ಟೊಮ್ಯಾಟೋ : ಉತ್ತಮ ಇಳುವರಿಗಾಗಿ ಸಮಗ್ರ ರೋಗ ನಿರ್ವಹಣೆ

by | May 5, 2021 | Vegetable Crops (ತರಕಾರಿ ಬೆಳೆ) | 0 comments

ಟೊಮಟೋ ಬೆಳೆಗಾರರು ಕಾಲ ಕಾಲಕ್ಕೆ ಬರುವ ರೋಗ ಸಮಸ್ಯೆಗೆ ಈ ರೀತಿ ಪರಿಹಾರ ಕ್ರಮ ಕೈಗೊಳ್ಳಬಹುದು.

 • ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವ ಜನಪ್ರಿಯ ತರಕಾರಿ ಬೆಳೆಯಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಲಾಗುತ್ತಿದೆ.
 • ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ಸೂಕ್ತ. ರಸಸಾರ 6 ರಿಂದ 7 ಇದ್ದಲ್ಲಿ ಬೆಳೆಗೆ ಅನುಕೂಲ.
 • ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು.
 • ಇತ್ತೀಚಿನ ದಿನಗಳಲ್ಲಿ ಉತ್ತಮ ಇಳುವರಿ ಕೊಡಬಲ್ಲ ತಳಿಗಳು ಲಭ್ಯವಿದ್ದು, ಹೆಕ್ಟರ್‍ಗೆ 100 ರಿಂದ 250 ಗ್ರಾಂ ಬಿತ್ತನೆ ಬೀಜ ಅವಶ್ಯಕತೆ ಇರುತ್ತದೆ.
Tomato disease infected

ಸಸಿಮಡಿ ತಯಾರಿಕೆ:

 • ಸಸಿಮಡಿ ತಯಾರಿಕೆ ವೇಳೆ 3 ರಿಂದ 4 ಕೊಟ್ಟಿಗೆ ಗೊಬ್ಬರ ಹಾಗೂ 2 ಕಿಲೋ ಗ್ರಾಂ ಕ್ಯಾಲ್ಸಿಯಂ ಮ್ಯಗ್ನಿಷಿಯಮ್ ಗಂಧಕವುಳ್ಳ ಗೊಬ್ಬರ ಪ್ರತಿ ಮಡಿಗಳಿಗೆ ಕೊಟ್ಟಲ್ಲಿ ಮಣ್ಣಿನ ಫಲವತ್ತತೆ ಉತ್ತಮಗೊಂಡು ಟ್ರೈಕೋಡರ್ಮಾ ಶಿಲೀಂಧ್ರ ನಾಶಕದಿಂದ ಬೀಜೋಪಚರಿಸಿದ ಬೀಜಗಳ ಬಿತ್ತನೆ ಮಾಡಿ ತೆಳುವಾಗಿ ಮಣ್ಣಿನಿಂದ ಮುಚ್ಚಬೇಕು.
 • ಮೊಳಕೆ ಒಡೆದ 4 ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

ಹೊಲ ಸಿದ್ದತೆ:

 • ನಾಟಿ ಮಾಡಲು ಸಿದ್ಧಪಡಿಸಿದ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಭೂಮಿ ಹದಮಾಡಿ, ನಿಗದಿತ ಪ್ರಮಾಣದ ಕಾಂಪೋಸ್ಟ್ ಕೊಟ್ಟಿಗೆ ಗೊಬ್ಬರ ಬಳಸಿ ಭೂಮಿ ಸಿದ್ಧತೆ ಮಾಡಬೇಕು.
 •   ಶಿಫಾರಸ್ಸು ಮಾಡಿದ ಶೇ. 50 ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ(50 ಕೆ.ಜಿ), ಪೋಟ್ಯಾಷ್(30 ಕೆ.ಜಿ) ಹಾಗೂ  ಸಮೃದ್ಧಿ ಅಥವಾ ಸೆಟ್‍ರೈಟ್ ಕೆಂಪು ಮಣ್ಣಿನಲ್ಲಿ ಪ್ರದೇಶಗಳಿಗೆ ಬಳಸಿದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು.

