ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಅಡಿಕೆ ಮಾರುಕಟ್ಟೆ ಸ್ಥಿರ

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ ಸಾಧ್ಯತೆ ತುಂಬಾ ಕಡಿಮೆಯಾದ ಕಾರಣ ದರ ಕುಸಿಯದು. ನಿಧಾನಗತಿಯಲ್ಲಿ ಏರಿಕೆಯೇ ಆಗಬಹುದು.

ಈ ವರ್ಷದ ಅಡಿಕೆ ಉತ್ಪಾದನೆ ಎಲ್ಲಾ ಕಡೆಯಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ 15-20% ಹೆಚ್ಚು ಎನ್ನುತ್ತಾರೆ. ಒಟ್ಟಾರೆಯಾಗಿ ನೋಡುವಾಗಲೂ ಇದು ನಿಜ ಎನ್ನಿಸುತ್ತದೆ. ಉತ್ಪಾದನೆ ಚೆನ್ನಾಗಿದ್ದರೂ ಅಡಿಕೆ ಮಾರುಕಟ್ಟೆಗೆ ಬರುವ ಪ್ರಮಾಣ ತುಂಬಾ ಕಡಿಮೆ. ಕಾರಣ ದರ ಏರಿಕೆಯೂ ಆಗುವುದಿಲ್ಲ. ಇಳಿಕೆಯೂ ಆಗುವುದಿಲ್ಲ. ಹಾಗಾಗಿ ಜನ ಕುಸಿಯುವ ಭೀತಿ ಇಲ್ಲ ಎಂದು ಮಾರುಕಟ್ಟೆಗೆ ಅಡಿಕೆ ಬಿಡುತ್ತಿಲ್ಲ. ಬೆಳೆಗಾರರು ಯಾವಾಗಲೂ ಬೆಲೆ ಏರಿಕೆಯ ಸಮಯದಲ್ಲಿ ತುರ್ತು ಇದ್ದರೆ ಮಾತ್ರ ಮಾರಾಟ ಮಾಡುವವರು.  ಬೆಲೆ ಕುಸಿಯುತ್ತದೆ, ಏನಾದರೂ ಇಳಿಕೆಯ ಸುದ್ದಿ ಇದೆ ಎಂದಾದರೆ ತಕ್ಷಣ ನಗದೀಕರಣಕ್ಕೆ ಮುಂದಾಗುತ್ತಾರೆ. ಈ ವರ್ಷ ಆ ಪರಿಸ್ಥಿತಿ ಉಂಟಾಗಲೇ ಇಲ್ಲ. ಸಹಕಾರಿಗಳು ( ವಿಷೇಷವಾಗಿ ಕ್ಯಾಂಪ್ಕೋ) ದರ ಇಳಿಸದೆ ಮಾರುಕಟ್ಟೆಯಲ್ಲಿ ಭರವಸೆಯ ವಾತಾವರಣವನ್ನು ಉಂಟುಮಾಡಿದೆ.  ಹಾಗೆಯೇ ಮ್ಯಾಂಕೋಸ್, ತುಮ್ಕೋಸ್, ಆಪ್ಸ್ಕೋಸ್ ಸಹ ಬೆಳೆಗಾರರಿಗೆ  ಬೆಲೆ ಏರಿಕೆಯ ಭರವಸೆಯನ್ನು ನೀಡಿವೆ.

