ಕರಿಮೆಣಸು ಬೆಳೆಗಾರರು ನೋಡಬೇಕಾದ ಮಾದರಿ ತೋಟ ಇದು.
ತೀರ್ಥಹಳ್ಳಿಯ ಗರ್ತಿಕೆರೆ ಸಮೀಪದ ಕಾರ್ಗೋಡ್ಲುವಿನಲ್ಲಿ ಶ್ರೀಯುತ ಜೋಸೆಪ್ ಚಾಕೋ ಎಂಬವರು ಕರಿಮೆಣಸಿನ ಮಾದರಿಯ ತೋಟ ಮಾಡಿದ್ದಾರೆ. ಬಹುಷಃ ಕರಿಮೆಣಸಿನ ತೋಟ ಮಾಡಿದರೆ ಅದರಲ್ಲಿ ವರ್ಷಕ್ಕೆ 10-15% ರೋಗ ಬರುವ ಸಾಧ್ಯತೆ ಹೆಚ್ಚು. ಅದರೆ ಇಲ್ಲಿ ಹಾಗಿಲ್ಲ. 3000 ಮೆಣಸಿನ ಬಳ್ಳಿಗಳಲ್ಲಿ ಶೇ.1 ಸರಿಪಡಿಸಬಹುದಾದ ರೋಗ ಲಕ್ಷಣಗಳನ್ನು ಕಾಣಬಹುದು. 2018 ರಲ್ಲಿ ನಾನು ಇದೇ ತೋಟಕ್ಕೆ ಹೋಗಿದ್ದೆ. ಆಗ ಅಲ್ಲಿ ಹುಡುಕಿದರೂ ಒಂದು ಬಳ್ಳಿಯೂ ರೋಗ ತಗಲಿದ್ದು ಸಿಕ್ಕಿರಲಿಲ್ಲ. ಈಗಲೂ ಅಷ್ಟೇ ಒಂದೆರಡು ಬಳ್ಳಿಗಳಲ್ಲಿ ಕೆಲವು ಎಲೆಗಳು ಹಳದಿಯಾದದ್ದು…