ರೈತರು ತಮ್ಮ ಬೆಳೆಗಳಿಗೆ ಬರುವ ಶಿಲೀಂದ್ರ ರೋಗಗಳನ್ನು ಧೀರ್ಘಾವಧಿ ತನಕ ನಿಯಂತ್ರಣಕ್ಕೆ ತರಲು ಟ್ರೈಕೋಡರ್ಮಾ ಬಳಸಬಹುದು. ಇದು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಶೋಧನಾ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಲ್ಲಿ ಲಭ್ಯ ಇರುತ್ತದೆ.
ಇತ್ತಿಚೀನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಶಿಲೀಂದ್ರ , ಕೀಟ ನಾಶಕಗಳ ಬಳಕೆ ಹೆಚ್ಚುತ್ತಿದೆ. ಸಸ್ಯಗಳಲ್ಲಿ ಕಂಡು ಬರುವರೋಗದ ಹತೋಟಿಯನ್ನು ರಾಸಾಯನಿಕ ಶಿಲೀಂಧ್ರನಾಶಕಗಳಿಂದ ಮಾಡುವುದು ಒಂದು. ಆದರೆ ಅದರಲ್ಲಿ ರಾಸಾಯನಿಕ ಶೇಷ ವಸ್ತುಗಳು ಮಣ್ಣಿನಲ್ಲಿ ಹಾಗೂ ಸಸ್ಯ ಭಾಗಗಳಲ್ಲಿ ಉಳಿದುಕೊಳ್ಳುವುವು. ಇದರಿಂದ ಮಣ್ಣಿನ ಆರೋಗ್ಯ ಮತ್ತು ಆಹಾರದ ಆರೋಗ್ಯದ ಮೇಲೆ ಪ್ರತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಇದೆ. ರಾಸಾಯನಿಕ ಶಿಲೀಂಧ್ರನಾಶಕಗಳಿಗೆ ದುಬಾರಿ ಬೆಲೆ, ಇದರಿಂದ ತಾತ್ಕಾಲಿಕ ರೋಗ ಹತೋಟಿ ಸಾಧ್ಯ. ನಿಗದಿತಕಾಲದಲ್ಲಿ ಪುನರ್ಬಳಕೆ ಮಾಡಬೇಕು. ಇದರಿಂದ ಉತ್ಪಾದನಾ ವೆಚ್ಚವು ಹೆಚ್ಚಾಗುವುದು. ಇಂತಹ ಸಂದರ್ಭದಲ್ಲಿ ಜೈವಿಕ ಹತೋಟಿ ಕ್ರಮಗಳು ಸಾವಯವ ಕೃಷಿಯಲ್ಲಿ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಮತ್ತು ಪರಿಸರ ಸ್ನೇಹಿಯಾಗಿದೆ.
ಟ್ರೈಕೋಡರ್ಮಾ ಹೇಗೆ ಕೆಲಸ ಮಾಡುತ್ತದೆ?
- ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು, ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕರೀತಿಯಲ್ಲಿ ಹತೋಟಿ ಮಾಡುವ ಸಾಮರ್ಥ್ಯ ಹೊಂದಿದೆ.
- ಇದು ಒಂದು ಉಪಯುಕ್ತವಾದ ಶಿಲೀಂದ್ರ ಜೀವಿ. ಸರ್ವೆಸಾಮಾನ್ಯವಾಗಿ ಟೈಕೋಡರ್ಮಾ ವಿರಿಡೆ, ಟ್ರೈಕೋಡರ್ಮಾ ಹಾರ್ಜಿಯಾನಮ್ ಮತ್ತು ಟ್ರೈಕೋಡರ್ಮಾ ಕೋನಿಂಗಿ ಎಂಬ ಪ್ರಬೇಧಗಳನ್ನು ವ್ಯಾಪಕವಾಗಿ ವಾಣಿಜ್ಯ ಮಟ್ಟದಲ್ಲಿ ಉತ್ಪಾದಿಸಲಾಗುತ್ತದೆ.
- ಸಸ್ಯ ರೋಗಗಳ ಹತೋಟಿಗೆ ಬಳಸಲಾಗುತ್ತದೆ. ಈ ಉಪಯೋಗಿ ಶಿಲೀಂಧ್ರವು ಮಣ್ಣಿನಲ್ಲಿ ಬೆಳೆದು ಬೇರಿನ ಸುತ್ತಲೂ ಒಂದು ಪ್ರಬಲ ರಕ್ಷಣಾಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರಗಳನ್ನು ಧಾಳಿ ಮಾಡುವ ಸಮಯದಲ್ಲಿ ನಾಶಪಡಿಸುತ್ತದೆ.