 ಈಗ ಮಾರುಕಟ್ಟೆಗೆ ಬರುವ ಅಡಿಕೆ ಕೆಲವರು ಕೊಯಿಲು ಆಗಿ ಒಣಗಿದ ತರುವಾಯ ಸಲ್ಪ ಸ್ವಲ್ಪವೇ ಖರ್ಚಿಗೆ ಬೇಕಾದಷ್ಟು ಮಾರಾಟ ಮಾಡುವವರದ್ದು ಮಾತ್ರ. ಚಾಲಿ ಮಾರುಕಟ್ಟೆಯಲ್ಲೂ ಇದೆ ಸ್ಥಿತಿ. ಕೆಂಪಡಿಕೆ ಮಾರುಕಟ್ಟೆಯಲ್ಲೂ ಹಾಅಗೆಯೇ. ಹೆಚ್ಚಿನ ಬೆಳೆಗಾರರು ಮಳೆಗಾಲದಲ್ಲಿ ಬಿದ್ದ ಅಡಿಕೆಯನ್ನೂ ಸಹ ಮಾರಾಟ ಮಾಡದೆ ಉಳಿಸಿಕೊಂಡಿದ್ದಾರೆ.  ಏರಿಕೆಗಾಗಿ ಕಾಯುತ್ತಿದ್ದಾರೆ. ಬೆಲೆ ಏರಿಕೆ, ಬೇಡಿಕೆ ಬಂದಾಗ ಅಡಿಕೆಯ ಗುಣಮಟ್ಟಕ್ಕೆ ಅಂತಹ ಮಹತ್ವ ಇರುವುದಿಲ್ಲ. ಆ ಸಮಯದಲ್ಲಿ ಸ್ವಲ್ಪ ಹಾಳಾದ ಅಡಿಕೆಯೂ  ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಈ ಸಂದರ್ಭಕ್ಕಾಗಿ ಅಡಿಕೆ ಬೆಳೆಗಾರರು ಕಾಯುತ್ತಿದ್ದಾರೆ.

ಒಂದು ಸಣ್ಣ ಇಳಿಕೆ ಸಾಧ್ಯತೆ:

ಚಾಲಿ ಅಡಿಕೆ ಉತ್ಪಾದನೆ ಹೇರಳವಾಗಿದೆ ಎಂಬ ಮಾಹಿತಿ ಎಲ್ಲಾ ವರ್ತಕರಿಗೂ ತಿಳಿದಿದೆ. ಹಾಗಾಗಿ ಮುಂದಿನ  (ಮೇ ಮೊದಲ ವಾರ) ವಾರದ ತರುವಾಯ ಚಾಲಿ ಅಡಿಕೆಯ ದರ  ಕಿಲೋ ಮೇಲೆ ರೂ. 5-10 ಇಳಿಕೆಯಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಸಿಪ್ಪೆ ಗೋಟಿನ ಬೆಲೆ ಕ್ವಿಂಟಾಲಿಗೆ 1500 ರಷ್ಟು ಕಡಿಮೆಯಾಗಿದೆ. ಶಿರಸಿ, ಸಾಗರ, ಯಲ್ಲಾಪುರ , ಸಿದ್ದಾಪುರಗಳಲ್ಲೂ ಕ್ವಿಂಟಾಲಿಗೆ ರೂ.500-1000 ದಷ್ಟು ಕಡಿಮೆಯಾಗಿದೆ. ಇದರ ಮುನ್ಸೂಚನೆಯೋ ಏನೋ  ಶಿರಸಿ, ಸಾಗರ, ಯಲ್ಲಾಪುರ, ಸಿದ್ದಾಪುರಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ 712,  706, 342, 524 ಚೀಲ  ಹೊಸ ಚಾಲಿ ಅಡಿಕೆ  ಮಾರುಕಟ್ಟೆಗೆ ಬಂದಿದೆ. ಬೆಲೆ ಇಳಿಕೆ ಪೂರ್ತಿಯಾಗಿ ಬೆಳೆ ಹೆಚ್ಚು ಇದೆ ಎಂಬ ಕಾರಣಕ್ಕೆ ಅಲ್ಲ. ಬೆಳೆಗಾರರಿಂದ ಅಡಿಕೆ ಮಾರುಕಟ್ಟೆಗೆ ಬರುವಂತೆ ಮಾಡುವ ವ್ಯವಹಾರ ತಂತ್ರವೂ ಇರಬಹುದು. ಈಗ ಅಡಿಕೆ ಬರುವ ಪ್ರಮಾಣ ತುಂಬಾ ಕಡಿಮೆ ಇದೆ.  ಹಾಗೆಂದು ಇದು ತಾತ್ಕಾಲಿಕವಾಗಿದ್ದು, ಮತ್ತೆ ಏರಿಕೆ ಆಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಎಪ್ರೀಲ್ ತಿಂಗಳಲ್ಲಿ ದಾರಣೆ
ಎಪ್ರೀಲ್ ತಿಂಗಳಲ್ಲಿ ದಾರಣೆ Credit: TUMCOS

ಎಪ್ರೀಲ್ ತಿಂಗಳಲ್ಲಿ ದಾರಣೆ ಹೇಗಿತ್ತು?

