ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.
ಅಡಿಕೆ ಮರದ ಸುಳಿ ಏನೋ ವ್ಯತ್ಯಾಸವಾದಂತೆ ಕಂಡರೆ, ಕೆಂಪು ಮೂತಿ ಹುಳವೂ ಉಪಟಳ ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ. ಕಳೆದ ಎರಡು ವರ್ಷಗಳಿಂದ ಅಡಿಕೆ ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ…