ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
error: Content is protected !!