ಎಪ್ರೀಲ್  2022 ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆಯ ಭರವಸೆಯನ್ನು ಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ತಿಂಗಳ ಪ್ರಾರಂಭದಲ್ಲಿ  ಚಾಲಿ, ಕೆಂಪಡಿಕೆ ಧಾರಣೆ  ಹಿಂದಿನ ತಿಂಗಳಿನಂತೆ ಮುಂದುವರಿದಿದೆ. ಎರಡನೇ ವಾರಕ್ಕೆ ಸ್ವಲ್ಪ ಸ್ವಲ್ಪವೇ ಚೇತರಿಕೆ ಕಾಣುತ್ತಾ ಮೂರನೇ ವಾರ ಚಾಲಿ ಅಡಿಕೆಯಲ್ಲಿ ಹೊಸತು ಸೇರಿದಂತೆ  ಹಳೆಯ ಅಡಿಕೆಗೆ ಕ್ವಿಂಟಾಲಿಗೆ 1000 ರೂ. ಹೆಚ್ಚಳವಾಯಿತು.  ರಾಶಿ ಕೆಂಪಡಿಕೆಗೆ  ಪ್ರಾರಂಭದಲ್ಲಿ ಸರಾಸರಿ ದರ 46,500 ರ ಸುಮಾರಿಗೆ ಇದ್ದುದು ಎರಡನೇ ವಾರ 47,500 ದಾಟಿತು. ಎಪ್ರೀಲ್ ಕೊನೆಗೆ ಇದು 48,500 ತನಕ ಮುಟ್ಟಿದೆ. ಬೆಟ್ಟೆ ಅಡಿಕೆಗೆ ತಿಂಗಳ ಪ್ರಾರಂಭದಲ್ಲಿ 48,500 ರ ಸುಮಾರಿನಲ್ಲಿ ಇದ್ದುದು, 50,000- 51,000 ತಿಂಗಳ ಕೊನೆಗೆ 52,300 ತನಕ ಏರಿಕೆಯಾಗಿದೆ.  ಈ ಸಮಯದಲ್ಲಿ ಕೆಂಪಡಿಕೆ ಮಾರುಕಟ್ಟೆಯಲ್ಲಿ ಈ ದರ  ಇರುವುದು ಇದೇ ಮೊದಲು ಎಂಬಂತಾಗಿದೆ.

ಚಾಲಿ ಅಡಿಕೆ ಧಾರಣೆ ಎಲ್ಲೆಲ್ಲಿ ಹೇಗಿತ್ತು:

ಹೊಸ ಚಾಲಿ ಅಡಿಕೆ
  • ಮಂಗಳೂರು: ಹೊಸತು: 43,000 (ಸರಾಸರಿ): 44,500 (ಗರಿಷ್ಟ)
  • ಹಳತು:52000-54,000
  • ಪುತ್ತೂರು: ಹೊಸತು, 43,000-45,000
  • ಹಳತು: 52000-54000
  • ಸುಳ್ಯ: ಹೊಸತು: 42,500-45.000
  • ಹಳೆಯದು:51,000-54,500
  • ಬೆಳ್ತಂಗಡಿ: ಹೊಸತು: 43,000-45,000
  • ಹಳತು: 48,000-53,000
  • ಕಾರ್ಕಳ: ಹೊಸತು: 43,000-45.000
  • ಹಳತು: 50.000-54,000
  • ಕುಂದಾಪುರ: ಹೊಸತು 44,000 – 44,500,
  • ಹಳೆಯದು: 52000 –  52500,
  • ಶಿರಸಿ: ಹೊಸ ಚಾಲಿ: 39475 – 41031,
  • ಯಲ್ಲಾಪುರ:ಹೊಸ ಚಾಲಿ: 39589 – 41069,
  • ಸಿದ್ದಾಪುರ: ಹೊಸ ಚಾಲಿ: 39,300 – 40,400,
  • ಹಳೆ ಚಾಲಿ: 47,599 – 48,099,
  • ಕುಮಟಾ: ಹೊಸತು 39,800 – 40,000,
  • ಹಳತು:  49,099- 49,700
  • ಸಾಗರ: ಹೊಸ ಚಾಲಿ: 37,600 -39200
  • ಪಟೋರಾ: ಹೊಸತು:36,000-37,000
  • ಹಳೆಯದು: 40,000-42,000
  • ಉಳ್ಳಿ ಗಡ್ಡೆ:20,000-26,000
  • ಕರಿಗೋಟು: 22,000-26,000
  • ಸಿಪ್ಪೆಗೋಟು: 20,500 – 21,900,

