ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.

by | Jul 2, 2020 | Spice Crop (ಸಾಂಬಾರ ಬೆಳೆ), Pepper (ಕರಿಮೆಣಸು) | 0 comments

ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ  ಸನ್ನಿವೇಶ ಬಂದಾಗ ರೋಗಕ್ಕೆ  ತುತ್ತಾಗುತ್ತದೆ.

 • ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ.
 • ಇದಕ್ಕೆ ಕಾರಣ ಅವರ ನಿರ್ವಹಣೆ.
 • ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ ನೀರು ಚಲಿಸದೇ ನಿಂತರೆ ಆ ಬಳ್ಳಿಯ ಬೇರು ಕೊಳೆಯುತ್ತದೆ. ರೋಗ ಬರುತ್ತದೆ.
 • ರೋಗದ ಪ್ರಾರಂಭಿಕ ಚಿನ್ಹೆ ಎಲೆಯಲ್ಲಿ ಕಾಣಿಸುತ್ತದೆ.

ಆರೋಗ್ಯವಂತ ಬಳ್ಲಿ

ಹೇಗೆ ನಿರ್ವಹಣೆ ಮಾಡಬೇಕು:

 • ಮಳೆಗಾಲ ಪ್ರಾರಂಭವಾಗುವಾಗ ಮೆಣಸಿನ ಬಳ್ಳಿಯ ಎಲೆಗಳಿಗೆ ಸಿಂಪರಣೆ ಮಾಡಲೇ ಬೇಕು.
 • ಅಡಿಕೆ ಮರಗಳಿಗೆ ಬಿಡುವ ಬೋರ್ಡೋ ದ್ರಾವಣ ಇದಕ್ಕೂ ತಗಲಿದೆ ಅಷ್ಟೇ ಸಾಕು ಎಂದು ಬಿಡಬೇಡಿ.
 • ಮೆಣಸಿನ ಬಳ್ಳಿಗೆ ಎಲ್ಲಾ ಎಲೆಗಳಿಗೂ ಬೋರ್ಡೋ ದ್ರಾವಣ ತಗಲುವಂತೆ ಸಿಂಪರಣೆ ಮಾಡಲೇ ಬೇಕು.
 • ಅಧಿಕ ಒತ್ತಡದಲ್ಲಿ ಸಿಂಪಡಿಸಿದಾಗ ಎಲೆಗಳು ಅಲುಗಾಡಿ ಎರಡೂ ಭಾಗಕ್ಕೂ ದ್ರಾವಣ ತಗಲುತ್ತದೆ.
 • ಬೋರ್ಡೋ ದ್ರಾವಣವು ರೋಗಕಾರಕ ಶಿಲೀಂದ್ರದ ಪ್ರವೇಶವನ್ನು ತಡೆಯುತ್ತದೆ.
 • ಬುಡ ಭಾಗದಲ್ಲಿ ಹಬ್ಬಿರುವ ಬಳ್ಳಿಯನ್ನು  ತುಂಡು ಮಾಡಿ ತೆಗೆಯಬೇಕು, ಅಥವಾ ಅದನ್ನು ಎತ್ತಿ ಕಟ್ಟಬೇಕು.
 • ನೆಲದಲ್ಲಿ ಇರುವ ಎಲೆಗಳಲ್ಲಿ ಸ್ವಲ್ಪ ಕೊಳೆತ ಕಂಡು ಬಂದರೆ ಅದು ಇಡೀ ಬಳ್ಳಿಗೆ ಹಬ್ಬಿ ರೋಗ ಉಲ್ಬಣವಾಗುತ್ತದೆ.
ಕರಿಮೆಣಸಿನ ರೋಗ ಪ್ರಾರಂಭದ ಲಕ್ಷಣ

ಕರಿಮೆಣಸಿನ ರೋಗ ಪ್ರಾರಂಭದ ಲಕ್ಷಣ

ಬಳ್ಳಿಯ ಬುಡ ಭಾಗದ  ಬಳ್ಳಿ ಕಾಂಡಕ್ಕೆ  ಶೇ 1೦  ರ ಬೋರ್ಡೋ ಪೈಂಟ್ ಅನ್ನು ಲೇಪನವಾಗುವಂತೆ ಸಿಂಪಡಿಸಬೇಕು. ಅಥವಾ ಬ್ರಷ್ ಮೂಲಕ  ಪೈಂಟ್ ಮಾಡಬೇಕು. (1 ಕಿಲೋ ಸುಣ್ಣ ಮತ್ತು 1 ಕಿಲೋ ತುತ್ತೆ,10 ಲೀ. ನೀರು) .

 • ಬುಡ ಭಾಗಕ್ಕೆ ಬಳ್ಳಿಯ ಗಾತ್ರಕ್ಕನುಗುಣವಾಗಿ 1-3  ಲೀ. ತನಕ ಬೋರ್ಡೋ ದ್ರಾವಣವನ್ನು ಡ್ರೆಂಚಿಂಗ್ ಮಾಡಬೇಕು.

