ತೊಗರಿ ಬೆಳೆಯಲ್ಲಿ 20% ಅಧಿಕ ಇಳುವರಿಗೆ ಹೊಸ ತಂತ್ರಜ್ಞಾನ.
ತೊಗರಿಯ ತವರು ಭಾರತವಾಗಿದ್ದು ಜಗತ್ತಿನ ಶೇಕಡಾ 90 ರಷ್ಟು ತೊಗರಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ತೊಗರಿ ಬೆಳೆಯು ಕಲಬುರಗಿ ಜಿಲ್ಲೆಯ ಒಟ್ಟು ಕ್ಷೇತ್ರದ ಅರ್ಧದಷ್ಟನ್ನು ಹೊಂದಿರುವುದರಿಂದ ಇದನ್ನು “ತೊಗರಿಯ ಕಣಜ” ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿಯೇ ಜಿಯೋ ಟ್ಯಾಗ್ನ್ನು ಕೂಡಾ ಪಡೆದುಕೊಂಡು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಯನ್ನು ತಂದುಕೊಟ್ಟಿದೆ. ತೊಗರಿ ಬೆಳೆಯುವ ರೈತರು ವೈಜ್ಞಾನಿಕವಾಗಿ ಸಾಬೀತಾದ ಕೆಲವು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಪೋಷಕಾಂಶಗಳ ನಿರ್ವಹಣೆಯ ಜೊತೆಗೆ 20% ಅಧಿಕ ಇಳುವರಿಯನ್ನು ಪಡೆಯಬಹುದು. ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಬೇಳೆಕಾಳು…