ಸಮಗ್ರ ಕೃಷಿ ಪದ್ದತಿಯಿಂದ ಕೃಷಿಕರ ಜೀವನ ಸುಬಧ್ರ.

ಸಮಗ್ರ ಕೃಷಿ ಯಲ್ಲಿ ಆಡು ಕುರಿ ಸಾಕಾಣಿಕೆ ಲಾಭದ್ದು- Goat and sheep farming is profitable in integrated farming

ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ.
   

  •  ರೈತರು ತಮ್ಮಲ್ಲಿರುವ  ಸಂಪನ್ಮೂಲಗಳನ್ನು ಆಧರಿಸಿ  ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು.
  • ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ.

ಬೇಕಾಗುವ ಸಂಪನ್ಮೂಲಗಳು:

  • ಕೃಷಿ ಪದ್ದತಿ ಅಳವಡಿಸಲು ರೈತನಿಗೆ  ಬೇಕಾಗುವುದು ಲಭ್ಯವಿರುವ  ನೀರು, ಜಮೀನು, ಕುಟುಂಬದ ಆಳುಗಳು.
  • ಜಮೀನಿನಲ್ಲಿ ಉತ್ಪಾದಿಸಿದ ವಸ್ತುಗಳ ಸಮರ್ಪಕ ಬಳಕೆ ಆಗುತ್ತದೆ.
  • ಪದ್ದತಿಯಲ್ಲಿ ಬೆಳೆ ಮತ್ತು ಉಪಕಸುಬುಗಳ ಮಧ್ಯ ಪೂರಕವಾದ ಸಂಬಂಧವಿರುವುದರಿಂದ   ಅಧಿಕ ನಿವ್ವಳ ಲಾಭಗಳಿಸಬಹುದು.
  • ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ ನಿರುದ್ಯೊಗ ಸಮಸ್ಯೆದೂರವಾಗುತ್ತದೆ.
  • ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ.
  • ಮಣಿನ ಆರೊಗ್ಯ ಸುಧಾರಣೆಯಾಗುತ್ತದೆ,ಜೊತೆಗೆ ಬೇಸಾಯದ ವೆಚ್ಚ ಕಡಿಮೆಯಾಗುತ್ತದೆ.
  • ವರ್ಷವಿಡೀ ಆದಾಯದ ಮೂಲ ಇರುತ್ತದೆ.

ಏನೆಲ್ಲಾ ಮಾಡಬಹುದು:

ಸಮಗ್ರ ಕೃಷಿ ಪದ್ದತಿ  ಕೃಷಿ ಜೊತೆಗೆ ಜೇನು ಸಾಕಾಣಿಕೆ ಲಾಭದಾಯಕ- Agriculture and bee keeping
  •  ರೈತ ತನ್ನ ಬೆಳೆಗಳ ಜೊತೆಗೆ ಎರೆಹುಳು ಗೊಬ್ಬರ ತಯಾರಿಸುವುದು, ಹ್ಯೆನುಗಾರಿಕೆ ಮತ್ತು ಜ್ಯೆವಿಕ ಅನಿಲ ಘಟಕ ಮುಂತಾದವುಗಳನ್ನು ಅಳವಡಿಸಿಕಂಡಾಗ, ಹ್ಯೆನುಗಾರಿಕೆಯಿಂದ ದನಗಳ ಸಗಣಿ,ಮೂತ್ರಇತ್ಯಾದಿ ಕಸ ಕಡ್ಡಿ ಬೆಳೆ ಅವಶೇಷಗಳನ್ನು ಎರೆಹುಳು ತಯಾರಿಕೆಗೆ ಉಪಯೋಗಿಸಬಹುದು.
  • ಎರೆಹುಳು ಗೊಬ್ಬರವನ್ನು ಮರಳಿ ಮಣ್ಣಿಗೆ ಹಾಕಿ ಬೆಳೆ ಉತ್ಪಾದಕತೆ ಹೆಚ್ಚಿಸಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು.
  • ದನಗಳ ಸಗಣಿಯನ್ನು ಗೋಬರಗ್ಯಾಸ ಘಟಕಕ್ಕೆ ಉಪಯೋಗಿಸಿ ಅದರಿಂದ ಬಂದ ಅನಿಲವನ್ನು ಅಡುಗೆ  ಮನೆಗೆ ಮತ್ತು ದೀಪ ಉರಿಸಲು ಉಪಯೋಗಿಸಬಹುದು
  • ಅನಿಲ ಘಟಕದಿಂದ ಹೊರಬಂದ ಸಗಣಿ ಅಂಶವನ್ನು ಗೊಬ್ಬರವಾಗಿ ಬೆಳೆ ಬೆಳೆಯಲು ಮತ್ತು ಕಾಂಪೋಸ್ಟ ತಯಾರಿಕೆಗೆ ಬಳಸಬಹುದು.