ಕೆಂಪಡಿಕೆ ಧಾರಣೆ:

ಕೆಂಪಡಿಕೆ ಧಾರಣೆಯಲ್ಲಿ ಸರಾಸರಿ ಬೆಲೆ ಮತ್ತು ಗರಿಷ್ಟ ಬೆಲೆಗಳ ಅಂತರ ಬಹಳ ಕಡಿಮೆ ಇದೆ. ಬೇಡಿಕೆ ಚೆನ್ನಾಗಿದ್ದು, ಬರುವ ಪ್ರಮಾಣವೂ ಕಡಿಮೆ ಇದೆ. ಇಂದು ಹೊಸನಗರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ  2098 ಚೀಲ ರಾಶಿ ಅಡಿಕೆ ಮಾರುಕಟ್ಟೆಗೆ ಬಂದಿದೆ, ದರ ಸರಾಸರಿ 48699  ಗರಿಷ್ಟ 49399ಇತ್ತು. ನಂತರ ಚೆನ್ನಗಿರಿ, ಭದ್ರಾವತಿ  ಚಿತ್ರದುರ್ಗಗಳಲ್ಲಿ ತಲಾ 1001 ಚೀಲ,800 ಚೀಲ, 622 ಚೀಲ  ಅಡಿಕೆ ಮಾರಾಟವಾಗಿದೆ.

  • ಚೆನ್ನಗಿರಿ ರಾಶಿ: 48200 (ಸರಾಸರಿ) – 48700,(ಗರಿಷ್ಟ)
  • ದಾವಣಗೆರೆ: 46900, 48682
  • ಬಧ್ರಾವತಿ: 47365 – 48799
  • ಹೊನ್ನಾಳಿ: ರಾಶಿ: 48100 – 48100
  • ಚಿತ್ರದುರ್ಗ ರಾಶಿ: 47300 – 47500
  • ಸಾಗರ ರಾಶಿ: 47900 -48500,
  • ಶಿರಸಿ: ರಾಶಿ: 47,990 – 49,940,
  • ಸಿದ್ದಾಪುರ: ರಾಶಿ: 47,400 – 48,100
  • ಯಲ್ಲಾಪುರ ರಾಶಿ: 51,209 – 54,375,
  • ಬೆಟ್ಟೆ : 42,860 –  48,000,
  • ತೀರ್ಥಹಳ್ಳಿ: ರಾಶಿ: 48,600 -49,000. (24-04-2022)
  • ಸರಕು: 71,200 – 80,000,
  • ಶಿವಮೊಗ್ಗ ಸರಕು: 75,200 – 78,700,
  • ಶಿವಮೊಗ್ಗ ರಾಶಿ: 47,420 – 48,890,
  • ಬೆಟ್ಟೆ: 51,015 – 53,900,

ಕರಿಮೆಣಸು ಧಾರಣೆ:

