ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ ದೊರೆಯುತ್ತದೆ. ಆದ ಕಾರಣ ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು.
ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್ ಗಳು ಹಾಕಿದ ಹಿಕ್ಕೆಯಾಗಿರುತ್ತದೆ. ಇದು ನೀರು ಬಿದ್ದ ತಕ್ಷಣ ಗೊಬ್ಬರವಾಗಿ ಮಣ್ಣಿಗೆ ಸೇರಿಕೊಳ್ಳುತ್ತದೆ. ನೆಲದಲ್ಲಿ ಬಿದ್ದ ಹುಲ್ಲು ಇತ್ಯಾದಿ ಕಳೆಯ ಬೀಜಗಳು ತಕ್ಷಣ ಹುಟ್ಟಿಕೊಳ್ಳುತ್ತವೆ. ತೆಂಗು ಅಡಿಕೆ ಸೇರಿದಂತೆ ಎಲ್ಲಾ ಬೆಳೆಗಳಿಗೂ ಒಂದು ಹೊಸ ಚೈತನ್ಯ ಉಂಟಾಗುತ್ತದೆ. ತಂಪಿನ ವಾತಾವರಣದಿಂದಾಗಿ ತೆಂಗಿನಲ್ಲಿ ಕಾಯಿ ಕಚ್ಚುವಿಕೆ ಹೆಚ್ಚಾಗುತ್ತದೆ. ಹಾಗಾಗಿ ಮೊದಲ ಮಳೆ ನೀರು ಬಹಳ ಉತ್ತಮ ಪೋಷಕಾಂಶ. ಪತ್ರ ಸಿಂಚನ (Foliar spray) ಮಾಡಿದಾಗ ಸಸ್ಯಗಳು ಹೇಗೆ ಪ್ರತಿಕ್ರಿಯಿಸುತ್ತದೆಯೋ ಅದೇ ಕೆಲಸವನ್ನು ಮೊದಲ ಮಳೆ ಮಾಡುತ್ತದೆ. ಸಸ್ಯಗಳಿಗೆಲ್ಲಾ ಜೀವ ಕಳೆ ಬರುತ್ತದೆ.
ಮೊದಲ ಮಳೆ ಬಂದಾಗ ಅನುಭವ.
- ಪ್ರಾರಂಭದ (pre monsoon) ಮಳೆ ಬಂದಾಗ ಮಣ್ಣಿನಲ್ಲಿ ವಾಸನೆಗಳನ್ನು ನಾವು ಗಮನಿಸಬಹುದು.
- ಒಟ್ಟು ಮೂರು ರೀತಿಯ ಸುವಾಸನೆ ಬರುತ್ತದೆ.
- ಒಂದು ಮಣ್ಣಿನ ವಾಸನೆ. ಇದಕ್ಕೆ ಕಾರಣ ಶುಷ್ಕ ಮಣ್ಣಿನಲ್ಲಿ ಇರುವ ಆ್ಯಕ್ಟಿನೋಮೈಸೆಟ್ಸ್‍ಗಳು.(Actinomycetes)
- ಇವು ಶುಷ್ಕ (ಒಣ)ಮಣ್ಣಿನಲ್ಲಿ ಬೀಜಾಣು ರೂಪದಲ್ಲಿ ಇರುತ್ತಾ ಜಿಯೋಸ್ಮಿನ್ ಎಂಬ ರಾಸಾಯನಿಕ ವಸ್ತುವನ್ನು ಉತ್ಪಾದಿಸಿ ಮಣ್ಣಿಗೆ ವಿಸರ್ಜಿಸುತ್ತಿರುತ್ತವೆ.
- ಈ ಜಿಯೋಸ್ಮಿನ್ ಮೇಲೆ ನೀರು ಬಿದ್ದಾಗ ಅದು ವಾಸನೆಯನ್ನು ಉಂಟು ಮಾಡುತ್ತದೆ.
- ಎರಡನೆಯದು ಸಿಡಿಲು-ಮಿಂಚುಗಳ ಪರಿಣಾಮದಿಂದ ಓಝೋನ್ ಉತ್ಪಾದನೆಯಾಗುತ್ತದೆ.
- ಅದು ಗಾಳಿ- ಮಳೆಯ ಜೊತೆಗೆ ನೆಲವನ್ನು ತಲುಪುತ್ತದೆ. ಆಗ ಒಂದು ರೀತಿಯ ವಾಸನೆ ಬರುತ್ತದೆ.