ಕೃಷಿ ಪೂರಕ ಕಸುಬುಗಳು:

ಸಮಗ್ರ ಕೃಷಿ ಪದ್ದತಿ  ಕೃಷಿ ಜೊತೆಗೆ ಕೋಳಿ  ಸಾಕಾಣಿಕೆ ಲಾಭದಾಯಕ- Agriculture and poultry farming
  • ಕೋಳಿ ಸಾಕಾಣಿಕೆ. ಅಣಬೆ ಬೇಸಾಯ,ಹ್ಯೆನುಗಾರಿಕೆ, ಆಡು ಕುರಿ ಸಾಕಣೆ ,ರೇಶ್ಮೆ ವ್ಯವಸಾಯ,ಮೀನುಗಾರಿಕೆ, ಜೇನುಸಾಕಣೆ ,ಅಜೋಲ್ಲ,ಪಶು ಮೇವು ತಯಾರಿಕೆ ಮುಂತಾದವುಗಳ ಬಗ್ಗೆ ತರಬೇತಿ ಪಡೆದು ಅದನ್ನು ಅಳವಡಿಸಿಕೊಂಡರೆ ಬಹಳ ಲಾಭವಿದೆ.
  • ನಾವು ತರಬೇತಿ ಪದೆದು ಬೇರೆಯವರಿಗೂ ತರಬೇತಿ ಕೊಡಬಹುದು.
  • ಸಣ್ಣ ಮತ್ತು ಅತಿ ಸಣ್ಣ  ಹಿಡುವಳಿದಾರರು ಕಡಿಮೆ ಜಮೀನಿನಲ್ಲಿ ಹೊಂದಿಕೊಳ್ಳುವಂತೆ ಉಪಕಸುಬುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಇದಲ್ಲದೆ ಇಂಥ ಹತ್ತಾರು ಕಸುಬುಗಳನ್ನು ಆಯ್ಕೆ ಮಾಡಬಹುದು.
  • ಲಾಭ ಬರುವ ಉಪಕಸುಬುಗಳನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಬಹುದು.
  • ಬೆಳೆ ಪದ್ದತಿಯ ಉತ್ಪನ್ನಗಳು ಉಪಕಸುಬುಗಳಲ್ಲಿ ಮತ್ತು ಉಪಕಸುಬುಗಳ ಉತ್ಪನ್ನಗಳು ಬೆಳೆ ಉತ್ಪಾದನೆಯಲ್ಲಿ ಉಪಯೋಗಿಸಲ್ಪಡುವುದರಿಂದ ತಾಂತ್ರಿಕತೆಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೊದಾಣಿಕೆ ಅಗತ್ಯ.

ಹ್ಯೆನುಗಾರಿಕೆ ಮತ್ತು ಕೋಳಿಸಾಗಾಣಿಕೆಯಿಂದ ಬರುವ ಸಾವಯವಗೊಬ್ಬರವನ್ನು ಬೆಳೆ ಉತ್ಪಾದನೆಯಲ್ಲಿ ಬಳಸಿ ರಸ ಗೊಬ್ಬರಗಳ ಪ್ರಮಾಣವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ಆಡು ಸಾಕಾಣಿಕೆಯಿಂದ ಕೃಷಿಗೂ ಗೊಬ್ಬರ ಲಾಭ.ಆದಾಯವೂ ಇದೆ. Agriculture and goat farming

ಒಣ ಭೂಮಿ ಕೃಷಿಯೊಂದಿಗೆ:         

  • ಒಣ ಬೇಸಾಯ ಪ್ರದೇಶಗಳಲ್ಲಿ ಮಳೆ ಕಡಿಮೆ,ಆದ್ದರಿಂದ ನೀರಿನಕೊರತೆ ಸಾಮಾನ್ಯ.
  • ಮಳೆ ನೀರು ಶೇಖರಣೆಗಾಗಿ ಕೃಷಿ ಹೊಂಡಗಳನ್ನು ನಿರ್ಮಿಸಬೇಕು.
  • ಹನಿ ನೀರಾವರಿ ಪದ್ದತಿ ಬಳಸುವುದು ಉತ್ತಮ. ಹಿಂಗಾರಿನಲ್ಲಿಕುಸುಬೆ+ಕಡಲೆ(1:3), ಸಜ್ಜೆ+ಶೇಂಗಾ ಮತ್ತು ಸೂರ್ಯಕಾಂತಿ+ಶೇಂಗಾ ಬೆಳೆ ಪದ್ದತಿಗಳು ಲಾಭದಾಯಕ
  • ಇವುಗಳ ಜೊತೆಗೆ ದಾಳಿಂಬೆ ಗಿಡ, ಬಾರೆ, ಚಿಕ್ಕುಇತ್ಯಾದಿ ಬೆಳೆಯಬಹುದು.
  • ಬದುಗಳ ಮೇಲೆ ಮೇವಿನ ಗಿಡಗಳನ್ನು ಬೆಳೆದು ಹೈನುಗಾರಿಕೆಯನ್ನು ಮಾಡಬಹುದು.