  ಬ್ಲಾಕ್ ಪೆಪ್ಪೆರ್

ಕರಿಮೆಣಸಿಗೆ ಇಂದು ಖಾಸಗಿಯವರು ಸ್ವಲ್ಪ ದರ ಇಳಿಸಿದ್ದಾರೆ. ಕೊಚ್ಚಿ ಮಾರುಕಟ್ಟೆಯಲ್ಲಿ  ದರ ಸ್ವಲ್ಪ ಇಳಿಕೆ ಆದ ತಕ್ಷಣ ಇಲ್ಲಿ ದರ ಇಳಿಕೆಯಾಗುತ್ತದೆ.ಕೊಚ್ಚಿ ಮಾರುಕಟ್ಟೆಯಲ್ಲಿ ಸಹಜವಾಗಿ ಆಗುವ ತುಸು ಏರಿಳಿಕೆಯಂತೆ ಸ್ವಲ್ಪ ಇಳಿಕೆ ಆಗಿದೆ. ವಾಸ್ತವವಾಗಿ ಸ್ಥಳೀಯ ಖರೀದಿದಾರರಿಗೆ ಮರು ಖರೀದಿದಾರರ  ಬೇಡಿಕೆ ಜಾಸ್ತಿ ಇಲ್ಲ. ಹಾಗಾಗಿ ದರ ಏರುತ್ತಿಲ್ಲ.  ಇಳಿಕೆಯೂ ಇಲ್ಲ. ಕ್ಯಾಂಪ್ಕೋ ತನ್ನ ಖರೀದಿ ದರವನ್ನು  ಕಿಲೋಗೆ 515 ರೂ. ಏರಿಸಿದ ತರುವಾಯ ಸ್ವಲ್ಪ ದರ ಸ್ಥಿರವಾಗಿದೆ. ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ಭಾರೀ ಏರಿಕೆಯ ನಿರೀಕ್ಷೆಯೂ ಇಲ್ಲ.

ಇಂದು ಅಲ್ಲಲ್ಲಿ ದರ ಹೀಗಿತ್ತು:

  • ಶಿರಸಿ:  492.00-516.00 ಕಿಲೋ.
  • ಸಿದ್ದಾಪುರ: 490.00-515.00
  • ಯಲ್ಲಾಪುರ:498.00-520.00
  • ಮಂಗಳೂರು:520.00  ಕ್ಯಾಂಪ್ಕೋ:515.00
  • ಪುತ್ತೂರು, ಸುಳ್ಯ, ಬೆಳ್ತಂಗಡಿ,ಕಳಸ ಕ್ಯಾಂಪ್ಕೋ ಖರೀದಿ ದರ 515.00
  • ಮೂಡಿಗೆರೆ , ಚಿಕ್ಕಮಗಳೂರು: 495.00-515.00

ಏಲಕ್ಕಿ ಧಾರಣೆ: ಕಿಲೋ.

  •  ಆಯದೆ ಇದ್ದದ್ದು: 531.00  
  • ಕೂಳೆ,  430-450.00 
  •  ನಡುಗೊಲು,  500-550.00
  •  ರಾಶಿ,  600-650.00 
  • ರಾಶಿ ಉತ್ತಮ,  650-700.00  
  •  ಜರಡಿ,  750-800.00
  • ಹೇರಕ್ಕಿದ್ದು,  1100-1150.00  
  • ಹಸಿರು ಸಾದಾರಣ,  600-700.00
  • ಹಸಿರು ಉತ್ತಮ,  900-950.00 
  • ಹಸಿರು ಅತೀ ಉತ್ತಮ,  1200-1250.00  

ಕೊಬ್ಬರಿ ದರ:

ಅಯಿಲ್ ಕೊಬ್ಬರಿ

ಕೊಬ್ಬರಿ ದರ ಸ್ವಲ್ಪ ಚೇತರಿಕೆ ಕಂಡಿದೆ. ಬೇಡಿಕೆ ಇದೆ. ಇನ್ನೂ ಕ್ವಿಂಟಾಲಿಗೆ 250-500 ತನಕ ಏರಿಕೆ ಆಗಬಹುದು ಎಂಬ ಸುದ್ದಿ ಇದೆ.

  • ಅರಸೀಕೆರೆ: 16465-17285 (ಬಾಲ್) ಕ್ವಿಂ.
  • ತಿಪಟೂರು: 17300-17350(ಬಾಲ್)
  • ಚನ್ನರಾಯಪಟ್ನ:7000-9000 (ಎಣ್ಣೆ)
  • ಮಂಗಳೂರು:8500-10500 (ಎಣ್ಣೆ)
  • ಪುತ್ತೂರು:9000-10100 (ಎಣ್ಣೆ)
  • ಗುಬ್ಬಿ:17,000
  •  ಹಸಿ ಸಿಪ್ಪೆ ಸುಲಿದ ಕಾಯಿ ಕಿಲೋ: 27-28

ಕಾಫೀ ಧಾರಣೆ: 50 ಕಿಲೊ.

ಪಾರ್ಚ್ ಮೆಂಟ್ ಕಾಫಿ ಬಿನ್ಸ್
  • ಅರೇಬಿಕಾ ಪಾರ್ಚ್ ಮೆಂಟ್: 15,800-16,000
  • ಆರೇಬಿಕಾ ಚೆರಿ:8400-8500
  • ರೋಬಸ್ಟಾ ಪಾರ್ಚ್ ಮೆಂಟ್: 9400-9600
  • ರೋಬಸ್ಟಾ ಚೆರಿ:4000-4100

ರಬ್ಬರ್ ಧಾರಣೆ:

ರಬ್ಬರ್ ದರ  ಕಿಲೋದಲ್ಲಿ 5 ರೂ. ಇಳಿಕೆಯಾಗಿದೆ. ಇನ್ನೂ ಮೇ ತಿಂಗಳು ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆ.

  • 1X GRADE -176.50
  • RSS:4:164.00
  • RSS 5:158.00
  • RSS 3:164.50
  • LOT:154.00
  • SCRAP: 105.00-113.00

ಶುಂಠಿ ಧಾರಣೆ:

ಶುಂಠಿ ಬಿತ್ತನೆ ಬಹುತೇಕ ಮುಗಿದಿದೆ. ಬಿತ್ತನೆ ಶುಂಠಿಗೂ ಬೇಡಿಕೆ ಇಲ್ಲ. ಇನ್ನು ತಾಜಾ ಶುಂಠಿಗೆ ಬೇಡಿಕೆ ಉಂಟಾಗಲಿದೆ. ಹಾಗಾಗಿ ಸ್ವಲ್ಪ ದರ ಏರಬಹುದು. ಈ ವರ್ಷ ಶುಂಠಿ ಬೆಳೆಗಾರರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಬಹಳಷ್ಟು ರೈತರಲ್ಲಿ ನೂರಾರು ಚೀಲ ಮಾರಾಟವಾಗದೇ ಉಳಿದಿದೆ.  ಹಸಿ ಶುಂಠಿಗೆ 900-1100 ತನಕ ಬೆಲೆ ಇದೆ.

ಕಾಡುತ್ಪತ್ತಿ (ಸಾಂಬಾರ)

  • ಜಾಯೀ ಕಾಯಿ:190 -200 ಕಿಲೊ
  • ಜಾಯಿ ಪತ್ರೆ: 800-950
  • ದಾಲ್ಛಿನಿ ಮೊಗ್ಗು: 1000-1200
  • ರಾಂಪತ್ರೆ: 500-600
  • ಕಾಯಿ: 150 -200

ತುರ್ತು ಅಗತ್ಯ ಉಳ್ಳವರು  ಹೊಸ ಅಡಿಕೆಯನ್ನು ( ಗುಣಮಟ್ಟ ಉತ್ತಮ ಇಲ್ಲದ)  ಮಾರಾಟ ಮಾಡಬಹುದು. ಹಳೆ ಅಡಿಕೆ ಮಾರಾಟಕ್ಕೆ ಸೂಕ್ತ ಕಾಲ. ಮೆಣಸು ಸಹ ಸ್ವಲ್ಪ ಮಾರಾಟ ಮಾಡಬಹುದು. ರಬ್ಬರ್ ಮಳೆಗಾಲದಲ್ಲಿ ದರ ಏರಿಕೆ ಆಗಬಹುದು. ಕೊರೋನಾ 4 ನೇ ಆಲೆ ಸಮಸ್ಯೆ ಉಂಟಾದರೆ ಮಾರುಕಟ್ಟೆ ತಾತ್ಕಾಲಿಕ ಹಿಂಜರಿತವೂ ಆಗಬಹುದು.

Leave a Reply

Your email address will not be published. Required fields are marked *

error: Content is protected !!