ಉತ್ಕೃಷ್ಟ ಗುಣಮಟ್ಟದ ಕರಿಮೆಣಸು ಉತ್ಪಾದನೆ.
ಹೆಸರು ಕರಿಮೆಣಸು- ಕಪ್ಪಗಿದ್ದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ – ಬೇಡಿಕೆ. ಬೆಳೆಗಾರರು ಅದನ್ನು ಮನಬಂದಂತೆ ಸಂಸ್ಕರಣೆ ಮಾಡಿದರೆ ಗುಣಮಟ್ಟ ಬರಲಾರದು. ಸೂಕ್ತ ಸಂಸ್ಕರಣಾ ವಿಧಾನವನ್ನು ಪಾಲಿಸಿದರೆ ಮಾತ್ರ ಗುಣಮಟ್ಟದ ಉತ್ಪನ್ನ ಪಡೆಯಬಹುದು. ಮೆಣಸಿನ ಗುಣಮಟ್ಟದ ಬಗ್ಗೆ ಹೇಳುವುದಾದರೆ ಒಂದು ಲೀ. ಹಿಡಿಯುವ ಪಾತ್ರೆಯಲ್ಲಿ ಒಣಗಿಸಿದ ಮೆಣಸನ್ನು ಹಾಕಿ ಅದನ್ನು ತೂಗಿದಾಗ ಅದು 600 ಗ್ರಾಂ ನಷ್ಟು ತೂಗಬೇಕು. ತೇವಾಂಶ ಮಾಪಕದಲ್ಲಿ ಹಾಕಿದಾಗ ಅದರಲ್ಲಿ 10 % ತೇವಾಂಶಕ್ಕಿಂತ ಕಡಿಮೆ ಇರಬೇಕು. ಇದಕ್ಕಿಂತ ಹೆಚ್ಚಾದರೆ ಅದು ಒಣಗಲಿಲ್ಲ ಎಂದರ್ಥ….