ವಿಯೆಟ್ನಾಂ ಮೀರಿಸುವ ಕರಿಮೆಣಸು ಬೆಳೆಗಾರರು ಇವರು.
ವಿಯೆಟ್ನಾಂ ದೇಶದಲ್ಲಿ ಕರಿಮೆಣಸು, ಗೋಡಂಬಿ ಬೆಳೆಯನ್ನು ತೀರಾ ವಾಣಿಜ್ಯಿಕವಾಗಿ ಬೆಳೆದು ಗರಿಷ್ಟ ಇಳುವರಿ ಪಡೆಯುತ್ತಾರಂತೆ. ಅಲ್ಲಿರುವ ಎಲ್ಲಾ ಅನುಕೂಲಗಳು ನಮಲ್ಲೂ ಇದ್ದಿದ್ದರೆ ನಮ್ಮ ರೈತರೂ ಅವರನ್ನು ಮೀರಿಸುತ್ತಿದ್ದರು. ಆದರೂ ನಮ್ಮ ರೈತರು ಹಿಂದೆ ಬಿದ್ದಿಲ್ಲ. ಅಂದು -ಇಂದು: ಹಿಂದೆ ನಮಗೆ ನಮ್ಮ ಊರು, ಹೆಚ್ಚೆಂದರೆ ರಾಜ್ಯ , ಹೊರಗಡೆಯ ಪರಿಚಯ ಇರಲಿಲ್ಲ. ಹೆಚ್ಚೇಕೆ ಬೆಂಗಳೂರಿಗೆ ಹೋಗಿ ಎನಾದರೂ ತಿಳಿದುಕೊಳ್ಳುವುದೂ ಸಹ ಕಷ್ಟವಿತ್ತು. ಸ್ಥಳೀಯ ಬೆಳೆ ಮಾಹಿತಿಗಳಲ್ಲೇ ಕೃಷಿ ಮಾಡುತ್ತಿದ್ದೆವು. ಕೃಷಿ ವಿಜ್ಞಾನ, ತಂತ್ರಜ್ಞಾನಗಳು ಇದ್ದವಾದರೂ ಅದನ್ನು ಪಡೆದುಕೊಳ್ಳಲು…