ಅನಿವಾರ್ಯ ಕಳೆಗಳಿಗೆ ಮಾತ್ರ ಕಳೆನಾಶಕ ಬಳಸಿ.
ಕಳೆಗಳು ನಿಜವಾಗಿಯೂ ನಿಮಗೆ ತೊಂದರೆದಾಯಕವೇ? ಬೇರೆ ಯಾವುದೇ ರೀತಿಯಲ್ಲಿ ಇದನ್ನು ನಿಯಂತ್ರಿಸಲಿಕ್ಕೆ ಆಗುವುದಿಲ್ಲವೇ ಹಾಗಿರುವ ಕಳೆಗಳನ್ನು ಆಯ್ಕೆ ಮಾಡಿ ಅದೇ ಗುರಿಗೆ ಕಳೆ ನಾಶಕ ಬಳಸಿ ನಿಯಂತ್ರಣ ಮಾಡಿ. ಸುಲಭದಲ್ಲಿ ಒಮ್ಮೆ ಸ್ವಚ್ಚವಾಗುತ್ತದೆ ಎಂದು ಎಲ್ಲದಕ್ಕೂ ಹೊಡೆಯಬೇಡಿ. ಮೊನ್ನೆ ಇದೇ ಪುಟದಲ್ಲಿ ಕಳೆನಾಶಕ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಕೆಲವು ವಿಚಾರಗಳನ್ನು ಹೇಳಲಾಗಿತ್ತು. ಕೆಲವರು ಇದರ ಬಗ್ಗೆ ಬಹಳ ವಿರೋಧ ವ್ಯಕ್ತಪಡಿಸಿದ್ದಾರೆ. ಇವರು ಲೇಖನವನ್ನು ಪೂರ್ತಿ ಓದಲಿಲ್ಲ ಎಂಬುದು ಸಸ್ಯವಾದರೂ, ಅವರ ಕಳಕಳಿ ಬಗ್ಗೆ ಮೆಚ್ಚುಗೆ…