ನಿಮ್ಮ ಬೆಳೆಗೆ ಯಾವ ರಂಜಕ ಗೊಬ್ಬರ ಸೂಕ್ತ.
ರಂಜಕ ಎಂಬುದರ ಮೂಲ ಶಿಲೆ ಅಥವಾ ಖನಿಜ. ಇದರ ಅಧಾರದಲ್ಲಿ ರಾಸಾಯನಿಕ ಮೂಲದಲ್ಲಿ ರಂಜಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ರಂಜಕ ಎಂಬ ಧಾತುವನ್ನು ಸಸ್ಯಗಳು ನೇರವಾಗಿ ಬಳಕೆ ಮಾಡುವುದೇ ಇಲ್ಲ. ಇದು ಒಂದು ಸ್ವತಂತ್ರ ಪೊಷಕ ಅಲ್ಲ. ಇದನ್ನು ಮಣ್ಣಿನಲ್ಲಿರುವ ರಂಜಕ ಕರಗಿಸಿ ಕೊಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ರಂಜಕ ಗೊಬ್ಬರದಲ್ಲಿ ಮೂರು ವಿಧ. ಎರಡು ಬಗೆಯವು ನೀರಿನಲ್ಲಿ ಕರಗುವ ರೂಪದ ರಂಜಕ ಮತ್ತು ಒಂದು ನೀರಿನಲ್ಲಿ ಕರಗದ ರೂಪದ ರಂಜಕ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಂಗಲ್…