
ಜೇಡರ ಬಲೆಗಳು ನಮಗೆಷ್ಟು ಉಪಕಾರ ಮಾಡುತ್ತವೆ ಗೊತ್ತೇ?
ಸೃಷ್ಟಿಯ ವ್ಯವಸ್ಥೆಗಳನ್ನು ನಾವು ಕಲ್ಪನೆ ಮಾಡುವುದೂ ಸಾಧ್ಯವಿಲ್ಲ ಸೃಷ್ಟಿಗೆ ಸೃಷ್ಟಿಯೇ ಸರಿಸಾಠಿ. ಇದರ ಕುರಿತಾದ ಕೆಲವು ಸಾಕ್ಷ್ಯಗಳು ಇಲ್ಲಿವೆ. ಹೀಗೇ ಒಮ್ಮೆ ಬಿಡುವು ಮಾಡಿಕೊಂಡು ಕತ್ತೆಲೆ ಆದ ನಂತರ ನಿಮ್ಮ ಹೊಲಕ್ಕೆ ಹೋಗಿ ನೆಲಮಟ್ಟದಲ್ಲಿ ಟಾರ್ಚ್ ಲೈಟ್ ಬಿಟ್ಟು ನೋಡಿ, ಸ್ವಲ್ಪ ಹೊತ್ತು ಗಮನ ಇಟ್ಟು ಟಾರ್ಚ್ ಬೆಳೆಕು ಬೀಳುವ ಕಡೆಯೆಲ್ಲಾ ನೋಡಿ. ಏನು ಕಾಣುತ್ತದೆ ಎಂದು ಗಮನಿಸಿ. ಮತ್ತೇನೂ ಕಾಣುವುದಿಲ್ಲ. ನೆಲದಲ್ಲಿ ಟಾರ್ಚ್ ಲೈಟಿನ ಬೆಳೆಕಿಗೆ ಪ್ರತಿಫಲನ ಕೊಡುವ ಮಿಣುಕು ಕಾಣಿಸುತ್ತದೆ. ಹಾಗೆಯೇ ಒಂದು ಮಿಣುಕಿನ…