ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ –ಬೆಳೆಗಾರರು ಎಚ್ಚರಿಕೆಯಿಂದಿರಿ.
ಕಳೆದ ವಾರ 50000 ದ ಆಸುಪಾಸಿನಲ್ಲಿದ್ದ ಕರಿಮೆಣಸಿನ ಬೆಲೆ ದಿಡೀರ್ ಆಗಿ ಒಂದೇ ವಾರದಲ್ಲಿ 56,000 ಕ್ಕೆ ಏರಿಕೆಯಾಗಿದೆ. ಕರಿಮೆಣಸು ಇದೆಯೇ ಎಂದು ಕೇಳುವ ಸ್ಥಿತಿ ಉಂಟಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ದರ 60,000 ತನಕ ಏರಿದೆ. ಇನ್ನೂ ಏರಿಕೆ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಮೆಣಸು ಬೆಳೆಯುವ ದೇಶಗಳಲ್ಲಿ ಉತ್ಪನ್ನದ ಕೊರೆತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ ಬೆಲೆ ಕಳೆದ ವರ್ಷ 50,000 ದ ಆಸು ಪಾಸಿಗೆ ಬಂದಿತ್ತು. ಒಮ್ಮೆ 55,000…