ದಾಳಿಂಬೆಯ ಹೊಸ ಹೈಬ್ರೀಡ್ ತಳಿ.
ದಾಳಿಂಬೆ ಬೆಳೆಗಾರರಿಗೆ ಅಧಿಕ ಇಳುವರಿ ನೀಡಬಲ್ಲ, ಆಕರ್ಷಕ ಬಣ್ಣದ ತಳಿಯಾಗಿ ಪರಿಚಯಿಸಲ್ಪಟ್ಟದ್ದು ಸೋಲಾಪುರ ಲಾಲ್. ಭಾರತ ಸರಕಾರದ ಕೃಷಿ ಅನುಸಂಧಾನ ಪರಿಷತ್ತು ದಾಳಿಂಬೆ ಬೆಳೆ ಕುರಿತಂತೆ ಸಂಶೋಧನೆ ನಡೆಸುವುದಕ್ಕಾಗಿ ಮಹಾರಾಷ್ಟ್ರದ ಸೋಲಾಪುರದಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದೆ. ಇಲ್ಲಿಂದ ಬಿಡುಗಡೆಯಾದ ಅಧಿಕ ಪೋಷಕಾಂಶ ಒಳಗೊಂಡ ಹೈಬ್ರೀಡ್ ದಾಳಿಂಬೆ ಸೋಲಾಪುರ ಲಾಲ್. ಈ ಸಂಸ್ಥೆಯು ದಾಳಿಂಬೆ ಬೆಳೆಗಾರರಿಗೆ, ಬೇಸಾಯಕ್ಕೆ ಸೂಕ್ತವಾಗುವ ಬೇರೆ ಬೇರೆ ದಾಳಿಂಬೆ ತಳಿಗಳನ್ನು ಪರಿಚಯಿಸಿದೆ. ಮೊದಲಾಗಿ ಗಣೇಶ ತಳಿಯನ್ನು ಪರಿಚಯಿಸಿ ನಂತರ 2003 -04…