- ಬೆಳೆಗೆ ಸಮರ್ಪಕವಾಗಿ ಆಹಾರ ಮತ್ತು ನೀರು ಸರಬರಾಜು ಮಾಡಲು ಸಹಕರಿಸುತ್ತದೆ.
- ಈ ಜೈವಿಕ ಶಿಲೀಂಧ್ರ್ರವು ಮಣ್ಣಿನಲ್ಲಿ ಇತರೆ ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಗಿಂತ ಅತೀ ವೇಗವಾಗಿ ಬೆಳೆದು ಬೇರು ಮತ್ತು ಮಣ್ಣಿನ ಕಣಗಳ ಸುತ್ತಲೂ ಹರಡುತ್ತದೆ.
- ಇದರಿಂದ ಪರೋಪಜೀವಿ ಹಾಗೂ ಹಾನಿಕಾರಕ ಶಿಲೀಂಧ್ರಕ್ಕೆ ಸ್ಥಳ ಹಾಗೂ ಆಹಾರದ ಅಭಾವ ಉಂಟಾಗುತ್ತದೆ.
- ಟ್ರೈಕೋಡರ್ಮಾ ಬೆಳೆಯುವ ಹಂತದಲ್ಲಿ ಟ್ರೈಕೋಡರ್ಮಿನ್‍ಆ್ಯಂ ಟಿ ಬಯಾಟಿಕ್ ಕಿಣ್ವಗಳನ್ನು ಬಿಡುಗಡೆ ಮಾಡುವುದರಿಂದ ರೋಗಾಣುವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತದೆ.
ಟ್ರೈಕೋಡರ್ಮಾ ಬಳಸುವ ವಿಧಾನಗಳು :
- ಏಕದಳ, ದ್ವಿಧಳ, ಎಣ್ಣೆಕಾಳು, ತರಕಾರಿ, ಹೂ-ಹಣ್ಣು, ತೋಟಗಾರಿಕಾ ಬೆಳೆಗಳಲ್ಲಿ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರವನ್ನು ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತದೆ.
- ಸಾವಯವ ವಸ್ತುಗಳಿಗೆ ಬೆರೆಸಿ ಬಳಸುವ ಒಂದು ಕ್ರಮ. ಬೀಜಗಳಿಗೆ ಬೀಜೋಪಾಚಾರ ಮಾಡುವ ಕ್ರಮ.
- ಹಾಗೆಯೇ ನೆಲಕ್ಕೆ ಸಿಂಪರಣೆ ಮಾಡುವುದು.
- ಎಲೆಗಳಿಗೂ ಸಿಂಪರಣೆ ಮಾಡುವ ಜೀವಾಣುಗಳ ಸಂಮ್ಮಿಶ್ರಣ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ದ್ರಾವಣ ರೂಪದ ಟ್ರೈಕೋಡರ್ಮಾ ಬಳಸುವ ವಿಧಾನ:
- ಈ ರೂಪದ ಸಿಂಪರಣೆಯ ಕನಿಷ್ಠ 5-6 ದಿವಸ ಮುಂಚೆ ಹಾಗೂ ನಂತರ ವೇಳೆ ಅಂತರವ್ಯಾಪಿ ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಕೈಗೊಳ್ಳಬಾರದು.
- ನೀರಿನಂಶವುಳ್ಳ ಹಣ್ಣಿನ ಬೆಳೆಗಳಾದ ಸೇಬು, ದ್ರಾಕ್ಷಿ, ಸೀಬೆ, ಪಪಾಯ ಇತ್ಯಾದಿ ಹಣ್ಣುಗಳನ್ನು ಬಿಡಿಸುವ ಎರಡು ದಿವಸಗಳ ಮುಂಚೆ
- 5 ಮಿ.ಲೀ. ಟ್ರೈಕೋಡರ್ಮಾ ಯುಕ್ತ ದ್ರಾವಣವನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದರಿಂದ
- ಸಾಗಾಣಿಕೆ ಹಂತದಲ್ಲಿ ಹಣ್ಣುಗಳು ಕೊಳೆಯುವುದು ಆಗದೆ ಕೆಲ ದಿನಗಳವರೆಗೆ ಕೆಡದಂತೆ ರಕ್ಷಿಸಬಹುದು.
