ಟೊಮ್ಯಾಟೋ : ಉತ್ತಮ ಇಳುವರಿಗಾಗಿ ಸಮಗ್ರ ರೋಗ ನಿರ್ವಹಣೆ
ಟೊಮಟೋ ಬೆಳೆಗಾರರು ಕಾಲ ಕಾಲಕ್ಕೆ ಬರುವ ರೋಗ ಸಮಸ್ಯೆಗೆ ಈ ರೀತಿ ಪರಿಹಾರ ಕ್ರಮ ಕೈಗೊಳ್ಳಬಹುದು. ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವ ಜನಪ್ರಿಯ ತರಕಾರಿ ಬೆಳೆಯಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಲಾಗುತ್ತಿದೆ. ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ಸೂಕ್ತ. ರಸಸಾರ 6 ರಿಂದ 7 ಇದ್ದಲ್ಲಿ ಬೆಳೆಗೆ ಅನುಕೂಲ. ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು. ಇತ್ತೀಚಿನ…