 ಮಲೆನಾಡು ಕರಾವಳಿಯಲ್ಲಿ:

  • ಉತ್ತರಕನ್ನಡ, ಶಿವಮೋಗ್ಗ,ಹಾಸನ,ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಭತ್ತ,ಕಬ್ಬು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ,ತೆಂಗು,ಮೆಣಸು ಇತ್ಯಾದಿ ಲಾಭದಾಯಕ ಬೆಳೆಗಳಾಗಿವೆ.
  • ಇವುಗಳ ಜೊತೆಗೆ ಮೀನು ಸಾಕಾಣಿಕೆ, ರೇಷ್ಮೆ, ಜೇನು ಸಾಕಾಣಿಕೆ, ಅಜೋಲ್ಲ, ಹೈನುಗಾರಿಕೆ, ತರಕಾರಿ ಬೆಳೆಗಳು,ಅನಾನಾಸು ಕೃಷಿ  ಮುಂತಾದ ಮುಂತಾದವುಗಳನ್ನು ಮಾಡಿದರೆ ಆರ್ಥಿಕವಾಗಿ ಸಶಕ್ತರಾಗಬಹುದು.
  •  ಭತ್ತ ಬೆಳೆಯುವ ಪ್ರದೇಶಗಳಲ್ಲಿ ಅದರ ಜೊತೆಗೆ  ಅಣಬೆ ಬೇಸಾಯ, ಕೋಳಿ ಸಾಕಾಣೆ ಮಾಡುವುದರಿಂದ ರೈತನ ಆದಾಯವನ್ನು15-20% ಹೆಚ್ಚಿಸಬಹುದು.
  • ರಾಸಾಯನಿಕಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿ ವೆಚ್ಚ ತಗ್ಗಿಸಬಹುದು.
  • ಅರೆಮಲೆನಾಡು ಪ್ರದೇಶಗಳಾದ ಧಾರವಾಡ,ಹಾವೇರಿ, ಬೆಳಗಾವಿ ಜಿಲ್ಲೆಗಳ ಬಹು ಭಾಗಗಳಲ್ಲಿ ಮೆಣಸಿನಕಾಯಿ+ಜಯಧರ ಹತ್ತಿ, ತೊಗರಿ+ಸೊಯಾ/ಅವರೆ/ಶೇಂಗಾ/ಕಡಲೆ, ತೊಗರಿ+ಶೇಂಗಾ/ಬಟಾಣಿಜೊಳ, ಗೊವಿನಜೊಳ+ತೊಗರಿ, ಬಿಟಿ ಹತ್ತಿ ಬೆಳೆ ಪದ್ದತಿಗಳು ಲಾಭದಾಯಕವಾಗಿವೆ.
  • ಕುರಿ ಆಡು ಸಾಕಣೆ ಇದಕ್ಕೆ  ಪೂರಕವಾಗಿರುತ್ತದೆ. ರೇಶ್ಮೆ ವ್ಯವಸಾಯ ಇದ್ದರೆ ಅದರ ಜೊತೆಗೆ ಆಡು ಕುರಿ ಸಾಕನೆಯನ್ನೂ ಮಾಡಬಹುದು..

ಇತ್ತೀಚಿನ ದಿನಗಳಲ್ಲಿ ಮಿಶ್ರ ಕೃಷಿ/ ಕೃಷಿ ಪೂರಕ ಕಸುಬುಗಳ ಮೂಲಕ ರೈತ ತನ್ನ ಆದಾಯವನ್ನು ಹೆಚ್ಚು ಮಾಡಿಕೊಳ್ಳಲೇ ಬೇಕಾಗುತ್ತದೆ. ಒಂದೇ ಬೆಳೆಯನ್ನು ಅವಲಂಭಿಸಿದ್ದರೆ ಅದು ಎನಾದರೂ ಮಾರುಕಟ್ಟೆ, ಹವಾಮಾನ ವೈಪರೀತ್ಯ  ಇನ್ನಿತರ ಕಾರಣಗಳಿಂದ ಹಾಳಾದರೆ  ಉಳಿದ ಕೃಷಿ/ಕಸುಬು ಅವನ ಕೈ ಹಿಡಿಯುತ್ತದೆ. ಇದರ ಬಗ್ಗೆ ಸಲಹೆ ಮತ್ತು ತಾಂತ್ರಿಕ ಮಾಹಿತಿಗೆ ಸಾಕಷ್ಟು ವ್ಯವಸ್ಥೆಗಳು ಇವೆ. ಇದಕ್ಕೆ ಸರಕಾರದ ಪ್ರೋತ್ಸಾಹವೂ ಇದೆ.

 
ಲೇಖಕರು1)  ಶೃತಿಎಸ್. ಎಮ್ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ. ಮತ್ತು 2)  ಮಾನಸ ಎಲ್.ಪಿ. ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ.
 

Leave a Reply

Your email address will not be published. Required fields are marked *

error: Content is protected !!