ತಜ್ಞರ ಅನಿಸಿಕೆ:
- ಈ ಉಪಯೋಗಿ ಶಿಲೀಂಧ್ರವು ಮಣ್ಣಿನಲ್ಲಿ ಬೆಳೆದು ಬೇರಿನ ಸುತ್ತಲೂ ಒಂದು ಪ್ರಬಲ ರಕ್ಷಣಾಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರಗಳನ್ನು ನಾಶಪಡಿಸಿ, ಬೆಳೆಗೆ ಸಮರ್ಪಕವಾಗಿ ಆಹಾರ ಮತ್ತು ನೀರು ಸರಬರಾಜು ಮಾಡಲು ಸಹಕರಿಸುತ್ತದೆ.
- ಈ ಮಹತ್ವದ ವಿಚಾರವನ್ನು ಡಾ| ಎಸ್. ಕೆ. ಜಯಲಕ್ಷ್ಮಿ, ಸಸ್ಯರೋಗ ಮುಖ್ಯ ಪ್ರಾಧ್ಯಾಪಕರು,ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರು ತಮ್ಮ ಪ್ರಯೋಗದಿಂದ ಕಂಡುಕೊಂಡಿದ್ದಾರೆ.
- ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು, ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕ ರೀತಿಯಲ್ಲಿ ಹತೋಟಿ ಮಾಡುವ ಸಾಮಥ್ರ್ಯವುಳ್ಳ ಉಪಯುಕ್ತವಾದ ಶಿಲೀಂದ್ರ ಜೀವಿ. –ಬಿಂದು ಕೆ.ಜಿ, ಸಸ್ಯರೋಗ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.
ಕಾಂಪೋಸ್ಟ್ ತಯಾರಿಸಲು ಬಳಸುವ ವಿಧಾನ:
- ಒಂದು ಕ್ವಿಂಟಾಲ್ ಸಾವಯವ ಅಂಶವುಳ್ಳ ಪದಾರ್ಥಅಥವಾ ಕಾಂಪೋಸ್ಟ್‍ಗೆ ಒಂದು ಕಿಲೋ ಗ್ರಾಂ. ಟ್ರೈಕೋಡರ್ಮಾವನ್ನು ಪದರ ಪದರ ವಾಗಿ ಬೆರೆಸಿ ಇಪ್ಪತ್ತು ದಿನಗಳ ನಂತರ ಕೃಷಿ ಭೂಮಿಗೆ ಬಳಸಬಹುದಾಗಿದೆ.
- ಈ ಹಂತದಲ್ಲಿ ಕಂಪೋಸ್ಟ್ ಗುಂಡಿಯ ತ್ಯಾಜ್ಯವು ಕನಿಷ್ಠ ತೇವಾಂಶ ಹೊಂದಿರಬೇಕು.
- ಟ್ರೈಕೋಡರ್ಮಾ ಶಿಲೀಂಧ್ರವು ದ್ರಾಕ್ಷಿ, ಲಿಂಬೆ, ಬಾಳೆ, ಶೇಂಗಾ, ಕಡಲೆ, ಬದನೆ, ಮೆಣಸಿನಕಾಯಿ, ಟೊಮಾಟೋ, ತೆಂಗು, ಕಾಳು ಮೆಣಸು, ಶುಂಠಿ, ಅರಿಶಿನ ಹಾಗೂ ಇನ್ನಿತರ ಬೆಳೆಗಳ ಮಣ್ಣಿನಿಂದ ಬರುವಂತಹ ರೋಗಗಳನ್ನು ಯಶಸ್ವಿಯಾಗಿ ಹತೋಟಿಯಾಗಿರುವುದುಕಂಡುಬಂದಿದೆ.
ಲೇಖಕರು–ಡಾ. ಜಹೀರ್‍ಅಹೆಮದ್, ಡಾ. ಶ್ರೀನಿವಾಸ ಬಿ. ವಿ ಮತ್ತುಡಾ. ರಾಜು ಜಿ. ತೆಗ್ಗಳ್ಳಿ, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಡಾ. ಪುಷ್ಪಲತಾ. ಎಂ ನಿಸರ್ಗ ಹೆಚ್. ಎಸ್
ಸರ್ ನನಗೆ ಟ್ರೈಕೊಡರ್ಮ ಕಳಿಸಿ ಕೊಡುತಿರ
ನಿಮ್ಮ ಊರು ಎಲ್ಲಿ. ಸಮಿಫದಲ್ಲಿ ಸಿಗುವ ಜಾಗ ತಿಲೀಸುತೇವೆ.