- ಮೂರನೆಯದಾಗಿ ಸಸ್ಯಗಳು ಉತ್ಪತ್ತಿ ಮಾಡಿ ಬಿಡುಗಡೆಗೊಳಿಸುವ ತೈಲಾಂಶ.
- ಇವು ವಾತಾವರಣದಲ್ಲಿ ಸೇರಿಕೊಂಡಿರುತ್ತವೆ.
- ಯಾವಾಗ ಮಳೆ ಬರುತ್ತದೆಯೋ ಆಗ ವಿವಿಧ ರಾಸಾಯನಿಕಗಳ ಜೊತೆ ಬೆರೆತು ಅದು ಭೂಮಿಗೆ ತಲುಪುತ್ತದೆ.
- ಆಗ ಒಂದು ರೀತಿಯ ಸುವಾಸನೆ ಉಂಟಾಗುತ್ತದೆ.
ಮಳೆ ನೀರಿನಲ್ಲೇನಿದೆ:
- ಪ್ರಾರಂಭದ ಮಳೆ ನೀರಿನಲ್ಲಿ ಭೂಮಿಗೆ ದೊರೆಯುವ ಪೋಷಕಾಂಶಗಳ ಬಗ್ಗೆ ಅಂತಹ ಅಧ್ಯಯನಗಳು ಆದಂತಿಲ್ಲ.
- ಆದರೂ ಕೆಲವು ವಿಚಾರಗಳ ಬಗ್ಗೆ ಮಾಹಿತಿಗಳಿವೆ.
- ಮಳೆ ನೀರು 100% ಮೆದು ನೀರು. ಇದರಲ್ಲಿ ಜೈವಿಕವಾಗಿ ಲಭ್ಯವಾಗುವಂತ ಸಾರಜನಕ ಹೇರಳವಾಗಿ ದೊರೆಯುತ್ತದೆ.
- ಅಲ್ಲದೆ ಇತರ ಪೋಷಕಾಂಶಗಳು ಲಘು ಪೋಷಕಾಂಶಗಳು, ಬೆಳವಣಿಗೆ ಪ್ರಚೋದಕಗಳು ಸಹ ಇರುತ್ತವೆ.
- ಇದು ನಂತರದ ಮಳೆ ನೀರಿನಲ್ಲಿ ಇದ್ದರೂ ಸಹ ಅದನ್ನು ಸಸ್ಯಗಳು ನೇರವಾಗಿ ಬಳಕೆ ಮಾಡಿಕೊಳ್ಳುವ ರೂಪದಲ್ಲಿರುವುದಿಲ್ಲ.
- ಅದನ್ನು ಸಸ್ಯಗಳ ಮೂಲಕ (ಸ್ಥಿರೀಕರಣ ಕ್ರಿಯೆ) ಬಳಕೆ ಮಾಡಿಕೊಳ್ಳುತ್ತವೆ.
ಬೇಸಿಗೆಯಲ್ಲಿ ಎಲೆಗಳ ಮೇಲೆ ಧೂಳು-ಕೆಲವು ಕಶ್ಮಲಗಳು ಅಂಟಿರುತ್ತದೆ. ಅದನ್ನು ಮಳೆ ಹನಿಗಳು ತೊಳೆದು ಬಿಡುತ್ತದೆ. ಆಗ ಸಸ್ಯಗಳ ಎಲೆಗಳಿಗೆ ಸೂರ್ಯನ ಬೆಳಕು ಹೇರಳವಾಗಿ ದೊರೆತು ದ್ಯುತಿ ಸಂಸ್ಲೇಷಣ ಕ್ರಿಯೆ ಉತ್ತಮವಾಗಿ, ಬೇಗ ಬೆಳವಣಿಗೆ ಹೊಂದುತ್ತವೆ. ಹಚ್ಚ ಹಸುರಾಗುತ್ತವೆ.
- ಪ್ರಾರಂಭದ ಮಳೆ ಬಿದ್ದಾಗ ಬೇಸಿಗೆಯ ಬಿಸಿಗೆ ಸತ್ತು ಹೋದ ಕೆಲವು ಹುಲ್ಲು ಗಿಡಗಳ ಬೇರುಗಳ ರಂದ್ರಗಳ ಮೂಲಕ ನೀರು ಸಂಚರಿಸಿ ನೆಲವನ್ನು ಮೆದು ಮಾಡುತ್ತದೆ.
- ಇದು ಸಸ್ಯಗಳಿಗೆ ತ್ವರಿತ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ.
