ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.
ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ ಸನ್ನಿವೇಶ ಬಂದಾಗ ರೋಗಕ್ಕೆ ತುತ್ತಾಗುತ್ತದೆ. ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ. ಇದಕ್ಕೆ ಕಾರಣ ಅವರ ನಿರ್ವಹಣೆ. ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ…