ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.
ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…