಪ್ಯಾಕಿಂಗ್ ಹಗ್ಗ ಬಳಸಿದರೆ ಮರದ ಅಗತ್ಯ ತುಂಬಾ ಕಡಿಮೆ. ಬೇಸಿಗೆಯ ತರಕಾರಿ ಲಾಭದಾಯಕ: ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಇಳುವರಿ ಹೆಚ್ಚು ಬರುತ್ತದೆ. ಬೇಗ ಇಳುವರಿ ಬರುತ್ತದೆ. ಬಿಸಿಲು ಚೆನ್ನಾಗಿ ಇರುವ ಕಾರಣ ರೋಗ,…