ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN. ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು CPCRI ಹೇಳಿಕೊಡುತ್ತದೆ.
ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ ಬಹಳಷ್ಟು ರೈತರು ಬೇರು ಹುಳದ ಸಮಸ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ಸಂಶೋಧನಾ ಸಂಸ್ಥೆಗಳು ತಯಾರಿಸಿ ಅದರ ಕಲ್ಚರ್ ಅನ್ನು ರೈತರಿಗೆ ಅವರೇ ಅಭಿವೃದ್ದಿ ಪಡಿಸಲು ಕೊಡುತ್ತಾರೆ. CPCRI ಕಾಸರಗೋಡು ಸಂಸ್ಥೆ ಹಲವಾರು ಜನ ರೈತರಿಗೆ ಇದರ ತಯಾರಿಕೆ ತರಬೇತಿ ನೀಡಿದೆ.
- ಗುಡ್ಡಕ್ಕೆ ಗುಡ್ದ ಅಡ್ಡವಂತೆ, ಯಾವುದೂ ನಾನೇ ಸಾರ್ವಭೌಮ, ನನ್ನಿಂದ ಮಿಗಿಲಾದುದು ಯಾವುದೂ ಇಲ್ಲ ಎಂದು ಬೀಗುವಂತಿಲ್ಲ.
- ಪ್ರತೀಯೊಂದಕ್ಕೂ ಒಂದು ಮಿತಿ ಇದೆ. ಆ ಮಿತಿ ದಾಟುವಾಗ ಅದಕ್ಕೆ ಮತ್ತೊಂದು ಸ್ಪರ್ಧಿ ಬಂದೇ ಬರುತ್ತದೆ.
- ಇದು ಪ್ರಕೃತಿ ನಿಯಮ. ನಮ್ಮ ಪ್ರಕೃತಿ ಎಷ್ಟು ವ್ಯವಸ್ಥಿತ ಗೊತ್ತೇ?
- ಇದು ತನ್ನ ಸಮತೋಲನ ಕಾಪಾಡಿಕೊಳ್ಳಲು ಬೇಕಾಗುವ ಎಲ್ಲಾ ನಿಯಮಗಳನ್ನೂ ತಪ್ಪದೇ ಪಾಲಿಸುತ್ತದೆ.
ಪ್ರಕೃತಿಯಲ್ಲಿ ಅತೀ ಹೆಚ್ಚಿನ ಬುದ್ಧಿ ಹೊಂದಿದ ಜೀವಿ ಎಂದರೆ ಮನುಷ್ಯ. ಇವನು ಪ್ರಕೃತಿಯ ಜೊತೆಯಲ್ಲಿ ಕ್ಷಣಿಕ ಆಟಗಳನ್ನು ಆಡಬಲ್ಲನಾದರೂ ಪ್ರಕೃತಿ ಅದಕ್ಕೆ ಪ್ರತ್ಯುತ್ತರ ನೀಡಿಯೇ ತೀರುತ್ತದೆ.
EPN ಎಂದರೆ ಎನು?
- ಪ್ರಕೃತಿಯಲ್ಲಿ ಜೀವಿಗಳನ್ನು ಜೀವಿಗಳ ಮೂಲಕವೇ ನಾಶಮಾಡಲು ಇರುವ ಒಂದು ವ್ಯವಸ್ಥೆಯಲ್ಲಿ ಎಂಟಮೋ ಪಥೋಜೆನಿಕ್ ನಮಟೋಡು (ಇಪಿಎನ್).
- ಇದು ಬೆಳೆಗಳ ಬೇರುಗಳಿಗೆ ತೊಂದರೆ ಮಾಡುವ ಹುಳಗಳನ್ನು ಬದನಿಕೆಯೋಪಾದಿಯಲ್ಲಿ ಸಾಯುವಂತೆ ಮಾಡುತ್ತದೆ.
- ಇದನ್ನು ಬಹಳ ಹಿಂದೆಯೇ ಗುರುತಿಸಲಾಗಿದ್ದು, ಈಗ ಇದರ ಉತ್ಪಾದನೆ ಮತ್ತು ಕೃಷಿಯಲ್ಲಿ ಬಳಕೆ ಹೆಚ್ಚಿದೆ.
- ಇದು ಯಾರಿಗೂ ಯಾವ ಹಾನಿಯೂ ಇಲ್ಲದಂತೆ ಕೀಟ ನಿಯಂತ್ರಣ ಮಾಡುವ ಜೈವಿಕ ವಿಧಾನ.
- ಇಪಿಎನ್ ನಮಟೋಡು ಅಥವಾ ಜಂತು ಹುಳವನ್ನು, ಒಂದು ಜಾತಿಯ ಹುಳ( ಜೇನು ಗೂಡಿನಲ್ಲಿ ಹಾಳಾದ ಎರಿಗಳಲ್ಲಿ ಕಾಣುವ ಹುಳದ ತರಹದ್ದು)ದ ಹೊಟ್ಟೆಯೊಳಗೆ (thread worms) ಬೆಳೆಸಲಾಗುತ್ತದೆ.
- ಪ್ರಕೃತಿಯಲ್ಲಿ ಇದರಲ್ಲೇ ಅದು ಬೆಳೆಯುವುದು. ಆ ಹುಳದ ಹೊಟ್ಟೆಗೆ ಅದನ್ನು ಸೇರಿಸಿ ಅದು ಅಲ್ಲಿ ಸಂತಾನಾಭಿವೃದ್ದಿ ಹೊಂದಿ ಅಧಿಕ ಪ್ರಮಾಣದ ಜಂತು ಹುಳವನ್ನು ಬಿಡುಗಡೆ ಮಾಡುತ್ತದೆ.