ಬೋರ್ಡೋ ದ್ರಾವಣವನ್ನು ಸಿಂಪಡಿಸುವಾಗ ಬರೇ ಎಲೆಯ ಮೇಲ್ಮೈ ಮಾತ್ರವಲ್ಲ, ಅಡಿ ಭಾಗಕ್ಕೆ  ಬೀಳುವಂತೆ ಅಗತ್ಯವಾಗಿ ಸಿಂಪರಣೆ ಮಾಡಬೇಕು. ಇದು ಹೆಚ್ಚು ಸಮಯ  ಅಂಟಿಕೊಂಡು ಉಳಿದು ರೋಗ ಬಾರದಂತೆ ರಕ್ಷಣೆ ಕೊಡುತ್ತದೆ.

ಸಿಂಪರಣೆಯ  ಉದ್ದೇಶ:

Spray should be like this

 • ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಎಲೆಗಳು ಕೊಳೆತು ಬರುವಂತಹ ರೋಗವಾದ ಶೀಘ್ರ ಸೊರಗು ರೋಗದ ಸಾಧ್ಯತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
 • ಶೀಘ್ರ ಸೊರಗು ರೋಗಕ್ಕೆ ಎಲೆ ಕೊಳೆತು ಉದುರಿ ಬೀಳುವುದು ಒಂದು ಕಾರಣ.
 • ಬಳ್ಳಿಯ ಬುಡ ಭಾಗಕ್ಕೆ  ಬೋರ್ಡೋ ಪೈಂಟ್ ಲೇಪನ ಮಾಡುವುದರಿಂದ  ಮಳೆ ಹನಿಗೆ ನೆಲದ ಮಣ್ಣು ತಗಲಿ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಬುಡ ಭಾಗದ ಸ್ವಚ್ಚತೆ:

Water should not accumulate

 • ಮಳೆಗಾಲದಲ್ಲಿ ಮೆಣಸಿನ ಬಳ್ಳಿ ಇರುವಲ್ಲಿ ನೀರು ಹಿಡಿದಿಟ್ಟುಕೊಳುವ ಯಾವುದೇ  ಸಾವಯವ ವಸ್ತುಗಳನ್ನು ಹಾಕಬೇಡಿ.
 • ಬುಡ ಭಾಗಕ್ಕೆ  ನೀರು ಯಾವ ಕಡೆಯಿಂದಲೂ ಒಳ ಪ್ರವೇಶಿಸದಂತೆ ಮಾಡಿ. ಬುಡ ಭಾಗದ ನೀರು ತಕ್ಷಣ ಇಳಿದು ಹೊರ ಹೋಗುವಂತೆ ಇರಲಿ.
 • ಮೆಣಸಿನ ಬಳ್ಳಿ ಇರುವ ಭಾಗ ಏರು ಸ್ಸ್ಥಿತಿಯಲ್ಲಿದ್ದು, ಎಷ್ಟೇ ಮಳೆ ಬಂದರೂ ಒಂದು ತೊಟ್ಟೂ ನೀರು ಅಲ್ಲಿ ತಂಗದಂತೆ ಇರಲಿ.
 •  ಮರಳು ಹೊರತಾಗಿ ಯಾವುದೇ ನೀರು ಹಿಡಿದಿಟ್ಟುಕೊಳ್ಳುವ ಮಣ್ಣು ಹಾಕಬಾರದು.

ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ:

Plastic mulching to base

 • ಮೆಣಸಿನ ಬಳ್ಳಿಯ ಬುಡಕ್ಕೆ ಪಾಲಿಥೀನ್ ಹಾಳೆಯನ್ನು ಹೊದಿಸಿ ಬುಡ ಭಾಗದಲ್ಲಿ  ನೀರು ನಿಲ್ಲದಂತೆ  ಮಾಡಬಹುದು.
 • ಇದನ್ನು ಉತ್ತಮ ಬೆಳೆಗಾರರೆಲ್ಲಾ ಮಾಡುತ್ತಾರೆ. ಇದರಿಂದ ಬುಡ  ಭಾಗದ ಮಣ್ಣು ಸಿಡಿದು ಬಳ್ಳಿಗೆ ಬೀಳುವುದಿಲ್ಲ.
 • ಬಹುತೇಕ ರೋಗ ಕಾರಕಗಳು ಮಣ್ಣ್ಣಿನ ಮೂಲಕ ಬಳ್ಳಿಗೆ ತಗಲುವ ಕಾರಣ ಈ ವಿಧಾನದಲ್ಲಿ ಅದನ್ನು ನಿಯಂತ್ರಿಸಬಹುದು.

ಈ ವಿಧಾನದಲ್ಲಿ ರೋಗ ಸಾಧ್ಯತೆಯನ್ನು ಬಹಳಷ್ಟು ಕಡಿಮೆ ಮಾಡಬಹುದು. ನಿರ್ವಹಣೆಯನ್ನು ರೋಗ ಬರುವುದಕ್ಕೆ ಮುಂಚೆ ಮಾಡಬೇಕು. ನಂತರ  ಯಾವುದೇ ಪ್ರಯೋಜನ ಇಲ್ಲ.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!