ಮುಖ್ಯ ರೋಗಗಳು:

Wilt disease

ಎಲೆ ಚುಕ್ಕೆ ರೋಗ ಹಾಗೂ ಅಂಗಮಾರಿ:

 • ಅಲ್ಟರ್‍ನೇರಿಯ, ಸೆಪ್ಟೋರಿಯ ಶಿಲೀಂಧ್ರಗಳು ಈ ರೋಗವನ್ನು ಪೋಟಾಷ್ ಕೊರತೆ ಇರುವ ಭೂಮಿಗಳಲ್ಲಿ ಯಥೇಚ್ಛವಾಗಿ ಹರಡುತ್ತವೆ.
 • ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಪರಿವರ್ತನೆಗೊಂಡು ಎಲೆ ಅಂಗಮಾರಿ ರೋಗ ಸೃಷ್ಠಿಯಾಗಿ ಎಲೆಗಳು ಒಣಗುತ್ತವೆ.
 • ಮ್ಯಾಂಕೋಜಿಬ್ 2 ಗ್ರಾಂ. ಹಾಗೂ ಬಯೋ 20 ಅಥವಾ ಬಯೋವಿಟಾ 50 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಲ್ಲಿ ರೋಗ ನಿರ್ವಹಣೆ ಸಾಧ್ಯ.

ಎಲೆ ಮುದುಡು ರೋಗ:

 • ಗಿಡಗಳ ಎಲೆಗಳು ಪೊದೆಯಾಕಾರಗೊಂಡು ಎಲೆಯ ಬೆಳವಣಿಗೆ ಕುಂಠಿತಗೊಂಡು, ಎಲೆ ಗಾತ್ರ ಕಡಿಮೆಯಾಗಿ ಕಾಯಿ ಕಟ್ಟುವಿಕೆ ಕ್ಷೀಣಿಸುವುದು
 • ಬೇಸಿಗೆ ಕಾಲದಲ್ಲಿ ರಸ ಹೀರುವ ಕೀಟಗಳಲ್ಲಿ ಉದ್ಭವಗೊಂಡ ಮಾರಕ ವೈರಸ್ ರೋಗವು ಗಿಡದಿಂದ ಗಿಡಗಳಿಗೆ ಹರಡುತ್ತದೆ.
 • ಭೂಮಿಯಲ್ಲಿ ಜಿಂಕ್ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.
 • ಹುಳಿ ಮಜ್ಜಿಗೆ ಅಥವಾ ಗೋಮೂತ್ರ 750 ಮೀ.ಲೀ ಪ್ರತಿ 15 ಲೀಟರ್ ಟ್ಯಾಂಕ್‍ಗೆ ಬೆರೆಸಿ ಸಿಂಪಡಿಸಬೇಕು.
 • ಅತಿಯಾದ ಮುದುಡು ಪೀಡಿತ ಗಿಡವನ್ನು ಹೊಲದಿಂದ ತೆಗೆದು ನಾಶಪಡಿಸಬೇಕು.

ಸೊರಗು ರೋಗ:]

