ಸಮಗ್ರ ಕೃಷಿ ಪದ್ದತಿಯಿಂದ ಕೃಷಿಕರ ಜೀವನ ಸುಬಧ್ರ.
ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ. ರೈತರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಆಧರಿಸಿ ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ. ಬೇಕಾಗುವ ಸಂಪನ್ಮೂಲಗಳು: ಈ ಕೃಷಿ ಪದ್ದತಿ ಅಳವಡಿಸಲು ರೈತನಿಗೆ ಬೇಕಾಗುವುದು ಲಭ್ಯವಿರುವ ನೀರು, ಜಮೀನು, ಕುಟುಂಬದ…