ಮೊದಲ ಮಳೆ ನೀರಿನ ಸದುಪಯೋಗ.
- ಪ್ರಾರಂಭದ ಮಳೆ ಎಷ್ಟು ಬಂದರೂ ಮಳೆಗಾಲದಷ್ಟು ಬರುವುದಿಲ್ಲ.
- ಹಳ್ಳ ತೋಡುಗಳ ಮೂಲಕ ಹೊಳೆ ತಲುಪುವುದಿಲ್ಲ.
- ಹೆಚ್ಚೆಂದರೆ ಸಣ್ಣ ಪುಟ್ಟ ಕಾಲುವೆಗಳಲ್ಲಿ ತುಂಬಬಹುದು.
- ಇದನ್ನು ಯಾವುದೇ ಕಾರಣಕ್ಕೂ ಹೊಲದಿಂದ ಹೊರ ಹರಿಯದಂತೆ,
- ತಡೆದು ಭೂಮಿಯಲ್ಲೇ ಇಂಗುವಂತೆ ಮಾಡುವುದು ಹೊಲದ ಮಣ್ಣಿನ ಫಲವತ್ತತೆ ಹೆಚ್ಚಿಸುವ ದೃಷ್ಟಿಯಿಂದ ಅಗತ್ಯ.
- ಮೊದಲ ಮಳೆಯ ನೀರಿನಲ್ಲಿ ಬೆಳೆ ಪೋಷಕ ಅಧಿಕ.
- ಈ ಸತ್ವಾಂಶಗಳನ್ನು ಒದಗಿಸುವ ಯಾವುದೇ ಕೃತಕ ಪೋಷಕಾಂಶಗಳನ್ನು ನಾವು ತಯಾರಿಸುವುದು ತುಂಬಾ ದುಬಾರಿಯಾದೀತು.
- ಹೊರ ನೋಟಕ್ಕೆ ಇದು ಬರೇ ನೀರೇ ಆದರೂ ಅದು ನೆಲಕ್ಕೆ ಬೀಳುವಾಗ ಮೇಲ್ಮಣ್ಣು ಮತ್ತು ಸಾವಯವ ತ್ಯಾಜ್ಯಗಳನ್ನು ಒಟ್ಟಿಗೆ ಸಾಗಿಸುತ್ತದೆ.
- ಸಾವಯವ ತ್ಯಾಜ್ಯಗಳು, ಬೇಸಿಗೆಯಲ್ಲಿ ಗಾಳಿಯ ಮೂಲಕ ಸವಕಳಿಯಾದ ಮೇಲ್ಮಣ್ಣು ಎಲ್ಲವೂ ಸೇರಿ ಅದು ಫಲತ್ತತೆಯನ್ನು ಒಳಗೊಂಡ ನೀರಾಗುತ್ತದೆ.
- ಆದ ಕಾರಣ ಈ ನೀರನ್ನು ನೆಲಕ್ಕೆ ಇಂಗುವಂತೆ ಮಾಡುವುದು ಅತ್ಯವಶ್ಯಕ.
- ಇದು ಬೆಳೆಗಳಿಗೆ ದೊರೆತರೆ ಭಾರೀ ಫಲಿತಾಂಶ ಗುರುತಿಸಬಹುದು.
- ನಿಮ್ಮ ಹೊಲದ ನೀರು ಹರಿಯುವ ಕಾಲುವೆ ಯನ್ನು ಮಳೆಬರುವ ಮುಂಚೆ ಸ್ವಚ್ಚ ಮಾಡಿ ಇಡಬೇಡಿ.
- ಮಳೆಗೆ ಬಂದ ನೀರು-ಸಾವಯವ ತ್ಯಾಜ್ಯಗಳು ಇದರಲ್ಲಿ ಅಲ್ಲಲ್ಲಿ ಬಂಧಿಯಾಗಿ ಸಂಗ್ರಹವಾಗಿ ಅದು ಮಣ್ಣಿಗೆ ಅಥವಾ ಬೆಳೆಯ ಬೇರುಗಳಿಗೆ ದೊರೆಯುವಂತಾಗಲಿ.
- ಪ್ರಾರಂಭದ ಮಳೆಯ ನೀರು , ತರಗಲೆ ಮುಂತಾದ ಸಾವಯವ ತ್ಯಾಜ್ಯಗಳು ಹೊಲದಿಂದ ಹೊರ ಹೋಗಬಿಡಬೇಡಿ.