- ಜಂತು ಹುಳುವಿನ ಹೊಟ್ಟೆಯೊಳಗೆ ಸಹಜೀವನ ನಡೆಸುವ ಒಂದು ಬ್ಯಾಕ್ಟೀರಿಯಾ ಇರುತ್ತದೆ.
- ಬ್ಯಾಕ್ಟೀರಿಯಾಕ್ಕೆ ಬದುಕಲು ಜಂತು ಹುಳ ಆಹಾರ ಕೊಟ್ಟು ನೆರವಾಗುತ್ತದೆ.
- ಜಂತು ಹುಳಕ್ಕೆ ಬದುಕಲು ಬ್ಯಾಕ್ಟೀರಿಯಾ ಸಹಕರಿಸುತ್ತದೆ. ಇದು ಒಂದು ಸಹಜೀವನ.
- ಈ ರೀತಿ ಅಭಿವೃದ್ಧಿಪಡಿಸಿದ ಜಂತು ಹುಳುವನ್ನು ಕೆಲವು ಮಾಧ್ಯಮಗಳಲ್ಲಿ ಸಂಗ್ರಹಿಸಿ ಹೊಲದಲ್ಲಿ ಬೆಳೆಗಳಿಗೆ ತೊಂದರೆ ಮಾಡುವ ಹುಳುವಿನ ನಾಶಮಾಡಲು ಬಳಕೆ ಮಾಡಲಾಗುತ್ತದೆ.
- ನಮಟೋಡು ಬ್ಯಾಕ್ಟೀರಿಯಾವನ್ನು ಬದುಕಿಸುತ್ತಾ ಇರುತ್ತದೆ.
- ಅದಕ್ಕೆ ಬೇಕಾದ ಆಶ್ರಯ ಹುಳು ದೊರೆತಾಗ ಅದರ ಶರೀರಕ್ಕೆ ಸೇರಿ ಅದರೊಳಗೆ ಪರಾವಲಂಭಿಯಗಿ ಬದುಕಿ ಅದನ್ನು 24-48 ಗಂಟೆ ಒಳಗೆ ಸಾಯಿಸುತ್ತದೆ.
- ಎಂಟಮೋ ಪಥೋಜೆನಿಕ್ ಎಂದರೆ ಕೀಟವೊಂದು (ಎಂಟಮೋ) ಮತ್ತೊಂದು ಕೀಟದಲ್ಲಿ ಪರಾವಲಂಭಿಯಾಗಿ (ಪಥೋಜೆನಿಕ್) ಬದುಕಿ ಅದನ್ನೇ ನಾಶಮಾಡುವ ತಂತ್ರ.
ಎಲ್ಲೆಲ್ಲಿ ಬಳಸಬಹುದು?
- ಅಡಿಕೆ, ಕಬ್ಬು ಮುಂತಾದ ಬೇರೆ ಬೇರೆ ಬೆಳೆಗಳ ಬೇರನ್ನು ಹಾನಿ ಮಾಡುವ ಬೇರು ಹುಳ, ಪತಂಗದ ಲಾರ್ವೆಗಳು, ಚಿಟ್ಟೆಗಳು, ಹಾರುವ ದುಂಬಿಗಳಿಗೆ, ಜಿಗಿ ಹುಳ( ಗ್ರಾಸ್ ಹೋಪರ್ಸ್)
- ಈ ನಮಟೋಡನ್ನು ಪ್ರಯೋಗಿಸಿದಾದ ಅದು ಮಣ್ಣಿನಲ್ಲಿದ್ದುಕೊಂಡು ಆ ಹುಳದ ಹೊಟ್ಟೆಯ ಒಳ ಸೇರಿ ಅದನ್ನು ಕೊಲ್ಲುತ್ತದೆ.
- ಪ್ರಪಂಚದಾದ್ಯಂತ ಇದನ್ನು ಕಾಣಬಹುದಾಗಿದೆ. ಇದರಿಂದ ಮಣ್ಣಿನ ಯಾವ ಇತರ ಜೀವಿಗಳಿಗೂ ಹಾನಿ ಇರುವುದಿಲ್ಲ.
- ಇದು ಬೇರು ಹುಳ ನಾಶಕ್ಕೆ ತಕ್ಷಣ ಪರಿಹಾರ ನೀಡುವ ಜೈವಿಕ ವಿಧಾನ.
- ಈ ನಮಟೋಡುಗಳನ್ನು ದ್ರವ ರೂಪದ ಮಾಧ್ಯಮದಲ್ಲಿ ಮತ್ತು ಹುಡಿ ( Talck) ರೂಪದ ಮಾಧ್ಯಮದಲ್ಲಿ ತಯಾರಿಸಿ ಕೊಡುತ್ತಾರೆ.
- ಇದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ತಂತ್ರಜ್ಞಾನವಾಗಿದೆ.
ಇದರಿಂದ ಯಾವುದೇ ಎಡೆ ತೊಂದರೆ ಇಲ್ಲ. ಬಳಸುವವರೂ ಸುರಕ್ಷಿತ. ಇದರ ಫಲಿತಾಂಶ ಹೆಚ್ಚಲು ಕೀಟನಾಶಕವಾದ ಇಮಿಡಾ ಕ್ಲೋಫ್ರಿಡ್ ಅನ್ನು .5 ಮಿಲಿ (1 ಲೀ. ನೀರಿಗೆ) ಸೇರಿಸಿದರೆ ಒಳ್ಳೆಯದು.