wilt disease
 • ಈ ರೋಗದಲ್ಲಿ ಎರಡು ವಿಧಗಳಿವೆ ಪ್ಯೂಸೇರಿಯಂ ಸೊರಗು ರೋಗ ಹಾಗೂ ದುಂಡಾಣು ಸೊರಗು ರೋಗ. ಶಿಲೀಂಧ್ರ ಸೊರಗು ತುತ್ತಾದ ಗಿಡಗಳು ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಕೆಳಗೆ ಬಾಗುತ್ತವೆ.
 • ನಂತರ ಗಿಡದ ಎಲೆಗಳು ಪೂರ್ತಿ ಒಣಗುತ್ತವೆ. ರೋಗ ಪೀಡಿತ ಗಿಡಗಳನ್ನು ನಾಶಪಡಿಸಬೇಕು.
 • ಸೊರಗು ಪೀಡಿತ ಹಾಗೂ ಸುತ್ತಲಿರುವ ಆರೋಗ್ಯ ಗಿಡಗಳಿಗೆ ಸಿಓಸಿ (ತಾಮ್ರದ ಅಕ್ಸಿಕ್ಲೋರೈಡ್) 0.3 ಗ್ರಾಂ. ಅಥವಾ ಕಾರ್ಬೇನಡೆಂಜಿಮ್ 0.2% ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ನೆನೆಯುವಂತೆ ಸುರಿಯಬೇಕು.
 • ರೋಗ ನಿರೋಧಕ ಶಕ್ತಿ ಹೊಂದಿದ ತಳಿಗಳನ್ನು ಬೆಳೆಸಬೇಕು.

ಕೀಟಗಳು:

 • ಎಲೆ ತಿನ್ನುವ ಕೀಟ ಇದರ ಮೊದಲ ಹಂತದ ಮರಿ ಹುಳುಗಳು ಎಲೆಯ ಹಸಿರು ಪದಾರ್ಥವನ್ನು ಕೊರೆದು ತಿನ್ನುತ್ತವೆ.
 • ಡೈಮೀಥೆಯೇಟ್ 1.5 ಮಿ.ಲೀ ಅಥವಾ ಫಸ್ಪೋಮೀಡಾನ್ 0.5 ಮೀ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿಬೇಕು.

ಹಣ್ಣು ಕೊರೆಯುವ ಹುಳ:

 • ಮರಿ ಹುಳುಗಳು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ನಂತರ ಹಣ್ಣು ಕೊಳೆಯಲು ಆರಂಭಿಸುತ್ತದೆ.
 • ಕಾರ್ಬರಿಲ್ 3 ಗ್ರಾಂ. ಅಥವಾ ಬೇವಿನ ಎಣ್ಣೆ 5 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಪೋಷಕಾಂಶ ನ್ಯೂನತೆಗಳು:

 • ಭೂಮಿಯಲ್ಲಿ ಸುಣ್ಣದ ಅಂಶ ಕಡಿಮೆಯಾದಾಗ ಸಸ್ಯಗಳಲ್ಲಿ ಇಳುವರಿ ಕೊಡಬಲ್ಲ ಕಾಯಿ ಹಣ್ಣುಗಳು ಕ್ಯಾಲ್ಸಿಯಂ ಕೊರತೆಯಿಂದ ಕಪ್ಪು ಕಂದು ಬಣ್ಣಕ್ಕೆ ತಿರುಗುತ್ತವೆ.
 • ಕ್ಯಾಲ್ಸಿಯಂ ಯುಕ್ತ ಪೋಷಕಾಶಗಳಾದ ಸುಣ್ಣದ ಪುಡಿ 2.0 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ  ಬೆರೆಸಿ ಕಾಯಿ ಕಟ್ಟುವ ಸಂದರ್ಭದಲ್ಲಿ ಸಿಂಪಡಿಸಿದಲ್ಲಿ ಈ ನ್ಯೂನತೆ ನಿವಾರಿಸಬಹುದು.

ಲೇಖಕರು;  ಡಾ. ಜûಹೀರ್ ಅಹಮದ್ ಬಿ., ಮತ್ತು  ಡಾ.ರಾಜು ಜಿ. ತೆಗ್ಗೆಳ್ಳಿ  ಡಾ. ವಾಸುದೇವ ನಾಯ್ಕ, ಡಾ. ಶ್ರೀನಿವಾಸ ಬಿ.ವಿ  ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ , ನಿಸರ್ಗ ಹೆಚ್. ಎಸ್ , ಡಾ. ಪುಷ್ಪಲತಾ. ಎಂ.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!