- ನೀರು ಇಂಗಲೂ ಇದು ಸಹಾಯಕ. ಸಣ್ಣ ಮನೆ ಹಿತ್ತಲಿನ ಜನ ಮಳೆ ನೀರನ್ನು ಸಂಗ್ರಹಿಸಿ ಕೈತೋಟಕ್ಕೆ ಬಳಸಿ. ಇದು ಒಂದು ಅಮೃತ.
ಮಳೆಯ ನೀರಿನ ಔಷಧ ಗುಣ:
- ಮಳೆ ನೀರನ್ನು ಭೂಮಿಗೆ ಬೀಳುವ ಮುನ್ನ ಸಂಗ್ರಹಿಸಿದರೆ ಅದು ಡಿಸ್ಟಿಲ್ ವಾಟರ್ .
- ಇದನ್ನು ಕೆಲವು ಚಿಕಿತ್ಸೆಗೂ ಬಳಕೆ ಮಾಡುತ್ತಾರೆ.
- ನಮ್ಮಲ್ಲಿ ಹಿರಿಯರು ಮೈ ಮೇಲೆ ಬೆವರುಸಾಲೆ ಬಿದ್ದರೆ ಮೊದಲ ಮಳೆಯ ನೀರಿನಲ್ಲಿ ನೆನೆಯಲು ಹೇಳುತ್ತಾರೆ.
- ಅದು ನಿಜ. ಮೊದಲ ಮಳೆ ನೀರಿನಲ್ಲಿ ನೆನೆದಾಗ ಬೆವರುಸಾಲೆ ಮಾಸುತ್ತದೆ.
- ದೇಹದಲ್ಲಿರುವ ಅತಿಯಾದ ಉಷ್ಣವನ್ನು ಇದು ಹೊರ ಹಾಕುತ್ತದೆ.
ಮುಂಗಾರು ಪೂರ್ವದ ಮಳೆ ನೀರನ್ನು ಭೂಮಿಗೆ ಬೀಳುವ ಮೊದಲೇ ತಾಮ್ರದ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಅದನ್ನು ದಿನಾ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಖಾಯಿಲೆಗಳು ಗುಣಮುಖವಾಗುತ್ತದೆ ಎಂಬುದಾಗಿ ಸಾಂಪ್ರದಾಯಿಕ ವೈದ್ಯಕೀಯದಲ್ಲಿ ಹೇಳಲಾಗುತ್ತದೆ.
- ಅಲ್ಲದೆ ಕೆಲವೊಂದು ಸಸ್ಯಗಳ (ಬ್ರಾಹ್ಮಿ ಮುಂತಾದ)ಎಲೆ ಮೇಲೆ ಬಿದ್ದ ಮೊದಲ ಮಳೆ ನೀರನ್ನು ಸಂಗ್ರಹಿಸಿ ಔಷಧಿಯಾಗಿ ಬಳಸಲಾಗುತ್ತದೆ.
- ಈ ಜಲವನ್ನು ಒಂದರಿಂದ ಎರಡು ಚಮಚ ಸೇವಿಸುವುದರಿಂದ ಜಠರಕ್ಕೆ ಸಂಬಂಧಿಸಿದ ಕೆಲವು ವ್ಯಾಧಿಗಳನ್ನು ಗುಣ ಮಾಡಬಹುದಂತೆ.
- ಇದಿಷ್ಟೇ ಅಲ್ಲದೆ ಕೆಲವು ಬುಡಕಟ್ಟು ಜನಾಂಗದವರು ಈ ನೀರನ್ನು ಇನ್ನೂ ಬೇರೆ ಬೇರೆ ಉಪಯೋಗಗಳಿಗೆ ಬಳಕೆ ಮಾಡುವುದುಂಟಂತೆ.
ಅವೆಲ್ಲಾ ಹಾಗಿರಲಿ. ಕೃಷಿಕರಾದ ನಾವು ಮಾತ್ರ ಮೊದಲ ಮಳೆಯ ನೀರನ್ನು- ನೀರಿನೊಂದಿಗೆ ಸೇರಿಕೊಂಡು ಬರುವ ಮಣ್ಣು, ಸಾವಯವ ತ್ಯಾಜ್ಯಗಳನ್ನು ಸ್ವಲ್ಪವೂ ಹಾಳು ಮಾಡದೆ ಬಳಕೆ ಮಾಡಿಕೊಳ್ಳಬೇಕು.
https://waterfallmagazine.com
Hello to every one, the contents existing at this site are
in fact amazing for people knowledge, well, keep up the good work fellows.
My web blog: sql interview questions
Thank you,Please share and care